Ad image

ಕಳ್ಳತನವಾಗಿದ್ದ ಮೃತ ರೇಣುಕಾಸ್ವಾಮಿ ಒಡವೆಗಳು ಪತ್ತೆಯಾಗಿವೆ

Vijayanagara Vani
ಕಳ್ಳತನವಾಗಿದ್ದ ಮೃತ ರೇಣುಕಾಸ್ವಾಮಿ ಒಡವೆಗಳು ಪತ್ತೆಯಾಗಿವೆ

ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್‌ ಪಡೆದುಕೊಳ್ಳುತ್ತಿದ್ದು, ಕಳ್ಳತನವಾಗಿದ್ದ ಮೃತ ರೇಣುಕಾಸ್ವಾಮಿ ಒಡವೆಗಳು ಪತ್ತೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಕರಣ ಸಂಬಂಧ ದರ್ಶನ್‌ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಅಲಿಯಾಸ್‌ ರಘು ಕೂಡ ಬಂಧಿತನಾಗಿದ್ದು, ಕಳೆದು ಹೋಗಿದ್ದ ಒಡವೆಗೂ ಈತನಿಗೂ ಇರುವ ಸಂಬಂಧ ಬಹಿರಂಗವಾಗಿದೆ.

ಕಳ್ಳತನವಾಗಿದ್ದ ಮೃತ ರೇಣುಕಾಸ್ವಾಮಿ ಒಡವೆಗಳು ಆರೋಪಿ ರಾಘವೇಂದ್ರ ಮನೆಯಲ್ಲಿ ಪತ್ತೆಯಾಗಿದೆ. ನಿನ್ನೆ ಚಿತ್ರದುರ್ಗದ ಮಹಜರು ಸಮಯದಲ್ಲಿ ರಾಘವೇಂದ್ರ ಪತ್ನಿ ಬಳಿ ಇದ್ದ ರೇಣುಕಾಸ್ವಾಮಿ ಒಡವೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ರಾಘವೇಂದ್ರ ಮನೆಯಲ್ಲಿ ಸಿಕ್ಕ 4.5 ಲಕ್ಷ ರೂಪಾಯಿ ಕ್ಯಾಷ್, ಒಡವೆಗಳು ಹಾಗೂ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ.

ಆರೋಪಿಗಳ ಜೊತೆ ಹೋಗಿದ್ದ ರೇಣುಕಾಸ್ವಾಮಿ ಪಟ್ಟಣಗೆರೆಯಲ್ಲಿ ಶೆಡ್ ಒಳಗೆ ಹೋಗುವ ಮುನ್ನ ಕಾರಿನಲ್ಲಿ ಒಡೆವೆ ಬಿಚ್ಚಿಟ್ಟಿದ್ದಾನೆ. ತನ್ನ ಮೇಲೆ ಹಲ್ಲೆ ಮಾಡಬಹುದು ಎಂದು ಮೊದಲೇ ಊಹಿಸಿದ್ದ ರೇಣುಕಾಸ್ವಾಮಿ ಹಲ್ಲೆ ವೇಳೆ ಒಡೆವಗಳನ್ನು ಕಿತ್ತುಕೊಳ್ಳಬಹುದು ಎಂದು ಶೆಡ್ ಒಳಗೆ ಹೋಗುವ ಮುನ್ನ ಉಂಗುರ ಹಾಗೂ ಚೈನ್‌ಅನ್ನು ತೆಗೆದು ಕಾರಿನಲ್ಲಿ ಇಟ್ಟಿದ್ದ ಎನ್ನಲಾಗಿದೆ. ಘಟನೆ ಬಳಿಕ ಕಾರಿನಲ್ಲಿ ಚಿತ್ರದುರ್ಗಕ್ಕೆ ಹೋದ ಸಂದರ್ಭದಲ್ಲಿ ಆರೋಪಿ ಜಗ್ಗ ಹಾಗೂ ಅನುಕುಮಾರ್ ರಾಘವೇಂದ್ರ ಪತ್ನಿಗೆ ಆ ಆಭರಣಗಳನ್ನು ನೀಡಿದ್ದರು ಎನ್ನಲಾಗಿದೆ. ಕೊಲೆ ಪ್ರಕರಣ: ಮೃತ ರೇಣುಕಾ ಸ್ವಾಮಿ ಮನೆಗೆ ಫಿಲ್ಮ್ ಚೇಂಬರ್ ತಂಡ ಭೇಟಿ ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಕುಟುಂಬಕ್ಕೆ ಫಿಲಂ ಚೇಂಬರ್ ತಂಡ ಭೇಟಿ ನೀಡಿದೆ. ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ಮೃತನ ನಿವಾಸಕ್ಕೆ ಭೇಟಿ ನೀಡಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ಸುರೇಶ್ ಹಾಗೂ ತಂಡದವರು ಮೃತನ ಪೋಷಕರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು.

ಇನ್ನು ಫಿಲ್ಮ್ ಚೇಂಬರ್ ಅಧ್ಯಕ್ಷರು ಹಾಗೂ ತಂಡದ ಮುಂದೆ ಮೃತನ ಪೋಷಕರು ಮಗನ ಸಾವಿನ ಬಗ್ಗೆ ಕಣ್ಣೀರು ಹಾಕಿದರು. ನನ್ನ ಮಗ ತಪ್ಪು ಮಾಡಿದ್ದರೆ ನಮಗೆ ತಿಳಿಸಬಹುದಿತ್ತು ಅಥವಾ ಪೊಲೀಸ್ ದೂರು ಕೊಡಬಹುದಿತ್ತು. ಆದರೆ ಕೊಲೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಪೋಷಕರು ಕಣ್ಣೀರಿಟ್ಟರು. ಮೃತನ ಪೋಷಕರು ಹಾಗೂ ಪತ್ನಿಗೆ ತಲಾ ಎರಡೂವರೆ ಲಕ್ಷ ರೂಪಾಯಿ ಧನಸಹಾಯ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಲನ ಚಿತ್ರರಂಗದ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ.ಎನ್ ಸುರೇಶ್ ನಡೆದಿರುವ ಘಟನೆಗೆ ಕ್ಷಮಾಪಣೆ ಕೇಳಿದರು. ಸಿನಿಮಾ ಇಂಡಸ್ಟ್ರಿಯಿಂದ ದರ್ಶನ್ ಬ್ಯಾನ್ ಮಾಡುವ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ನಿರ್ಮಾಪಕರ ಬಳಿ‌ ಚರ್ಚೆ ಮಾಡಬೇಕು ಪೊಲೀಸರು ಹಾಕುವ ಚಾರ್ಚ್ ಶೀಟ್ ನೋಡಿ‌ ನಿರ್ಧಾರ ಮಾಡಬೇಕು. ನಾವು ಇಂದು ಚಲನ ಚಿತ್ರ ರಂಗವನ್ನು ಉಳಿಸಬೇಕಿದೆ. ಯಾರೊಬ್ಬರಿಗೋ ನಾವು ತಗ್ಗುವುದಿಲ್ಲ. ಕನ್ನಡ ಚಲನಚಿತ್ರ ರಂಗ ಇಂದು ಅಳಿವಿನ ಅಂಚಿನಲ್ಲಿದೆ ಅದನ್ನು ಉಳಿಸಬೇಕಿದೆ ಎಂದರು.

Share This Article
error: Content is protected !!
";