ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲದಲ್ಲಿ ತಾಲೂಕು ಮಟ್ಟದ ಮೊದಲನೇ ಪ್ರಗತಿ ಪರಿಶೀಲನೆ ಸಭೆ ಜಿಪಂ. ಮುಖ್ಯ ಯೋಜನಾಧಿಕಾರಿ ಹಾಗೂ ಆಡಳಿತ ಅಧಿಕಾರಿ ವಾಗೀಶ್ ಶಿವಚಾರ್ಯ ರವರ ನೇತೃತ್ವದಲ್ಲಿ ಶನಿವಾರ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ತಾಲೂಕಿನಲ್ಲಿ ಉತ್ತಮ ಮುಂಗಾರು ಮಳೆಯಾಗಿದ್ದು, ರೈತರಿಗೆ ಗುಣಮಟ್ಟದ ಬೀಜ ಮತ್ತು ಗೊಬ್ಬರವನ್ನು ನೀಡುವಂತೆ ಕೃಷಿ ಇಲಾಖೆಗೆ ಸೂಚಿಸಿದರು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗೃತೆ ಕ್ರಮಗಳನ್ನು ಕೈಗೊಂಡು, ಮಳೆ ನೀರು ನಿಲ್ಲದಂತೆ ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡಲು ಗ್ರಾಪಂ.ಗೆ ತಿಳಿಸಿ, ಸಾರ್ವಜನಿಕರಿಗೆ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಸಭೆಗಳು ಮಾಡಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಿದರು. ಮಳೆಗಾಲ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸಪಾರಂಗಳ ಪರಿಶೀಲನೆ ನಡೆಸಿ, ದುರಸ್ಥಿ ಇದ್ದಲ್ಲಿ ಅತಿ ಶೀಘ್ರವಾಗಿ ದುರಸ್ಥಿ ಪಡಿಸಬೇಕು ಎಂದು ವಿದ್ಯುತ್ ಇಲಾಖೆಗೆ ಸೂಚಿಸಿದರು. ಕಲುಷಿತ ನೀರು ಕಂಡು ಬಂದಲ್ಲಿ ಸೂಕ್ತ ಕ್ರಮ ವಹಿಸುವಂತೆ ಗ್ರಾಪಂ. ಪಿಡಿಓಗಳಿಗೆ ಸೂಚಿಸಿದರು. ಮಳೆ ಹೆಚ್ಚು ಆಗುತ್ತಿರುವುದರಿಂದ ಸರಕಾರಿ ಶಾಲೆಗಳಲ್ಲಿ ಕೊಠಡಿಗಳ ದುರಸ್ಥಿ ಹಾಗೂ ಸೋರುವ ಕೊಠಡಿಗಳಿಂದ ಮಕ್ಕಳನ್ನು ದೂರು ಇರುವಂತೆ ಹಾಗೂ ದುರಸ್ಥಿ ಕೊಠಡಿಗಳ ಕುರಿತು ಶಾಸಕರಿಗೆ ತಿಳಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದರು. ಅಂಗನವಾಡಿಗಳಲ್ಲಿ ಎಷ್ಟು ಮಕ್ಕಳು ದಾಖಲು ಮಾಡಿದ್ದೀರಿ ಹಾಗೂ ಆಹಾರದ ಕುರಿತು ಸಿಡಿಪಿಓ ಅಧಿಕಾರಿಗೆ ಸೂಚಿಸಿದರು. ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಕುಡಿಯುವ ನೀರಿನ ಯೋಜನೆಯ, ಗ್ರಾಮಗಳ ಅಭಿವೃದ್ಧಿ, ನರೇಗಾ ಯೋಜನೆ, ಜೆಜೆಎಂ ಹಾಗೂ ಇನ್ನಿತರ ಪ್ರಗತಿ ಪರಿಶೀಲನೆ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ತಾಪಂ. ಇಓ ಕೆವಿ.ನಿರ್ಮಲ, ನರೇಗಾ ಸಹಾಯಕ ನಿರ್ದೇಶಕ ಶಿವರಾಮರೆಡ್ಡಿ, ಅಡಿಪಿಆರ್ ಅನೀಲ್ ಕುಮಾರ್, ಟಿಪಿಓ ರಾಧಿಕಾ, ಬಸವನಗೌಡ, ರಾಜಶೇಖರಗೌಡ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ. ಪಿಡಿಓಗಳು ಹಾಗೂ ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.