ಡೊನೇಷನ್ ಹಾವಳಿ ತಡೆಗಟ್ಟಲು ಒತ್ತಾಯಿಸಿ ಪ್ರತಿಭಟನೆ..

Vijayanagara Vani
ಖಾಸಗಿ ಶಾಲೆಗಳಲ್ಲಿ ಹಾಗೂ ಕೋಚಿಂಗ್ ಸೆಂಟರ್ ಗಳಲ್ಲಿ ಅತಿಯಾದ ಡೊನೇಷನ್ ಹಾಗೂ ಪ್ರವೇಶಾತಿ ಶುಲ್ಕವನ್ನು ಪಡೆದು ಮತ್ತು ಅನಧಿಕೃತ  ವಸತಿ ನಿಲಯಗಳನ್ನು ನಿರ್ವಹಣೆ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು..
ವಿದ್ಯೆಯೇ ವಿಮೋಚನೆಗೆ ಹೆದ್ದಾರಿ,ವಿದ್ಯೆಯಿಂದ ನಮ್ಮ ಬಾಳು ಪರಿಪೂರ್ಣವಾಗುವುದು ಎನ್ನುವ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕಲಿಸುವುದಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಶಿಕ್ಷಣಕ್ಕೆ ಅಣಿ ಮಾಡುತ್ತಿರುವುದರ ಹೊತ್ತಿನಲ್ಲಿ ಅಂತಹ ಪಾಲಕರ ಮೇಲೆ ಬರೆ ಎಳೆಯುವ ಕೆಲಸ ವಿದ್ಯಾಸಂಸ್ಥೆಗಳು ಮಾಡುತ್ತಿವೆ. ಯಾವುದೇ ವಿದ್ಯಾ ಸಂಸ್ಥೆಗೆ ಸೇರಿಸಬೇಕಾದರೆ ಸಾವಿರಾರು ರೂಪಾಯಿ ಮತ್ತು ಲಕ್ಷಾಂತರ ರೂಪಾಯಿ ಡೊನೇಷನ್ ಹಾಗೂ ಪ್ರವೇಶಾತಿ ಶುಲ್ಕದ ಹೆಸರಿನಲ್ಲಿ ವಸೂಲಿ ಮಾಡುತ್ತಿದ್ದಾವೆ.
ಅದರಲ್ಲೂ ನಗರದಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ಗಳು ಕೂಡ ವಿಪರೀತವಾಗಿ ತಲೆದೂರಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಮತ್ತು ಈ ಕೋಚಿಂಗ್ ಸೆಂಟರ್ ಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿರದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.ಮತ್ತು ಕೆಲವು ಖಾಸಗಿ ಶಾಲೆಗಳಲ್ಲಿ ಹಾಗೂ ಕೋಚಿಂಗ್ ಸೆಂಟರ್ ಗಳಲ್ಲಿ ಅನಧಿಕೃತವಾಗಿ ವಸತಿ ನಿಲಯವನ್ನು ಕೂಡ ನಿರ್ವಹಣೆ ಮಾಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದ್ದರಿಂದ ಕೂಡಲೇ ತಾವುಗಳು ಸಿಂಧನೂರಿನಲ್ಲಿರುವ ಅನಧಿಕೃತ ಕೋಚಿಂಗ್ ಸೆಂಟರ್ ಗಳ ಪಟ್ಟಿ ಬಿಡುಗಡೆ ಮಾಡಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ ಒತ್ತಾಯಿಸಿದರು. 
ಈ ಸಂದರ್ಭದಲ್ಲಿ ವಿರೂಪಾಕ್ಷಿ ಸಾಸಲಮರಿ, 
ಆಲಂಭಾಷಾ ಬೂದಿಹಾಳ, ದೊಡ್ಡಬಸವ ಬೂದಿಹಾಳ, ನರಸಪ್ಪ ಅಮರಾಪುರ, ಪ್ರವೀಣ್ ಕುಮಾರ್, ಸಂತೋಷ್, ಮುದುಕಪ್ಪ,ಧಾವಿದ್,ಶಾಮ್ ಮಕಂದರ್, ತಿಮ್ಮಪ್ಪ, ಹುಚ್ಚ ರೆಡ್ಡಿ ಬಳಗಾನೂರು ಇತರರು ಇದ್ದರು.
WhatsApp Group Join Now
Telegram Group Join Now
Share This Article
error: Content is protected !!