ಬಳ್ಳಾರಿ.ಜೂ.10: ಕಳೆದ ಕೆಲ ದಿನಗಳಿಂದ ನಗರದಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದು ಇದರಿಂದ ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆಪಡುತ್ತಿದ್ದಾರೆ, ಇದನ್ನು ಗಮನಿಸಿದ ನಗರ ಶಾಸಕ ಭರತ್ ರೆಡ್ಡಿ ನಗರವೆಲ್ಲಾ ಸುತ್ತಾಡಿ ಜನರಿಂದ ಮಾಹಿತಿ ಪಡೆದುಕೊಂಡರು. ಮತ್ತು ಹೃದಯ ಭಾಗದಲ್ಲಿರುವ ಗಡಿಯಾರ ಕಂಬ ಮತ್ತು ಡಾ.ರಾಜ್ಕುಮಾರ್ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಮತ್ತು ರಾಯಲ್ ಸರ್ಕಲ್ನಲ್ಲಿ ಮಳೆ ನೀರು ನಿಂತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ತಗ್ಗು ಪ್ರದೇಶದ ಮನಗೆಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ಏನು ಕ್ರಮಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೆ ನಗರದಲ್ಲಿ ಸಂಚರಿಸಿದ ಶಾಸಕ ರೆಡ್ಡಿ ಮಳೆಯಿಂದಾದ ತೊಂದರೆಯನ್ನು ವಾರ್ಡಿನ ಸದಸ್ಯರಿಂದ ಮತ್ತು ಸಾರ್ವಜನಿಕರಿಂದ ಮಾಹಿತಿಯನ್ನು ಪಡೆದುಕೊಂಡರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶರತ್ ರೆಡ್ಡಿ ಮಹಾನಗರ ಪಾಲಿಕೆ ಸದಸ್ಯರಾದ ಮಿಂಚು ಶ್ರೀನಿವಾಸ ನೂರ್ ಅಹಮದ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು