ಕೊಟ್ಟೂರು ತಾಲೂಕು ಅಂಬಳಿ ಗ್ರಾಮದಲ್ಲಿ ಸಮಸ್ಯೆಗಳ ಸುರಿಮಳೆ ಜೊತೆಗೆ ನಾಯಿಯ ಹಾವಳಿ. ಹೆಚ್ಚಾಗಿದ್ದು, ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ದಾರಿ ಮತ್ತು ಗ್ರಾಮದ ಸುತ್ತಮುತ್ತಲಿನ ದಾರಿ ತುಂಬಾ ಹದೇಗೆಟ್ಟು ಹೋದರೂ ಪಿಡಿಒ ಮೌನವಹಿಸಿದ್ದಾರೆ. ಮತ್ತು ಇಲ್ಲಿ ಬೋರ್ವೆಲ್ ಗಳ ನೀರಿನಲ್ಲಿ ಫ್ಲೋರೈಡ್ ಇದೆಯಂತೆ ನೀರಿನ ತೊಟ್ಟಿ ಪಾಚಿಗಟ್ಟಿದೆ ಹೋಗಿದೆ ಹೀಗಾದರೆ ಇಲ್ಲಿನ ಸಾರ್ವಜನಿಕರ ಆರೋಗ್ಯದ ಗತಿಯನ್ನು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯದ ಕೊರತೆ ಇದೆಯಂತೆ ಮಕ್ಕಳು ಶೌಚಾಲಯಕ್ಕಾಗಿ ಹೊರಗಡೆನೇ ಹೋಗಬೇಕು ಈ ಎಲ್ಲಾ ಸಮಸ್ಯೆಗಳ ಸುಳಿಯಲ್ಲಿ ನಾಯಿಯ ಹಾವಳಿಯಂತೆ ಸುಮಾರು ಜನಗಳಿಗೆ ಅದು ಕಚ್ಚಿದೆ ವಿಜಯ್ ಎಂಬ ಬುದ್ಧಿಮಾಂದ್ಯ ಯುವಕನಿಗೆ ತೊಡೆ ಭಾಗದಲ್ಲಿ ಕಚ್ಚಿದ್ದು ಮತ್ತು
ಈ ನಾಯಿ ಏಕಾಏಕಿ ಬಂದು ಜನರ ಮೇಲೆ ದಾಳಿ ಮಾಡಿ ಕಡಿಯುವ ಈ ನಾಯಿ ಬರುವುದನ್ನು ನೋಡಿ ತಪ್ಪಿಸಿಕೊಳ್ಳಲು ಹೋದ ಮಹಿಳೆಗೆ ಆಯತಪ್ಪಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆಪರೇಷನ್ ಮಾಡಿರುವರಂತೆ ರೂ. 1,40,000 ಖರ್ಚು ಬಂದಿದೆ ಒಟ್ಟಿನಲ್ಲಿ ಈ ನಾಯಿ ಸುಮಾರು ದಿನಗಳಿಂದ ಇದ್ದು ಅನೇಕ ಸಾರ್ವಜನಿಕರಿಗೆ ತೊಂದರೆ ಕೊಡುತ್ತನೆ ಬಂದಿದೆ ಗ್ರಾಮ ಪಂಚಾಯಿತಿಗೆ ತಿಳಿಸಿದರೆ ಇಂದು ನಾಳೆ ಎನ್ನುತ್ತಾರೆ ಹೀಗಾಗಿ ಅನುಭವಿಸುತ್ತಿರುವ ಜನರ ಕಷ್ಟ ತಪ್ಪಿಸುವವರು ಯಾರು ಜನನಾಯಕರು ಗಮನಿಸುತ್ತಾರೋ ಅಧಿಕಾರಿಗಳು ಗಮನಿಸುತ್ತಾರೋ ಎಂಬುದು ತಿಳಿಯದಾಗಿದೆ ಎಂದು ಇಲ್ಲಿನ ರಶೀದ್ ಮೋಹನ್ ಸ್ವಾಮಿ ವಿಜಯ್ ಮತ್ತಿತರ ಸಾರ್ವಜನಿಕರು ನಮ್ಮ ಸುದ್ದಿಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.ಇಲ್ಲಿನ ಫ್ಲೋರೈಡ್ ನೀರಿನ ಸಮಸ್ಯೆ ಶಾಲಾ ಮಕ್ಕಳ ಶೌಚಾಲಯಕ್ಕೆ ಇಲ್ಲಿನ ದಾರಿ ಮತ್ತು ಈ ನಾಯಿಯನ್ನು ಹಿಡಿದು ಸಾರ್ವಜನಿಕರಿಗೆ ಹಿತವನ್ನು ಕಾಪಾಡಲು ಇಲ್ಲಿನ ಜನನಾಯಕರು ಹಾಗೂ ಅಧಿಕಾರಿಗಳು ಮುಂದಾಗಬೇಕಾಗಿದೆ ಎಂದು ಇಲ್ಲಿನ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಬೇಡಿಕೆಯಾಗಿದೆ