ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾಗಳ ವಿಶ್ವವಿದ್ಯಾಲಯ: 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Vijayanagara Vani
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾಗಳ ವಿಶ್ವವಿದ್ಯಾಲಯ: 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಬೆಂಗಳೂರು: ಜೂನ್, 21: ಇಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾಗಳ ವಿಶ್ವವಿದ್ಯಾಲಯ, ಇರುವಕ್ಕಿ ಹಾಗೂ ಕೃಷಿ ಮಹಾವಿದ್ಯಾಲಯ ಶಿವಮೊಗ್ಗ
ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಅತ್ಯುತ್ತಮವಾಗಿ ಮತ್ತು ಶಿಸ್ತುಬದ್ದವಾಗಿ ಯೋಗ ಅಸನಗಳನ್ನು ಮಾಡುವುದರ ಮೂಲಕ ಯೋಗ ದಿನಾಚರಣೆಯನ್ನು ನಡೆಯಿತು.

ಡಾ. ಡಿ.ತಿಪ್ಪೇಶ್ ಪ್ರಭಾರಿ (ಡೀನ್) ಅವರು ಮಾತನಾಡಿ ‘ವಿಶ್ವಕ್ಕೆ ಯೋಗವನ್ನು ಪರಿಚಸಿದ್ದು ಭಾರತ, ಯೋಗ ನಮ್ಮ ದೇಶದ ಹೆಮ್ಮೆವಾಗಿದೆ. ಯೋಗ ನಮ್ಮ ಆರೋಗ್ಯ ಸಂಜೀವಿನಿ. ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳೋಣ, ಆರೋಗ್ಯವಂತರಾಗೋಣ’ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾನಿಲಯದ ಡಾ. ಗಿರೀಜೇಶ್, ಡಾ.ಶರಣು ಬಸಪ್ಪ ದೇಶಮುಖ್, ಡಾ.ರಾಘವೇಂದ್ರ, ಡಾ.ನಂದೀಶ್, ಡಾ.ಪ್ರಶಾಂತ್, ಡಾ. ಬ್ರಿಜೇಶ್, ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಭೋದಕೇತರರು, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಯಲ್ಲಪ್ಪ ಎಂ. ಇದೇ ವೇಳೆ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗಾಸನದಲ್ಲಿ ಭಾಗವಹಿಸಿದರು.

WhatsApp Group Join Now
Telegram Group Join Now
Share This Article
error: Content is protected !!