ಗಂಗಾವತಿ: ರಾಜ್ಯದಲ್ಲಿ ಕೊಲೆ, ದೌರ್ಜನ್ಯ ಕಾನೂನು ಬಾಹೀರ ಚಟುವಟಿಕೆಗಳು ಮಿತಿ ಮೀರಿದ್ದು ಇವುಗಳಿಗೆ ಸರಕಾರ ಕಡಿವಾಣ ಹಾಕಬೇಕಿದ್ದು, ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರನ್ನು ರಕ್ಷಿಸಲು ಕೆಲ ರಾಜಕಾರಣಿಗಳು ಮುಂದಾಗುತ್ತಿರುವ ಮಾಹಿತಿ ಹರಿದಾಡುತ್ತಿದ್ದು ಪಾರದರ್ಶಕ ತನಿಖೆ ನಡೆಯಬೇಕು ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕೊಪ್ಪಳ ಜಿಲ್ಲಾ ಕೊಪ್ಪಳ ಜಿಲ್ಲಾಧ್ಯಕ್ಷ ಸಿ.ಕೆ. ಮರಿಸ್ವಾಮಿ ಅಗ್ರಹಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.ಪವಿತ್ರ ಗೌಡ ಎನ್ನುವವರಿಗೆ ಅಶ್ಲೀಲ ಮೆಸೇಜ್ ಹಾಕಿದ್ದಾರೆ ಎಂದು ರೇಣುಕಸ್ವಾಮಿಯನ್ನು ಕಿಡ್ನಾಪ್ ಮಾಡಿ ಪೇಟಿಗೇರೆ ಶೆಡ್ ವೊಂದರಲ್ಲಿ ಇಲ್ಲದ ಟಾರ್ಚರ್ ನೀಡಿ ಸಾರ್ವಜನಿಕರಿಗೆ ಹೇಸಿಗೆ ಹುಟ್ಟಿಸುವ ರೀತಿಯಲ್ಲಿ ಆತನನ್ನು ಹಿಂಸಿಸಿ ಕೊಲೆ ಮಾಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವ ಕೃತ್ಯ, ಇದಕ್ಕೆ ಕ್ಷೆಮೆಯೇ ಇಲ್ಲ, ಕಡುಬಡತನದಲ್ಲಿರುವ ರೇಣುಕಾಸ್ವಾಮಿ ಕುಟುಂಬವನ್ನು ಕಾಪಾಡುವವರು ಯಾರು, ಆವರಿಗೆ ಆರ್ಥಿಕ ಶಕ್ತಿಯೂ ಇಲ್ಲ ಗರ್ಭೀಣಿ ಹೆಂಡತಿಯು ಹೇಗೆ ಮುಂದೆ ಬದುಕು ಕಟ್ಟಿಕೊಳ್ಳಬೇಕು, ತುಂಬು ಜೀವನ ನಡೆಸಬೇಕಾದ ಆ ಮಹಿಳೆಯ ಮಾಡಿದ ಪಾಪವಾದರೂ ಏನು ದರ್ಶನ್ ಅವರಿಗೆ ಇಷ್ಟು ಕಾನೂನು ಜ್ಞಾನ ಇಲ್ಲ ಎನ್ನುವುದು ಸೋಜಿಗದ ಸಂಗತಿ ಎಂದು ಅಕ್ರೋಶ ವ್ಯಕ್ತಪಡಿಸಿದರು.ರೇಣುಕಾಸ್ವಾಮಿ ಕುಟುಂಬಕ್ಕೆ ರಾಜ್ಯ ಸರಕಾರ ಸೂಕ್ತ ಆರ್ಥಿಕ ಭದ್ರತೆ ನೀಡಬೇಕು, ಉದ್ಯೋಗ ಒದಗಿಸಬೇಕು, ಸಾರ್ವಜನಕರೂ ಸಹ ಕುಟುಂಬಕ್ಕೆ ಕೈಲಾದ ಸಹಾಯ ಮಾಡಬೇಕು, ಇಂಥ ಪ್ರಕರಣಗಳು ಮತ್ತೆ ಮರುಕಳಿಸದಂತೆ ಕಾನೂನು ಬಿಗಿಯಾಗಬೇಕು, ಅಧಿಕಾರ ಹಾಗು ಆರ್ಥಿಕ ಶಕ್ತಿ ಇದ್ದರೆ ಏನನ್ನದಾರು ಮುಚ್ಚಿಹಾಕಬಹುದು ಎಂದು ಭಾವಿಸಿರುವ ರಾಜ್ಯದ ಪ್ರಭಾವಿಗಳಿಗೆ ಇದು ತಕ್ಕ ಪಾಠವಾಗಬೇಕಿದೆ, ಓರ್ವ ಆರೋಪಿಯ ತಂದೆಯೂ ಸಹ ಈ ಕೃತ್ಯದ ಬಗೆಗೆ ಶಾಕ್ ಆಗಿ ಹೃದಯಘಾತ ಹೊಂದಿದ್ದಾನೆ. ದರ್ಶನ ಫ್ಯಾನ್ ಫಾಲೋಯಿಂಗ್ ಹೆಚ್ಚಿದ್ದು, ಆತನ ಒಳ್ಳೆಯ ಗುಣಗಳನ್ನು ಆದರಿಸಿ, ಆತನ ಕೆಟ್ಟ ನಡೆತೆಗಳನ್ನು ಖಂಡಿಸಿ ಆದರ್ಶ ಬುದಕಿಗೆ ಸೋಷಿಯಲ್ ಮಿಡಿಯಾಗಳ ಮೂಲಕ ಜಾಗೃತಿ ಮೂಡಿಸಬೇಕು, ಒಂದು ವೇಳೆ ಆತನ ಗುಣ ಫಾಲೋ ಮಾಡಿದಲ್ಲಿ ಸಮಾಜ ಘಾತುಕ ಶಕ್ತಿಗಳು ಹೆಚ್ಚುವುದರಲ್ಲಿ ಸಂದೇಹವಿಲ್ಲ ಎಂದು ಮರಿಸ್ವಾಮಿ ಕಿವಿಮಾತು ಹೇಳಿದರು. ಇತ್ತೀಚಿಗೆ ಕೊಲೆ, ದೌರ್ಜನ್ಯ, ಗುಂಡಾಗಿರಿ, ಇಸ್ಪೀಟ್, ಜೂಜಾಟ ಹಾಗು ಗಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ನೇಹಾ, ಅಂಜಲಿ ಇತರೆ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಕಾನೂನು ಬಾಹೀರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಸಂಬಂಧಪಟ್ಟ ಉಸ್ತುವಾರಿ ಸಚಿವರು, ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಹುಲ್ಲೇಶ್ ಬೋವಿ, ಟಿ. ವೆಂಕಟೇಶ, ಸೋಹೆಲ್ ಕನಕಗಿರಿ, ಗಂಗಾವತಿ ತಾಲೂಕು ಅಧ್ಯಕ್ಷ ಯಲ್ಲಪ್ಪ, ಗಂಗಾವತಿ ತಾಲೂಕು ಅಲ್ಪ ಸಂಖ್ಯಾತ ಅಧ್ಯಕ್ಷ ಅತ್ತು ಸಂಪಂಗಿ, ಕಾರಟಗಿ ತಾಲೂಕು ಅಧ್ಯಕ್ಷ ಮಂಜುನಾಥ ಗೋಮರ್ಷಿ, ಕನಕಗಿರಿ ತಾಲೂಕು ಅಧ್ಯಕ್ಷ ಹನುಮೇಶ. ಗಂಗಾವತಿ ತಾಲೂಕು ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಹಗೇದಾಳ, ಐಲಿ ಶಂಕರ, ವೆಂಕಟೇಶ ಮುಡುಮಕಲ, ಸುರೇಶ ಗಾಂಧಿನಗರ, ಗಣೇಶ, ಭುವನೇಶ ಗಾಂದಿನಗರ, ದುರುಗೇಶ, ಸರ್ಪರಾಜ, ಆರೀಫ್, ರಾಘವೇಂದ್ರ, ಗಂಗಾವತಿ ನಗರ ಘಟಕದ ಅಧ್ಯಕ್ಷ ಸುಂಕಪ್ಪ ಬೋವಿ, ಕುಮಾರ್ ಸಂಗಾಪುರ ಹಾಗು ರಾಘವೇಂದ್ರ ಮಲ್ಲಾಪುರ ಇತರರಿದ್ದರು.