ಬಳ್ಳಾರಿ.ಜೂ.10: ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮುಂಗಾರು ಮಳೆ ರೈತರ ಮೊಗದಲ್ಲಿ ಸಂತಸ ಅರಳಿಸಿದೆ. ಹಲವಾರು ವರ್ಷಗಳಿಂದ ಕೈಕೊಡುತ್ತಿದ್ದ ಮಳೆ ಈ ಭಾರಿ ಉತ್ತಮವಾಗಿ ಸುರಿಯುತ್ತಿದ್ದು ಖಷ್ಕಿ ಜಮೀನಿನ ರೈತರು ಹತ್ತಿ, ಸೂರ್ಯಕಾಂತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಯನ್ನು ಆರಂಭಿಸಿದ್ದಾರೆ.
ಅದರಂತೆ ತೊಗರಿ ಬೆಳೆಯನ್ನು ಬಿತ್ತನೆ ಮಾಡಲು ರೈತರು ಧನಲಕ್ಷಿö್ಮ ತೊಗರಿ ಬಿತ್ತನೆ ಬೀಜಕ್ಕಾಗಿ ನಗರದ ಕೆ.ಸಿ ರಸ್ತೆಯ ಸೂರ್ಯ ಬೀಜದ ಅಂಗಡಿ ಮುಂದೆ ಮುಂಜಾನೆಯಿ0ದಲೇ ಸಾಲುಗಟ್ಟಿ ನಿಂತು ಕೊಂಡಿರುತ್ತಾರೆ. ಕೇವಲ ನಲವತ್ತು ಜನಕ್ಕೆ ಮಾತ್ರ ಟೋಕನ್ ನೀಡಿ ಅವರಿಗಷ್ಟೆ ಬೀಜವನ್ನು ಒದಗಿಸುತ್ತಿರುವ ಈ ಬೀಜದ ಅಂಗಡಿಯವರು ಬೇಡಿಕೆಗೆ ತಕ್ಕಂತೆ ದಿನೇ ದಿನೇ ಬೀಜದ ಧರವನ್ನು ಜಾಸ್ತಿ ಮಾಡುತ್ತಿದ್ದಾರೆಂದು ರೈತರ ಅಳಲಾಗಿದೆ. ಐದು ಕೆ.ಜೆ ಯ ಬೀಜದ ಪ್ಯಾಕೆಟ್ಗೆ ಒಂದು ಸಾವಿರದ ನೂರು ರೂಪಾಯಿಗಳಿಗೂ ಅಧಿಕ ಧರ ವಿಧಿಸುತ್ತಿದ್ದಾರೆ, ಈ ಹಿಂದೆ ಇದನ್ನು ಒಂಬೈನೂರ ಐವತ್ತು ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಯಾರೂ ರೈತರ ಗೋಳನ್ನು ಕೇಳುವವರಿಲ್ಲ ಎಂದು ಬೀಜ ಕೊಳ್ಳಲು ಬಂದ ಆಲೂರು, ವಿಡಪನಕಲ್ಲು, ಚೆಳ್ಳಗುರ್ಕಿ ಸೇರಿದಂತೆ ಹಲವಾರು ರೈತರು ಬೇಸರ ವ್ಯಕ್ತಪಡಿಸಿದ್ದು ಕಂಡು ಬಂತು.
ಏನೇ ಆಗಲಿ ಪ್ರತಿಸಲದಂತೆ ಮಳೆಯಿಲ್ಲದೆ ಸೊರಗುತ್ತಿದ್ದ ಮುಂಗಾರು ಕೃಷಿ ಉತ್ತಮ ಮಳೆಯಿಂದ ರೈತರ ಮುಖದಲ್ಲಿ ಮುಗುಳುನಗೆಯನ್ನು ತಂದಿದೆ ಎನ್ನಬಹುದು.