Ad image

ರಾಜ್ಯದ ವಿವಿಧ ಸ್ಥಳಗಳಲ್ಲಿ 10 ನೇ ಅಂತರಾಷ್ಟ್ರೀಯ ಯೋಗಾ ದಿನಾಚರಣೆಯನ್ನು ಆಚರಿಸಲಾಯಿತು.

Vijayanagara Vani
ರಾಜ್ಯದ   ವಿವಿಧ  ಸ್ಥಳಗಳಲ್ಲಿ 10 ನೇ ಅಂತರಾಷ್ಟ್ರೀಯ ಯೋಗಾ ದಿನಾಚರಣೆಯನ್ನು ಆಚರಿಸಲಾಯಿತು.

 ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ 10 ನೇ ಅಂತರಾಷ್ಟ್ರೀಯ ಯೋಗಾ ದಿನಾಚರಣೆಯನ್ನು ಆಚರಿಸಲಾಯಿತು.

 ಗಂಗಾವತಿ ತಾಲೂಕಿನ ಡಣಾಪೂರ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಳಗ್ಗೆ ಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಯೋಗಾಬ್ಯಾಸ ವಿವಿದ ಆಸನ ಪ್ರಾಣಾಯಾಮ ಸೇರಿದಂತೆ ದ್ಯಾನ ಮೂಲಕ ಯೋಗದ ಮಹತ್ವವನ್ನು ತಿಳಿಸಲಾಯಿತು.

  ವೇಳಾ ಶಾಲೆಯ ಶಿಕ್ಷಕ ವೃಂದದ ಸಹಯೋಗದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳ ಯೋಗ ತರಬೇತಿದಾರ ತಂಡ ವತಿಯಿಂದ ಮತ್ತು ಶಾಲೆಯ ಹಳೆ ವಿದ್ಯಾರ್ಥಿನಿ ಯೋಗ ತರಬೇತಿದಾರರಾದ ದೀಪಾ ಬಾಳಾಪುರ ಮಾತನಾಡಿ ಯೋಗ ದ್ಯಾನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ವ್ಯಕ್ತಿಗಳಾಗಿ ಹಾಗೂ ಶೈಕ್ಣಣಿಕ ರಂಗದಲ್ಲಿ ಎನನ್ನು ಬೇಕಾದರು ಸಾದಿಸುವ ಶಕ್ತಿ ನೀಡಬಲ್ಲದು ಎಂದರು .

ಶಾಲೆಯ ಶಿಕ್ಷಕರಾದ ಚನ್ನಬಸಪ್ಪ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ದ್ಯಾನ ಮತ್ತುವಯೋಗದಂತಹ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವಿರಿ ನಿತ್ಯ ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇಹದ ಸ್ಥಿತಿ ಹಾಗೂ ಮಾನಸಿಕ ಸ್ಥಿತಿ ಸುಗಮವಾಗಿರುತ್ತದೆಂದರು.

  ವೇಳಾ ಶಾಲೆಯ ಎಸ್ಡಿಎಂ ಸಿ ಅದ್ಯಕ್ಷರಾದ ಮೈಬೂಬ ಪಾಷ್ ಶಾಲೆಯ ಶಿಕ್ಷಕರಾದ ಮಾಂತೇಶ ,ಅಯ್ಯನಗೌಡ ,ಚನ್ನಬಸಪ್ಪ ,ಸೈಯಾದ ಸರ್ ,ಕಲಾವತಿ ಹಾಗೂ ಯೋಗ ಶಿಕ್ಷಕರಾದ ಹನುಮೇಶ ಭಾವಿಕಟ್ಟಿ ,ಬಸವರಾಜ ,ರಾಘವೇಂದ್ರ ,ದೀಪಾ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಶಾಲೆಯ ಮಕ್ಕಳು ಭಾಗಿ ಇದ್ದರು.

 ಯೋಗದಿಂದ ಮಾನಸಿಕ ನೆಮ್ಮದಿ  ಕಾಯಿಲೆಗಳು  ದೂರ,: ಜಿಲ್ಲಾಧಿಕಾರಿ.ಎಂ. ಎಸ್. ದಿವಾಕರ

 

ಹೊಸಪೇಟೆಇಂದಿನ ಬದುಕು ಅತ್ಯಂತ ಒತ್ತಡ ದಿಂದ ಕೂಡಿದೆ. ಇದರಿಂದಾಗಿ   ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದೇವೆ. ಪ್ರತಿ ಮನೆಯಲ್ಲೂ ಅರೆಹುಚ್ಚರು ಇದ್ದಾರೆ  ಇದು  ಅತಂಕ ಕಾರಿ ಬೆಳವಣಿಗೆ ಯಾಗಿದೆ, ಇದಕ್ಕೆ ಕಾರಣ ನಮ್ಮ ಮೊಬೈಲ್ ಗಳು, ಪ್ರತಿ ಮನೆಯಲ್ಲಿ ದೊಡ್ಡ ವರು ಹಾಗು ಮಕ್ಕಳು ಮೊಬೈಲ್ ಬಳಸುತ್ತಿದ್ದು ಇದು ಮಾನಸಿಕ ಅಸಮತೋಲನ ಕ್ಕೆ ಕಾರಣ ವಾಗಿದೆ .ಇದನ್ನು  ಯೋಗದಿಂದ ಮಾತ್ರ ನಿವಾರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು. ಅವರು ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ವನ್ನು ಪ್ರೀಡಂ ಪಾರ್ಕ್ ನಲ್ಲಿ ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.

ಆಯುಷ್ ಇಲಾಖೆ, ಜಿಲ್ಲಾಡಳಿತ ವಿಜಯನಗರ ಹಾಗೂ ಪತಂಜಲಿ ಯೋಗ ಸಮಿತಿ ಪ್ರಜಾಪತಿ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯ ಸೇರಿದಂತೆ  ಸಹಿತ ವಿವಿಧ ಇಲಾಖೆಗಳ ವತಿಯಿಂದ ಶುಕ್ರವಾರ ಬೆಳಿಗ್ಗೆ ಎಸ್.ಕೆ.ಎಂ..ಪಿ.ಎಲ್  ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಜಿಲ್ಲಾ ಮಟ್ಟದ 10ನೇ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೆ ದಕ್ಷಿಣ ಭಾರತಕ್ಕೆ ಒಂದೇ ಒಂದು ಮಾನಸಿಕ ಆರೋಗ್ಯ ಕೇಂದ್ರ ಇತ್ತ, ಬಳಿಕ ರಾಜ್ಯಕ್ಕೆ ಒಂದು ಮಾನಸಿಕ ಕೇಂದ್ರ ಬಂತು. ಇಂದು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾನಸಿಕ ಕಾಯಿಲೆಗೆ ಗುಳಿಗೆ ಕೊಡಲಾಗುತ್ತಿದೆ. ಇದು ಮಾನಸಿಕ ಕಾಯಿಲೆ ಹೆಚ್ಚಿದ್ದರ ಸೂಚನೆ ಎಂದರು.

ದೈಹಿಕ ಕಾಯಿಲೆಗಳಿಗಿಂತಲೂ ಮಾನಸಿಕ ಕಾಯಿಲೆ ಬಹಳ ಅಪಾಯಕಾರಿ. ಅದು ಸಮಾಜಕ್ಕೇ ಕೇಡು ಉಂಟುಮಾಡುವಂತದ್ದು. ಒತ್ತಡದಿಂದ ಬರುವ ನಮ್ಮ ಮಾನಸಿಕ ಕಾಯಿಲೆಯನ್ನು ಯೋಗ, ಪ್ರಾಣಾಯಾಮಗಳಿಂದ ದೂರ ಮಾಡಬಹುದು ಎಂದರು. ಯೋಗ ದಿನಚರಿಯ ಒಂದು ಭಾಗವಾಗಬೇಕು ಎಂದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳು, ಯುವಜನತೆ ಇದರತ್ತ ಇನ್ನಷ್ಟು ಆಕರ್ಷಿತರಾದರೆ ಉತ್ತಮ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ. ಮಾತನಾಡಿ, ಒತ್ತಡ ನಿರ್ವಹಿಸಲು ಯೋಗ ಪರಿಣಾಮಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

 ಆಯುಷ್ ಇಲಾಖೆಯ ಡಾ.ಮುನಿವಾಸುದೇವ ರೆಡ್ಡಿ, ಡಾ.ಗುರುಬಸವರಾಜ್, ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತದ ವರಿಷ್ಠರು ಹಾಗೂ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಪ್ರಜಾಪಿತ ಬ್ರಹ್ಮಕುನಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾನಸ ಇತರರು ಪಾಲ್ಗೊಂಡಿದ್ದರು.

 ಬಳಿಕ ನಡೆದ ಸಾಮೂಹಿಕ ಯೋಗ ಶಿಬಿರಕ್ಕೆ ಭವರಲಾಲ್ ಆರ್ಯ ಮಾರ್ಗದರ್ಶನ ನೀಡಿದರು. ಯುವ ಭಾರತ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಯೋಗ ಸಾಧಕ ಬಾಲಚಂದ್ರ ಶರ್ಮಾ, ಛೇಂಬರ ಆಪ್ ಕಾಮರ್ಸ್ ಅಧ್ಯಕ್ಷ ಅಶ್ವಿನ ಕೊತಂಬರಿ, ಡಾ.ಎಫ್.ಟಿ.ಹಳ್ಳಿಕೇರಿ, ಅನಂತ ಜೋಶಿ, ಶ್ರೀರಾಮ ವಿಠೋಬಣ್ಣ, ಶ್ರೀಧರ, ಅಶೀಕ ಚಿತ್ರಗಾರ, ಯೋಗಸಾಧಕರು, ಆಯುಷ ಇಲಾಖೆಯ ಅಧಿಕಾರಿಗಳು, ಯೋಗಾಸಕತ್ತರು ಪಾಲ್ಗೊಂಡಿದ್ದರು.

ಯುವ, ವಿದ್ಯಾರ್ಥಿಗಳ ಉತ್ಸಾಹ: ಸಾಮೂಹಿಕ ಯೋಗ ಶಿಬಿರದಲ್ಲಿ 600ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಹಲವಾರು ಶಾಲೆಗಳ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಯೋಗ ಶಿಬಿರದ ಬಳಿಕ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು. ಯೋಗ ಶಿಕ್ಷಕರೂ ಆಗಿರುವ ಆಕಾಶವಾಣಿ ಕೇಂದ್ರದ ಉದ್ಘೋಷಕಿ ನಾಗರತ್ನ ಕಾರ್ಯಕ್ರಮ ನಿರೂಪಿಸಿದರು.

ಮನಸ್ಸು ಮತ್ತು ಬುದ್ಧಿಯನ್ನು ನಿಯಂತ್ರಿಸುವ ಜ್ಞಾನ ಸಂಪಾದನೆಯೇ ಯೋಗ : ಉದಯ್ 

ದೈಹಿಕ ವ್ಯಾಯಾಮ ಮತ್ತು ಆಸನಗಳಿಂದ ಮುಂದುವರಿದು ಮನಸ್ಸು ಮತ್ತು ಬುದ್ಧಿಯನ್ನು ನಿಯಂತ್ರಿಸುವ ಜ್ಞಾನ ಸಂಪಾದನೆಯೇ ಯೋಗ, ಎಲ್ಲಿ ಏನನ್ನು ಕಳೆದುಕೊಂಡಿದ್ದೀರಿ ಏನನ್ನು ಪಡೆಯಲು ಇಚ್ಚಿಸಿದ್ದೀರಿ ಅದನ್ನು ಪಡೆಯಲು ಮತ್ತು ಅಸಾಧ್ಯವಾದುದನ್ನು ಸಾಧಿಸಲು ಯೋಗದಿಂದ ಮಾತ್ರ ಸಾಧ್ಯ. ಸಂಸ್ಕಾರ ಮತ್ತು ಆರೋಗ್ಯವಂತ ವ್ಯಕ್ತಿ ನಿರ್ಮಾಣದಿಂದ ಆದರ್ಶ ಸಮಾಜ ನಿರ್ಮಿಸುವಲ್ಲಿ ಯೋಗ ಸಹಕಾರಿ ಎಂದು ಬೃಂದಾ ಶಾಲೆಯ ದೈಹಿಕ ಶಿಕ್ಷಕ ಮತ್ತು ಯೋಗಪಟು ಉದಯ್ ಕುಮಾರ್ ತಿಳಿಸಿದರು.

 ಅವರು ಪಟ್ಟಣದ  ಸಮೀಪದ ದಮ್ಮೂರು ಗ್ರಾಮದಲ್ಲಿನ ಬೃಂದಾ ನ್ಯಾಷನಲ್ ಶಾಲೆಯಲ್ಲಿ ಶುಕ್ರವಾರ ಯೋಗ ದಿನಾಚರಣೆಯ ನಿಮಿತ್ತ  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಮಕ್ಕಳಿಗೆ ಯೋಗ ಹೇಳಿಕೊಟ್ಟು  ನಂತರ ಮಾತನಾಡಿದ ಅವರು 

 ಪ್ರಾಚೀನ ಕಾಲದ ವೈದ್ಯಕೀಯ ಸಂಸ್ಕೃತಿಯನ್ನು ಚಿಕಿತ್ಸೆ ನೀಡುವ ಮೂಲಕ ಹುಟ್ಟಿಕೊಂಡ ಯೋಗವು ದೈಹಿಕ, ಮಾನಸಿಕ, ಆರೋಗ್ಯದ ಮೇಲೆ ಪರಿಣಾಮ ಬೀರುವ ಅಭ್ಯಾಸ ಮತ್ತು ಶಿಸ್ತು ವ್ಯವಸ್ಥೆಯಾಗಿದೆ. ಇಂದು ಪ್ರಪಂಚದಾದ್ಯಂತ ಯೋಗ  ಆಚರಣೆಯಲ್ಲಿದೆ. ದೇಹಕ್ಕೆ ಮನಸ್ಸಿಗೆ ವಿಶ್ರಾಂತಿ ನೀಡುವ ಮನೋದೈಹಿಕ ಎಲ್ಲಾ ಕಾಯಿಲೆ ನಿವಾರಣೆಯಾಗಿಕೆಟ್ಚ ಯೋಚನೆಗಳ ಮೇಲೆ ಹತೋಟಿ ತಂದು ಶಾಂತಿನೆಮ್ಮದಿಯಿಂದ ಆಂತರಿಕ ದೋಷವನ್ನು ಯೋಗದ ಮೂಲಕ ನಿವಾರಿಸಿಕೊಳ್ಳಬಹುದು ಎಂದರು.

ನಂತರಶಾಲೆಯ ಪ್ರಿನ್ಸಿಪಾಲ್ ಥಾಮಸ್ ಸಂತೋಷ್ ಮಾತನಾಡಿ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಒಂದು ಪ್ರಮುಖ ಹೆಜ್ಜೆ. ಪ್ರತಿನಿತ್ಯ ಬೆಳಿಗ್ಗೆ ಕನಿಷ್ಠ ೩೦ ನಿಮಿಷಗಳಾದರೂ ಧ್ಯಾನ ಮಾಡುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಸದೃಢತೆ ಸುಧಾರಿಸುತ್ತದೆ ಎಂದು ಕರೆ ನೀಡಿದರು.

 

ಶ್ರೀ ಶಾರದಾ ಇಂಟರ್ನ್ಯಾಷನಲ್ ಸ್ಕೂಲ್ ಸೇರಿದಂತೆ ವಿವಿಧ ಶಾಲೆಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಶ್ರೀ ಶಾರದಾ ಇಂಟರ್ನ್ಯಾಷನಲ್ ಸ್ಕೂಲ್ ಕಾರಟಗಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅಮರೇಶ್ವರ ಸ್ವಾಮಿ ನಾಗನಕಲ್ ಇವರ ನೇತೃತ್ವದಲ್ಲಿ ಆಚರಿಸಲಾಯಿತು. ಸಂದರ್ಭದಲ್ಲಿ ಶ್ರೀ ಶಾರದಾ ಇಂಟರ್ನ್ಯಾಷನಲ್ ಸ್ಕೂಲ್ ಅಧ್ಯಕ್ಷರಾದ ಶ್ರೀಮತಿ ಶಾರದಾ ಮಲ್ಲಿಕಾರ್ಜುನ್. ಶಿಕ್ಷಕಿಯರು ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳು ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಯೋಗದ ಮಹತ್ವವನ್ನು ತಿಳಿದುಕೊಳ್ಳುವುದರ ಜೊತೆಗೆ ಅಂತರಾಷ್ಟ್ರೀಯ ಯೋಗಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ  ಆಚರಿಸಿದರು. ನಂತರ ಶರಣಬಸವೇಶ್ವರ ವಿದ್ಯಾಸಂಸ್ಥೆ ಗ್ಲೋಬಲ್ಸ್ಕೂಲ್, ಶಾಂತಿನಿಕೇತನ ಶಾಲೆ, ನ್ಯಾಷನಲ್ ಸ್ಕೂಲ್, ಪ್ರತಿಭಾ ಶಾಲೆ, ವಿಜ್ಞಾನ ಜ್ಯೋತಿ,, ವಿವಿಧ ಶಾಲೆಗಳಲ್ಲಿ ಅಂತಾರಾಷ್ಟ್ರೀಯ ಯೋಗದಿನಾಚಣೆ ನಡೆಸಿದರು. ವೇಳೆ ಶಾಲಾ ಶಿಕ್ಷಮಿತ್ರರು ವಿದ್ಯಾರ್ಥಿಗಳು ಭಾಗವಹಿಸಿದ್ದರು,

5

ಯೋಗ ಕೇವಲ ಪ್ರಚಾರದ ವಾರ್ಷಿಕೋತ್ಸವ ಆಗದೇ,ಯೋಗ ನಿತ್ಯೋತ್ಸವವಾಗಬೇಕು. .. ಹೆಬ್ಬಾಳ್ ನಾಗಭೂಷಣಶ್ರೀ.

ಕಂಪ್ಲಿ- ಯೋಗ ಕೇವಲ ಪ್ರಚಾರದ ವಾರ್ಷಿಕೋತ್ಸವ ಆಗದೇ,ಯೋಗ ದೈನಂದಿನ ನಿತ್ಯೋತ್ಸವದಾಗ ಮಾತ್ರ ಉತ್ತಮ ಆರೋಗ್ಯ ಸುಂದರ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವೆಂದು ಹೆಬ್ಬಾಳ್ ಬ್ರಹನ್ಮಠದ ಪೀಠಾಧೀಪತಿಗಳಾದ ಷ.ಬ್ರ.ಶ್ರೀ ನಾಗಭೂಷಣ ಶಿವಾಚಾರ್ಯ ಶ್ರೀಗಳು ತಿಳಿಸಿದರು.

  ಅವರು ಸ್ಥಳೀಯ ಪತಂಜಲಿ ಯೋಗ ಸಮಿತಿಯು, ಸಣಾಪುರ ರಸ್ತೆಯ ವೀರಶೈವ ಸಂಘದ ಶಾರದಾ ಶಾಲೆ ಆವರಣದಲ್ಲಿ  “10ನೇ ಅಂತರಾಷ್ಟಿçÃಯೋಗ” ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ವಿಶೇಷ ಆರ್ಶೀವಚನ ನೀಡಿ ಆಧುನಿಕ ಜಗತ್ತಿನ ಒತ್ತಡದ ಜೀವನದಲ್ಲಿ ಕುಟ್ಟುವ, ರುಬ್ಬುವ, ಬೀಸುವ ದೈನಂದಿನ ಪ್ರಕೃತಿದತ್ತ ಕೆಲಸಗಳಿಂದ ವಿಮುಖರಾಗಿ ಪ್ರತಿಯೊಂದನ್ನು ಯಂತ್ರಗಳಿAಕೆಲಸ ಮಾಡಿಸುತ್ತಿರುವ ಕಾರಣ ಅನೇಕ ರೋಗರುಜಿನಗಳಿಗೆ ಈಡಾಗಬೇಕಾಗಿದೆ. ಯೋಗ,ಪ್ರಣಾಯಾಮ, ಪ್ರತ್ಯಾಹಾರ,ಧಾರಣ,ಧ್ಯಾನ ಸಮಾಧಿಗಳಿಂದ ಮನುಷ್ಯ ಸಂಪೂರ್ಣ ಆರೋಗ್ಯವಂತನಾಗಿರಬಹುದು

ಹಸಿವು ಹೆಚ್ಚಿಸಲು, ಚಿಂತೆ ಮುಕ್ತರಾಗಲು ಮನಸ್ಸು ಖುಷಿಯಾಗಿಡಲು ಯೋಗ ಸಾಧನವಾಗಿದೆ. ಕಲುಷಿತ ಮನಸ್ಸಿನಿಂದ ನಿರ್ಮಲ ಮನಸ್ಸನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಯೋಗ ಬಳಕೆಯಾಗಬೇಕಿದೆ. ಯೋಗಾಭ್ಯಾಸ ಆರಂಭ ಶೂರತ್ವವಾಗದೇ ನಿತ್ಯ ನಿರಂತರ ಆಚರಣೆಯಾಗಬೇಕು. ಜ್ಞಾನದೊಡನೆ ಧ್ಯಾನ ಅಳವಡಿಸಿಕೊಳ್ಳುವಂತೆ ಯೋಗದ ಮಹತ್ವವನ್ನು ಹೇಳಿದರು. ಯೋಗದಲ್ಲಿ ನಿಜವಾದ ಸುಖವಿದೆ, ಇಂದ್ರಿಯಗಳ ನಿಗ್ರಹದಿಂದ ಉತ್ತಮ ಸಾಧನೆಯನ್ನು ಮಾಡಬಹುದಾಗಿದ್ದು, ಅಷ್ಟಾಂಗಗಳನ್ನು ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ಯೋಗ ಪಟುವಾಗಬಹುದಾಗಿದ್ದು,ಆಧುನಿಕ ಉಪಕರಣಗಳು, ಮೊಬೈಲ್ ಹಾಗೂ ಪಾಶ್ವಿಮಾತ್ಯ ಜ್ಞಾನ ತಲೆಕೆಡಿಸಿದ್ದರೆ,ಪತಂಜಲಿ ಯೋಗ ಸರಿಯಾದ ಜ್ಞಾನಕ್ಕೆ ತಂದಿದೆ.ಮನೆ,ಮನೆಗಳು ಯೋಗ ಕೇಂದ್ರಗಳಾಗಬೇಕು,ಭಾರತದ ಸಂಸ್ಕೃತಿ ಶೂರತ್ವವನ್ನು ಕಲಿಸಿದೆಯೇ ಹೊರತು ವಿಕೃತತ್ವವನ್ನು ಅಲ್ಲ, ಇಡೀ ಜಗತ್ತಿಗೆ ಯೋಗದ ಮಹತ್ವನ್ನು ಸಾರಿದ ಪತಂಜಲಿ ಮಹರ್ಷಿ ಸನಾತನ ಕಾಲದ ಮಹರ್ಷಿಗಳಾದರೆ, ಪ್ರಧಾನಮಂತ್ರಿ ನರೇಂದ್ರಮೋದಿ ಆಧುನಿಕ ಪತಂಜಲಿ ಮಹರ್ಷಿಗಳಾಗಿದ್ದಾರೆಂದರು.

  ಪತಂಜಲಿ ಯೋಗ ಸಮಿತಿ  ತಾಲ್ಲೂಕು ಪ್ರಬಾರಿ ಡಿ.ಮೌನೇಶ್ ಪ್ರಸ್ತಾವಿಕವಾಗಿ ಮಾತನಾಡಿ ಕಂಪ್ಲಿಯಲ್ಲಿ ಪತಂಜಲಿ ಯೋಗ ಸಮಿತಿ ನಡೆದು ಬಂದ ದಾರಿಯನ್ನು ವಿವರಿಸಿ ಸಹಕರಿಸಿದ ಗಣ್ಯರಿಗೆ ಅಭಿನಂದಿಸಿದರು.

 ಹೊಸಪೇಟೆ ಪತಂಜಲಿ ಯೋಗ ಸಮಿತಿಯ ಸಾಧಕರಾದ ಬಸವರಾಜ ನಾಲ್ವತ್ತವಾಡ,ಶ್ರೀಮತಿ ನಾಲ್ವತ್ತವಾಡ, ಪತಂಜಲಿ ಯೋಗ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಕಲ್ಗುಡಿ ರತ್ನಮ್ಮ, ಕಂಪ್ಲಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಟಿ.ಕೊಟ್ರೇಶ್, ತಾಲ್ಲೂಕು ಪ್ರಭಾರಿ ಡಿ.ಮೌನೇಶ್, ಎಸ್.ಜಿ.ಚಿತ್ರಗಾರ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.

    ಹೊಸಪೇಟೆ ಪತಂಜಲಿ ಯೋಗ ಸಮಿತಿಯ ಸಾಧಕರಾದ ಬಸವರಾಜ ನಾಲ್ವತ್ತವಾಡ ಮತ್ತು ಶ್ರೀಮತಿ ನಾಲ್ವತ್ತವಾಡ ಯೋಗ ಆಸನಗಳನ್ನು ಮಾಡುವ ಮೂಲಕ ಪಾಲ್ಗೊಂಡ ಯೋಗ ಪಟುಗಳಿಗೆ ಮಾರ್ಗದರ್ಶನ ನೀಡಿದರು. 10 ನೇ ಅಂರ‍್ರಾಷ್ಟಿಯೋಗ ದಿನಾಚರಣೆಯ ಅಂಗವಾಗಿ ಬೆಳಿಗ್ಗೆ 6ಗಂಟೆಯಿAದ 6.45.ರತನಕ 45 ನಿಮಿಷಗಳ ಯೋಗ ಪ್ರಾತ್ಯಾಕ್ಷಿತೆ ಮೂಲಕ ಪ್ರದರ್ಶಿಸಿದರು. ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳ ಯೋಗಪಟುಗಳು, ಯೋಗ ಸಾಧಕರು, ಆಸಕ್ತರು,ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

   ನಂತರ ಪತಂಜಲಿ ಯೋಗ ಸಮಿತಿ ಮಹಿಳಾ ಸದಸ್ಯರಿಂದ ವಿವಿಧ ಸಾಮೂಹಿಕ ನೃತ್ಯ,ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

7 ಯೋಗ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ : ವಿಶ್ವನಾಥ ಹಿರೇಮಠ

 

 ಮಸ್ಕಿ : ಯೋಗ ಮಾಡಲೂ ಯೋಗ ಬೇಕು. ಯೋಗಕ್ಕೆ ಎಲ್ಲರಿಗೂ ಸಮಯ, ಮನಸ್ಸು ಸಂದರ್ಭ ಕೂಡಿ ಬರುವುದಿಲ್ಲ. ಊಟ ನಿದ್ದೆಯಂತೆಯೇ ಯೋಗವೂ ದಿನನಿತ್ಯದ ಆದ್ಯತೆಯಾದರೆ, ಆರೋಗ್ಯವೂ ನಮ್ಮ ಕೈಯಲ್ಲೇ ಇರುತ್ತದ.

 ದೇಹ ಹಾಗೂ ಮನಸ್ಸನ್ನು ತಮ್ಮದೇ ಹತೋಟಿಯಲ್ಲಿಡುವ ಮೂಲಕ ಆತ್ಮತೃಪ್ತಿ ಹೊಂದುವ ಮಾರ್ಗವೇ ಯೋಗ. ಇವೆರಡರ ಹತೋಟಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ವಸತಿ ಶಾಲೆಯ ಮುಖ್ಯ ಗುರುಗಳಾದ ವಿಶ್ವನಾಥ ಹಿರೇಮಠ ರವರು ಹೇಳಿದರು.

 ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಲಿಂಗಸ್ಗೂರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಅಡವಿಭಾವಿ ತಾಂಡಾ ಮಸ್ಕಿ ವಸತಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ  

ಕಾರ್ಯಕ್ರಮ ದಲ್ಲಿ ಮಾತನಾಡಿ ಯೋಗ ಕಲಿಯಬೇಕೆಂಬ ಹಂಬಲ ಪ್ರತಿಯೊಬ್ಬರಲ್ಲೂ ಮೂಡಲಿ. ನಾವೆಲ್ಲರೂ ಯೋಗಿಗಳಾಗೋಣ. ಮೂಲಕ ಯೋಗ್ಯ ಸಮಾಜ ನಿರ್ಮಾಣ ಮಾಡಿ, ಜೀವ ಜಗತ್ತಿಗೆ ಮಹತ್ವದ ಕೊಡುಗೆ ನೀಡೋಣ. ಸಾರ್ಥಕ ಸಮಾಜ ನಿರ್ಮಿಸಿ, ಮೂಲಕ ವಿಶ್ವ ಸ್ವಾಸ್ಥ್ಯಕ್ಕೆ ಯೋಗವೇ ಮದ್ದು ಎಂಬ ಸಂದೇಶ ನೀಡೋಣ ಎಂದರು.

 

ವೇಳೆ,ಶಾಲಾ ಮುಖ್ಯೋಪಾಧ್ಯಯರಾದ ವಿಶ್ವನಾಥ ಹಿರೇಮಠ ಶಿಕ್ಷಕರುಗಳಾದ ಅಮರೇಶ ವಿಜಯ ಇಂದಿರಾ ಬೇಗಂ ಸಿಬ್ಬಂದಿಗಳಾದ ಸುಜಾತ ಧನಸಿಂಗ ಶೇಖರಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 ಒತ್ತಡದ ಬದುಕಿಗೆ ಯೋಗ ಅತ್ಯವಶ್ಯಕ ಡಾ.ಶೈಲೇಂದ್ರ ಬೆಲ್ದಾಳೆ

ಒತ್ತಡದ ಬದುಕಿಗೆ ಯೋಗ ಅವಶ್ಯಕಯೋಗ ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಪ್ರತಿಯೊಬ್ಬರೂ ಯೋಗ ಮಾಡಬಹುದು. ಯೋಗ ಮಾಡುವುದರಿಂದ ಆರೋಗ್ಯವಂತರಾಗಿ ಬಾಳಬಹುದು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೆಂದ್ರ ಬೆಲ್ದಾಳೆ ಹೇಳಿದರು.

 ಬೀದರ್ ದಕ್ಷಿಣ ಕ್ಷೇತ್ರದ ಗೋರನಳ್ಳಿ ಗ್ರಾಮದ ಹೊರವಲಯದಲ್ಲಿರುವ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 10 ನೇ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ದೇಹಕ್ಕೆ ಆಹಾರ ಹೇಗೆ ಅಗತ್ಯವೋ, ಹಾಗೆಯೇ ಪ್ರತಿನಿತ್ಯ ಯೋಗ ಮತ್ತು ಧ್ಯಾನದ ಅಭ್ಯಾಸ ಅವಶ್ಯಕವಾಗಿವೆ. ಅಷ್ಟಾಂಗ ಯೋಗದ ಅನುಷ್ಠಾನದಿಂದ ಚಿತ್ತಚಂಚಲತೆ ನಿವಾರಣೆಯಾಗಿ ಮಾನಸಿಕ ಸ್ಥಿರತೆ ದೊರೆತು ವಿವೇಕ ಲಭಿಸುವುದು. ಕೋವಿಡ್ನಂಥ ಶ್ವಾಸಕೋಶ ಸಂಬಂಧಿ ರೋಗಗಳಿಗೆ ಯೋಗ ಅತ್ಯಂತ ಪರಿಣಾಮಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 ಯೋಗ ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆಯಾಗಿದೆ. ಯೋಗವು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆಪ್ರತಿಯೊಬ್ಬರೂ ನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದು ಹೇಳಿದರು. ಇನ್ನೂರ್ವ ಅತಿಥಿ

ಕಾಲೇಜು ನಿರ್ದೇಶಕಿ ಡಾ. ಉಮಾ ದೇಶಮುಖ ಮಾತನಾಡಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ, ಮಾತೆ ಡಾ. ದಾಕ್ಷಾಯಿಣಿ, ಚಿ. ದೊಡ್ಡಪ್ಪ ಅಪ್ಪ ಹಾಗೂ ಕಾರ್ಯದರ್ಶಿ ಬಸವರಾಜ ದೇಶಮುಖ ಅವರ ಮಾರ್ಗದರ್ಶನದಲ್ಲಿ ಕಾಲೇಜಿನಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಯೋಗ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾ ಬಿರಾದಾರ ಹಾಗೂ ವಿದ್ಯಾರ್ಥಿಗಳು ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.

ಕಾಲೇಜು ಪ್ರಾಚಾರ್ಯೆ ಡಾ. ವಿನಿತಾ ಪಾಟೀಲ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಶರಣಬಸವೇಶ್ವರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಸತೀಶ ಪ್ರತಾಪುರ ಉಪಸ್ಥಿತರಿದ್ದರು.

ಪ್ರೊ. ವಿಜಯಾನಂದ ಕಪಟೆ ನಿರೂಪಿಸಿದರು. ಎನ್.ಎಸ್.ಎಸ್. ಅಧಿಕಾರಿ ಬಸವಲಿಂಗ ಸ್ವಾಮಿ ವಂದಿಸಿದರು.

ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು, ಚನ್ನಬಸಮ್ಮ ಬಿಸಿಎ, ಬಿ.ಕಾಂ ಕಾಲೇಜು, ಶರಣಬಸವೇಶ್ವರ ಪದವಿಪೂರ್ವ ಕಾಲೇಜು,ಶರಣಬಸವ ಪಬ್ಲಿಕ್ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

ಇಂದು ಸಿಬಿಎಸ್ಇ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕೊಟ್ಟೂರು : ಪಟ್ಟಣದ ಇಂದು ಸಿಬಿಎಸ್‌  ಶಾಲೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಯಿತು

ಕಾರ್ಯಕ್ರಮವನ್ನು ಶಾಲೆ ಪ್ರಾಂಶುಪಾಲರಾದ ಚೇತನ್ ಕುಮಾರ್ ಅವರು ಉದ್ಘಾಟಿಸಿ ನಮ್ಮೆಲ್ಲರ ಜೀವನ ಆರೋಗ್ಯವಾಗಿರಲು ಮತ್ತು ಸದಾ ಸಕ್ರಿಯವಾಗಿರಲು ಯೋಗಾಭ್ಯಾಸ ಬಹಳ ಸಹಾಯಕವಾಗುತ್ತದೆಆಧುನಿಕ ಪ್ರಪಂಚದಲ್ಲಿ ಅತಿ ಹೆಚ್ಚು ಮನ್ನಣೆಗಳಿಸಿಕೊಳ್ಳುತ್ತಿರುವ ಯೋಗವನ್ನು ಆಧ್ಯಾತ್ಮಿಕ, ದೈಹಿಕ ಸಾಮರ್ಥ್ಯ, ಸಂಯಮ ಕಾಯ್ದು ಕೊಳ್ಳಲು ಮತ್ತು ಸಾಧನೆ ಮಾಡಲು ಯೋಗವು ಸಹಾಯಕವಾಗಿದೆ ಎಂದು ತಿಳಿಸಿದರು

 ವೇಳೆ ಕನ್ನಡ ಮಾಧ್ಯಮ ಪ್ರೌಢ ಶಾಲೆ ಮುಖ್ಯೋಪಾಧ್ಯಾರಾದ ಬಸವರಾಜ ಬಿ ಮಾತನಾಡಿ ಪ್ರಸ್ತುತ ವಿಶ್ವದಾದ್ಯಂತ ನಾನಾ ರೂಪಗಳಲ್ಲಿ ಹರಡಿಕೊಂಡಿರುವ ಯೋಗದ ಮೂಲ ಇರುವುದು ಭಾರತದ ಮಣ್ಣಿನಲ್ಲಿ ಮಹಾ ಯೋಗ ಗುರು ಎಂದು ಕರೆಯಲ್ಪಡುವ ಪತಂಜಲಿ ಮಹರ್ಷಿ ಇದರ ಪ್ರವರ್ತಕರು, ಋಷಿ ಮುನಿಗಳಿಂದ ಆರಂಭವಾಗಿ ಇಂದಿನವರೆಗೆ ನಾನಾ ಮಾರ್ಪಡುಗಳೊಂದಿಗೆ. ಯೋಗ ಅನೇಕರ ಜೀವನದ ಅಭಿಭಾಜ್ಯ ಅಂಗವಾಗಿದೆ. ಎಂದು ಅಭಿಪ್ರಾಯ ಪಟ್ಟರು. 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಟ್ಟೂರಿನ ಹಸಿರು ಹೊನಲು ಸ್ವಯಂ ಸೇವ ಸಂಘದ ಸಂಸ್ಥಾಪಕರಾದ ನಾಗರಾಜ ಬಂಜಾರ್ ಇವರು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು ಅವರೊಂದಿಗೆ ಶಾಲೆಯ ದೈಹಿಕ ಶಿಕ್ಷಕರಾದ ವೀರಭದ್ರಗೌಡ, ಶಂಭುಲಿಂಗಯ್ಯ ಹಾಗೂ ಮಂಗಳ ಅವರು ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮವನ್ನು ಶಾಲೆಯ ಸುಪುತ್ರ ಹೆಚ್ ನಿರೂಪಿಸಿದರು, ಸುಪ್ರಿಯ ಬಿ ಟಿ ಅವರು ವಂದಿಸಿದರು ವೇಳೆ ಸಿಬಿಎಸ್ ಶಾಲೆ ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಿಬ್ಬಂದಿಯವರು ಹಾಜರಿದ್ದರು

 ಮರಿಯಮ್ಮನಹಳ್ಳಿ: ಪಟ್ಟಣದ ಸಮೀಪ ಅಯ್ಯನಹಳ್ಳಿ ರಸ್ತೆಯಲ್ಲಿರುವ ಶ್ರೀ ಸಾಯಿ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.


       ನಂತರ  ಸರಳ ವ್ಯಾಯಾಮಗಳು,ಯೋಗಾಸನಗಳು ಮತ್ತು ಪ್ರಾಣಾಯಾಮಗಳು ಮಾಡಲಾಯಿತು. ಶಾಲೆಯ ಆಡಳಿತಾಧಿಕಾರಿಯಾದ ಬಿ.ಎಂ.ಎಸ್. ಮೃತ್ಯುಂಜಯ ಯೋಗಾಸನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ನಿರ್ವಾಹಕರಾದ ಆರ್.ಪಷ್ಪಲತಾ ಅರುಣ್ ಕುಮಾರ್, ಮುಖ್ಯ ಗುರುಗಳು, ಬೋಧಕ ಮತ್ತು ಬೋಧಕೇತರ ವರ್ಗ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
error: Content is protected !!
";