Vijayanagara Vani

ಕಾರಟಗಿ:ಸಮೀಪದ  ಗುಂಡೂರು ಗ್ರಾಮದಲ್ಲಿ  10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಸರ್ಕಾರಿ ಪ್ರೌಢ ಶಾಲೆ ಗುಂಡೂರು ಶಾಲೆಯಲ್ಲಿ ಹಸಿರು ಸೇನಾ ಪಡೆ  ಇವರ ಸಂಯುಕ್ತ ಆಶ್ರಯದಲ್ಲಿ ಸತತ 9 ವರ್ಷಗಳಿಂದ   9 ದಿನಗಳ  ಯೋಗ ಶಿಬಿರವನ್ನು   ಶಾಲೆಯ ದೈಹಿಕ ಶಿಕ್ಷಕ ಕರಿಯಪ್ಪ ದೊಡ್ಡಿಹಾಳ ಅವರು ನಡೆಸುತಿದ್ದು . ಈ ಒಂದು ಯೋಗ ಶಿಬಿರದಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ  30ಕ್ಕೂ ಅಧಿಕ ಆಸನಗಳನ್ನು ಕಲಿಸುತ್ತಾ ವಿಧ್ಯಾರ್ಥಿಗಳು ಮತ್ತು ಗ್ರಾಮಸ್ಥರಲ್ಲಿ ಯೋಗದ ಅಬ್ಯಾಸವನ್ನು ತಂದಿದ್ದಾರೆ. ಇನ್ನೂ 5  ದಿನಗಳ ಯೋಗ ಶಿಬಿರ ಬಾಕಿ ಉಳಿದಿದ್ದು ಸಾರ್ವಜನಿಕರು ಈ ಶಿಬಿರಕ್ಕೆ ಆಗಮಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ. ದಿನಾಲು ಯೋಗ ಶಿಬಿರಕ್ಕೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿ 280 ಕ್ಕೂ ಹೆಚ್ಚು ಶಿಬಿರಾರ್ಥಿಗಳು, ಈ ಶಿಬಿರದಲ್ಲಿ ಪಾಲ್ಗೊಂಡಿರುತ್ತಾರೆ.   ಯೋಗ ಶಿಬಿರದಲ್ಲಿ ಪೌಷ್ಟಿಕ ಆಹಾರ 9 ದಿನಗಳ ಕಾಲ ನಡೆಯುವ ಯೋಗ ಶಿಬಿರಕ್ಕೆ ಪ್ರತಿದಿನ ಒಬ್ಬರಂತೆ ಹಾಲು ಮತ್ತು ಬ್ರೆಡ್ಡು. ಖರ್ಜೂರ .ಬಾಳೆಹಣ್ಣು. ಮಡಿಕೆ ಕಾಳುಗಳನ್ನು .ಊರಿನ ಗ್ರಾಮಸ್ಥರು  ಭಾಗವಹಿಸಿದ ಶಿಬಿರಾರ್ಥಿಗಳಿಗೆ ನೀಡುತ್ತಾರೆ.

5 ನೇ ದಿನದ ಯೋಗ ಶಿಬಿರಕ್ಕೆ ಗಂಗಾವತಿ ತಾಲೂಕ ವಕೀಲ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮುಸಾಲಿ ಅವರು ಎಲ್ಲಾ ಶಿಬಿರಾರ್ಥಿಗಳಿಗೆ ಹಾಲು ಮತ್ತು ಬ್ರೆಡ್ ಅನ್ನು ವಿತರಿಸಿದರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಹಸನ್ ಸಾಬ್ ಮನ್ನಾಪುರವರು ಬಾಳೆಹಣ್ಣನ್ನು ನೀಡಿದರು ಹಾಗೂ ತಾಲೂಕ್ ಪಂಚಾಯಿತಿಯ ಮಾಜಿ ಸದಸ್ಯರಾದ ಶ್ರೀದೇವಿ ಕನಕಪ್ಪ ಅವರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಹನುಮೇಶ್ ಗುರಿಕಾರ್ ಇವರು ಇಬ್ಬರ ಸೇರಿ ಈ ಯೋಗ ಶಿಬಿರಕ್ಕೆ 500 ಸಸಿಗಳನ್ನು ವಿತರಿಸಿದರು. ಮನೆಗೊಂದು ಮರ ಊರಿಗೊಂದು ವನ ಹಸಿರು ಸೆನಾಪಡೆ ಗುಂಡೂರು  ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷ ಯೋಗ ಶಿಬಿರಕ್ಕೆ1000 ಸಸಿಗಳನ್ನು ತಂದು ಊರಿನ ಪ್ರಮುಖ ಸ್ಥಳಗಳಾದ ಶಾಲೆ. ಅಂಗನವಾಡಿ. ಆಸ್ಪತ್ರೆ. ಮತ್ತು ಪ್ರಮುಖ ಬೀದಿಗಳಲ್ಲಿ ನೆಟ್ಟು ಪಾಲನೆ ಪೋಷಣೆ ಮಾಡುತ್ತಾರೆ. ಇದರ ಜೊತೆಗೆ ಹಸಿರು ಸೇನಾ ಪಡೆ ಗುಂಡೂರು ಇವರು ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಗಿಡವನ್ನು ದತ್ತು ನೀಡಿ ಪರಿಸರ ಜಾಗೃತಿಯನ್ನು ಮೂಡಿಸುತ್ತಾ ಬಂದಿದ್ದಾರೆ. ಸತತ  9 ವರ್ಷಗಳಿಂದ  ಯೋಗ ಶಿಬಿರದಲ್ಲಿ ಪ್ರತಿ ವರ್ಷ  ಒಂದು ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿ ಇತರರಿಗೆ ಮಾದರಿಯಾಗಿದ್ದಾರೆ ದೈಹಿಕ ಶಿಕ್ಷಕ ಕರಿಯಪ್ಪ ದೊಡ್ಯಾಳ ಕಳೆದ ವರ್ಷ ಯೋಗ ಶಿಬಿರದಲ್ಲಿ ಹಿರಿಯ ನಾಗರಿಕರಿಗೆ ಸ್ಟಿಕ್ ಉರ್ಗೋಲು ನೀಡಿದ್ದರು. ಈ ವರ್ಷ 5ನೇ  ದಿನದ ಯೋಗ ಶಿಬಿರದಲ್ಲಿ ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ಸೈನಿಕರ ತಂದೆ ಮತ್ತು ತಾಯಿಯರಿಗೆ. ಸನ್ಮಾನ ಮತ್ತು ದೇಶದ ಒಳಗೆ ತಮ್ಮ ಜೀವನದ ಹಂಗನ್ನು ತೊರೆದು ಬೆಳಕನ್ನು ನೀಡಲು ಹಗಲು ಇರುಳು ಶ್ರಮಿಸುತ್ತಿರುವ ಲೈನ್ ಮ್ಯಾನ್ ಗಳಿಗೆ.

ಸನ್ಮಾನ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಹಸಿರುಸೇನಾ ಪಡೆಯ ಗೌರವಾಧ್ಯಕ್ಷರಾದ ಹಸನ್ ಸಾಬ್ ಮನ್ನಾಪುರ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಹಸಿರು ಸೇನಾ ಪಡೆಯ ಅಧ್ಯಕ್ಷರಾದ ವಿನೋದ್ ಅಂಗಡಿ ಅವರು ಅಧ್ಯಕ್ಷರ ನುಡಿಯನ್ನು  ಹೇಳಿದರು ಈ  ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಗುಂಡೂರಿನ S.D.M.C ಅಧ್ಯಕ್ಷರು ಮತ್ತು ಸರ್ವ ಸದಸ್ಯರು.   ತಾಲೂಕ್ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶ್ರೀದೇವಿ ಕನಕಪ್ಪ. ಮತ್ತು ಗಂಗಾವತಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಮುಸಾಲಿ. ಮತ್ತು ಮಾಜಿ ಎ.ಪಿ.ಎಂ.ಸಿ ಸದಸ್ಯರಾದ ಶರಣೆಗೌಡ ಪೊಲೀಸ್ ಪಾಟೀಲ್ .ಮತ್ತು ಗುಂಡೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಸುರೇಶ್ ಬಾಬು. ಗ್ರಾಮ ಪಂಚಾಯಿತಿ ಗುಂಡೂರಿನ ಸರ್ವ ಸದಸ್ಯರು ಹಾಗೂ ಗುಂಡೂರು ಗ್ರಾಮದ ಸಮಸ್ತ ಶಿಕ್ಷಣ ಪ್ರೇಮಿಗಳು ಮತ್ತು ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಗುಂಡೂರಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article
error: Content is protected !!