ಪರಿಸರ ನಾಶದಿಂದ ಪ್ರಕೃತಿ ವಿಕೋಪ – ಹುಸೇನ್ ಭಾಷಾ

Vijayanagara Vani
ಪರಿಸರ ನಾಶದಿಂದ ಪ್ರಕೃತಿ ವಿಕೋಪ – ಹುಸೇನ್ ಭಾಷಾ
ಆಧುನಿಕತೆ,ನಗರೀಕರಣದ ಹೆಸರಿನಲ್ಲಿ ನಾವು ನಮ್ಮ ಪರಿಸರವನ್ನು ನಾಶ ಪಡಿಸುತ್ತಿದ್ದೇವೆ. ಅದರ ಪರಿಣಾಮವೇ ಭೂಮಿಯ ತಾಪಮಾನ ಏರಿಕೆ, ಪ್ರವಾಹ, ಅತಿವೃಷ್ಟಿ-ಅನಾವೃಷ್ಟಿ ಭೂಕಂಪದಂತಹ ಪ್ರಕೃತಿ ವಿಕೋಪಕ್ಕೆ ಕಾರಣವಾಗಿದೆ. ಇದರಿಂದ ಹೊರಬರಲು ನಮಗಿರುವುದು ಒಂದೇ ದಾರಿ ಪರಿಸರ ಸಂರಕ್ಷಣೆ ಮಾಡುವುದು, ನಾವು ಗಿಡ ಮರಗಳನ್ನು ನೆಟ್ಟರೆ ಸಾಲದು ಅವುಗಳನ್ನು ರಕ್ಷಿಸಿ ಪೋಷಿಸಬೇಕು ಎಂದು ಗೆಣಿಕೆಹಾಳ್ ಪ್ರೌಢಶಾಲೆಯ   ಮುಖ್ಯಗುರು ಹೆಚ್.ಹುಸೇನ್ ಬಾಷ ತಿಳಿಸಿದರು.
ಅವರು ಪಟ್ಟಣ ಸಮೀಪದ ಗೆಣಿಕಿಹಾಳ್ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಶಾಲಾ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮ್ಮಿತ್ತ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನಂತರ ಮಾತನಾಡಿದ ಅವರು
ಅಭಿವೃದ್ಧಿ ಹೆಸರಿನಲ್ಲಿ ಪರಿಸರ ವಿನಾಶವಾಗುತ್ತಿದ್ದರೆ ಇಂಗಾಲಡೈಕ್ಷೈಡ್ ಹೆಚ್ಚಾಗಿ ಆಮ್ಲಜನಕ ಕೊರತೆಯುಂಟಾಗಿ ಜೀವನ ನಡೆಸುವುದೇ ಕಷ್ಟಕರ ವಾಗುತ್ತದೆ. ಆಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಮನೆಯ ಮುಂದೆ ಮತ್ತು ಗ್ರಾಮದಲ್ಲಿ ಖಾಲಿಯಿರುವ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಹೋಣೆಯಾಗಿದೆ. ಆಗ ಮಾತ್ರ ಮುಂದಿನ ಪೀಳಿಗೆ ಮತ್ತು ರೈತಾಪಿ ಜೀವನ ಉಳಿಯಲು ಸಾಧ್ಯ ಎಂದರು.
ನಂತರ ಚಿತ್ರಕಲಾ ಶಿಕ್ಷಕ ಎಂ.ಬಸವರಾಜ ಪರಿಸರ ಸಂರಕ್ಷಣೆ ಕುರಿತು ಮಾತನಾಡಿ 
“ಹಸಿರಿದ್ದರೆ ಉಸಿರು” ಎಂಬ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಈ ಭೂಮಿಯು ಸಸ್ಯಶಾಮಲ ವಾಗುತ್ತದೆ ಎಂದರು.
. ತದನಂತರ ಶಾಲಾ ಆವರಣದಲ್ಲಿ 30 ಸಸಿಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ನಾಗರಾಜ ಮಸೂತಿ, ಸುಬಾನ್ ಅಜಾದ, ಬಡಿಗೇರ ಗೋಪಾಲ, ವಿಜಯ ಕುಮಾರಿ, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!