Ad image

ಪಟ್ಟಣದ ಮೇಗಳಪೇಟೆಯಲ್ಲಿ ಶುಕ್ರವಾರ ಶ್ರೀ ಆದಿ ಶಕ್ತಿ ಮಹಾತಾಯಿ ಸ್ವರೂಪವಾದ ಅಮ್ಮನವರ ಪೂಜೆಯ ಜೊತೆಗೆ ಅಜ್ಜಮ್ಮನ ಕಳಿಸುವ ಪದ್ಧತಿ ನಡೆಸಲಾಯಿತು.

Vijayanagara Vani
ಪಟ್ಟಣದ ಮೇಗಳಪೇಟೆಯಲ್ಲಿ ಶುಕ್ರವಾರ ಶ್ರೀ ಆದಿ ಶಕ್ತಿ ಮಹಾತಾಯಿ ಸ್ವರೂಪವಾದ ಅಮ್ಮನವರ ಪೂಜೆಯ ಜೊತೆಗೆ ಅಜ್ಜಮ್ಮನ ಕಳಿಸುವ ಪದ್ಧತಿ ನಡೆಸಲಾಯಿತು.

ಪ್ರತಿವರ್ಷ ಪದ್ದತಿಯಂತೆ ಈ ವರ್ಷವು ಸಹ ಸಕಾಲಕ್ಕೆ ಮಳೆ ಬೆಳೆ ಸಮೃದ್ಧಿಯಾಗಿ ರೋಗ ರುಜಿನಿಗಳು ಬಾರದಂತೆ ಅಮ್ಮನವರನ್ನು ಸಕಲ ದೈವಸ್ತರು ಭಕ್ತಿಯಿಂದಪೂಜಿಸಿ ಸಡಗರ ಸಂಭ್ರಮದಿ0ದ ಅಜ್ಜಿ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.

ರೈತಾಪಿ ವರ್ಗದ ಜನರ ಬಿತ್ತನೆ ಕಾರ್ಯಗಳು ಬರುವ ಈ ಹಬ್ಬದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ, ಮನೆಗಳಲ್ಲಿನ ಧನ ಕರುಗಳು ಚೆನ್ನಾಗಿರಲಿ, ರೈತರ ಆರೋಗ್ಯ ವೃದ್ಧಿಯಾಗಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಲೆಂದು ಹಬ್ಬ ಆಚರಿಸಿದರು ದೇವರಿಗೆ ಪ್ರಾರ್ಥಿಸಿದರು.

ಹೊಸ ಬಿದಿರಿನ ಮರದಲ್ಲಿ ಕುಡಿ ಬಾಳೆದೆಲೆ ಹಾಸಿ ಅದರ ಮೇಲೆ ಕುಂಬಾರನ ಮನೆಯಿಂದ ತಂದ ಮಣ್ಣಿನ ಕುಡಿಕೆಗೆ ವಿಳ್ಯೆದೆಲೆ, ಬೇವಿನ ಸೊಪ್ಪು, ಅರಿಶಿನ ಕುಂಕುಮ, ಬಳೆ ಬಿಚ್ಚಲೆ, ದೇವರ ಮನೆಯ ಜಗಲಿಟ್ಟು ಹೋಳಿಗೆ, ಮಾವಿನ ಹಣ್ಣಿನ ಶೀಕರಣೆ, ಅನ್ನ, ಮೊಸರಿನ ಎಡೆ ಮಾಡಿ, ಗ್ರಾಮದ ಹೊರವಲಯದ ಅಮ್ಮನ ಗದ್ದಿಗೆಯ ಬೇವಿನ ಮರದಡಿ ಇಟ್ಟು ಸಾಮೂಹಿಕವಾಗಿ ಪೂಜಿಸಿ ಎಡೆ ಅರ್ಪಿಸಿದರು. ನಂತರ ಮನೆಗೆ ತೆರಳಿ ಕುಟುಂಬದವರು ಬಂಧು ಬಳಗದೊಂದಿಗೆ ಹೋಳಿಗೆ ಭೋಜನ ಸವಿದರು

ಈ ಹಬ್ಬವನ್ನು ಹೋಳಿಗೆ ಹಬ್ಬ, ಅಜ್ಜಿ ಹಬ್ಬ, ಅಮ್ಮನ ಹಬ್ಬವೆಂದು ಗ್ರಾಮೀಣ ಭಾಗಗಲ್ಲಿ ಕರೆಯಲಾಗುತ್ತದೆ.

ಈ ಸಂಧರ್ಭದಲ್ಲಿ ಧರ್ಮಾಧಿಕಾರಿ ಪಿ.ಬಿ.ಗೌಡ್ರು ,
ಜಗದೀಶ, ಬಣಕಾರು ವಿರೇಶ್, ಹಂಪಾಪಟ್ಟಣದ ಕೊಟ್ರಶ್, ಕೌಟಿ ವಾಗೀಶ್,
ಬಿ.ಎಮ್.ಉಮಾಪತಿ ಸ್ವಾಮಿ, ಎಂ.ವೀರಭದ್ರಪ್ಪ, ಬಡಿಗೆರ್ ನಾಗರಾಜ್, ಮಟ್ಟೇರ ಮಲ್ಲಿಕಾರ್ಜುನ, ಆರ್.ಎಸ್.ಅಶೋಕಕುಮಾರ್, ಸಕಲ ಹರಪನಹಳ್ಳಿ ದೈವಸ್ತರು ಯುಕರು ಹಾಗೂ ಮಹಿಳೆಯರು ತಾಯೆಂದಿರು ಭಕ್ತಿಯಿಂದ ಸಮರ್ಪಿಸಿದರು.

Share This Article
error: Content is protected !!
";