Ad image

ಕಾರಟಗಿ: ಸಿಡಿಲು ಬಡಿದು .250 ಕೆಬಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಭಸ್ಮ, ಜೆಸ್ಕಾಂ ಸಿಬ್ಬಂದಿ ಯಿಂದ ನೂತನ ಟ್ರಾನ್ಸ್ಫಾರ್ಮರ್ ಅಳವಡಿಕೆ

Vijayanagara Vani
ಕಾರಟಗಿ: ಸಿಡಿಲು ಬಡಿದು .250 ಕೆಬಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಭಸ್ಮ, ಜೆಸ್ಕಾಂ ಸಿಬ್ಬಂದಿ ಯಿಂದ ನೂತನ ಟ್ರಾನ್ಸ್ಫಾರ್ಮರ್ ಅಳವಡಿಕೆ
ಕಾರಟಗಿ: ಜೂನ್ 11ರಂದು ತಾಲೂಕಿನ ಆದ್ಯಂತ  ಬಿರುಗಾಳಿಯಿಂದ ಗುಡುಗು ಸಿಡಿಲಿನಿಂದ ಪಟ್ಟಣದ 5-6-7ನೇ ವಾರ್ಡ್ ಗಳಲ್ಲಿ ವಿದ್ಯುತ್ ಸರಬರಾಜು ಆಗುತ್ತಿರುವ  ಆರ್ ಜಿ ರಸ್ತೆಯ ಮಹದೇಶ್ವರ ದೇವಸ್ಥಾನದ ಮಾರ್ಗದಲ್ಲಿರುವ  250ಕೆ ವಿ ಸಾಮರ್ಥ್ಯದ  (ಟ್ರಾನ್ಸ್ಫಾರ್ಮರ್) ವಿದ್ಯುತ್ ಸ್ಥಾವರ ಸಿಡಿಲು ಬಡೆದು ಭಸ್ಮ ವಾದ ಪರಿಣಾಮ ಮೂರು ವಾರ್ಡ್ಗಳಲ್ಲಿ 3ದಿನದಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು ಪಟ್ಟಣದ ಜೆಸ್ಕಾಂ ಅಧಿಕಾರಿಗಳು  ಜೆಸ್ಕಾಂ ನ ಸುಮಾರು 30 ರಿಂದ 40  ಸಿಬ್ಬಂದಿ ವರ್ಗದವರು ಗುರುವಾರ  ನಾಲ್ಕೈದು ಗಂಟೆಗಳ ಕಾಲ ಬಾರಿ ಗಾತ್ರದ   ನೂತನ (ಟ್ರಾನ್ಸ್ಫಾರ್ಮರ)  ವಿದ್ಯುತ್ ಪರಿವರ್ತಕವನ್ನು ಭಾರ ಎತ್ತುವ ಎಲೆಕ್ಟ್ರಿಕಲ್ ವಾಹನ ಮುಖಾಂತರ  ಅಳವಡಿಸಿ ಸಂಜೆ 4 ಗಂಟೆಗೆ ವಿದ್ಯುತ್ ಸರಬರಾಜು ಕಲ್ಪಿಸಿದರು,
ಈ ಸಂದರ್ಭದಲ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (aee) ಮಂಜುನಾಥ್ ವಡ್ಡರ್ ಸೇರಿದಂತೆ ಮಹದೇವಪ್ಪ ಹಾಗೂ ಜೆಸ್ಕಾಂನ ಸಿಬ್ಬಂದಿ ವರ್ಗ ಇದ್ದರು

Share This Article
error: Content is protected !!
";