Ad image

ಸಿಎಸ್‌ಸಿ ಸೇವಾ ಸೌಲಭ್ಯಗಳನ್ನು ರೈತರಿಗೆ ಮಹಿಳೆಯರಿಗೆ ಕೂಲಿ ಕಾರ್ಮಿಕರಿಗೆ ಸಕಾಲದಲ್ಲಿ ತಲುಪಿಸಿರಿ: ಪ್ರಕಾಶ್‌ ರಾವ್‌ ಜಿಲ್ಲಾ ನಿರ್ದೇಶಕರು

Vijayanagara Vani
ಸಿಎಸ್‌ಸಿ ಸೇವಾ ಸೌಲಭ್ಯಗಳನ್ನು ರೈತರಿಗೆ ಮಹಿಳೆಯರಿಗೆ ಕೂಲಿ ಕಾರ್ಮಿಕರಿಗೆ ಸಕಾಲದಲ್ಲಿ ತಲುಪಿಸಿರಿ: ಪ್ರಕಾಶ್‌ ರಾವ್‌ ಜಿಲ್ಲಾ ನಿರ್ದೇಶಕರು

ಗಂಗಾವತಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ ಟ್ರಸ್ಟ್‌ ಗಂಗಾವತಿ ತಾಲೂಕಿನ ಸಿ.ಎಸ್.ಸಿ ಕಾಮನ್‌ ಸರ್ವೀಸ್‌ ಸೆಂಟ್‌ರಗಳ ಸೇವಾದಾರರ ಪ್ರೇರಣಾ ಕಾರ್ಯಾಗರವನ್ನು ಗಂಗಾವತಿ ಯೋಜನಾಕಛೇರಿಯಲ್ಲಿ ಹಮ್ಮಿಕೊಳ್ಳಲಾಯಿತು, ಕೊಪ್ಪಳ ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರಕಾಶ್‌ ರಾವ್‌ರವರು ಕಾರ್ಯಕ್ರಮವನ್ನು ದೀಪಾ ಬೆಳಗಿಸಿ, ಉದ್ಘಾಟನೆ ಮಾಡುವರದ ಮೂಲಕ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದರು. ಗಂಗಾವತಿ ತಾಲ್ಲೂಕಿನ 40 ಮಂದಿ ಸೇವಾದಾರರು ಸಕಾಲದಲ್ಲಿ ಸೇವೆಗಳನ್ನು ರೈತರಿಗೆ, ಮಹಿಳೆಯರಿಗೆ, ಕೂಲಿ ಕಾರ್ಮಿಕಾರಿಗೆ ಸಕಾಲದಲ್ಲಿ ತಲುಪಿಸಿರಿ,  ಪ್ರಸ್ತುತ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಲ್ಲಿ ಮಾಹಿತಿಯನ್ನು ಹೆಚ್ಚು ರೈತರಿಗೆ ಮುಟ್ಟಿಸಬೇಕು. ಸಿ.ಎಸ್‌.ಸಿ ಸೆಂಟರ್‌ನಲ್ಲಿ 31 ರೀತಿಯ ವಿವಿಧಾ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡಲು ಅವಕಾಶ ಇದೆ ಎಂದು ತಿಳಿಸಿದರು.
ಪ್ರೇರಣಾ ಸಭೆಯಲ್ಲಿ ಸಿ.ಎಸ್.ಸಿ ಪ್ರಾದೇಶಿಕ ಯೋಜನಾಧಿಕಾರಿ ನಾಗೇಶ್‌, ಗಂಗಾವತಿ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ, ಜಿಲ್ಲಾ ನೋಡೆಲ್‌ ಪರಶುರಾಮ, ತಾಲೂಕು ಟಿಎನ್‌ಓ ಸ್ವಾಮಿದಾಸ್‌, ಫಂಡ್‌ ಮ್ಯಾನೇಜರ್‌ ವಿಠ್ಠಲ್‌, ಐ.ಟಿ ಮ್ಯಾನೇಜರ್‌ ಲಕ್ಷ್ಮೀಕಾಂತಿ ಸೇರಿದಂತೆ ತಾಲೂಕಿನ್‌ 40 ಮಂದಿ ಸಿ.ಎಸ್.ಸಿ ಸೇವಾದಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
error: Content is protected !!
";