ರಾಯಚೂರುಜೂ.21ರ ಶುಕ್ರವಾರ ದಂದು ತಾಲೂಕಿನ ಯರಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಯಚೂರು ವಿಶ್ವವಿದ್ಯಾಲಯ ಹಿಂದುಗಡೆ ಇರುವ ಕೊತ್ತಕುಂಟ ಅಮೃತ ಸರೋವರ ಕೆರೆಯ ದಂಡೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯತ್ ರಾಯಚೂರು ವತಿಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಪ್ರಕಾಶ ವಿ. ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯೊಳಗೆ ಬಹಳ ವರ್ಷಗಳ ಹಿಂದೆಯೇ ಯೋಗವು ಬೆರೆತು ಹೋಗಿದೆ. ಪ್ರಾಚೀನ ಕಾಲದಲ್ಲಿ ಹುಟ್ಟಿಕೊಂಡ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಅಬ್ಬಾಸವೇ ಯೋಗವಾಗಿದೆ. ಇಂದು ನಾವೆಲ್ಲರೂ 10ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದೇವೆ ಎಲ್ಲರಿಗೂ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಶುಭಾಶಯಗಳನ್ನು ತಿಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯೋಗ ಗುರುಗಳು ತಿಳಿಸಿ ಕೊಡುವ ಎಲ್ಲಾ ಅಭ್ಯಾಸಗಳನ್ನು ಇಂದು ಒಂದು ದಿನ ಮಾಡಿ ಬಿಡುವುದಲ್ಲ ಇದನ್ನು ಪ್ರತಿ ದಿನ ಆಸನಗಳನ್ನು ಅಭ್ಯಾಸ ಮಾಡುವುದನ್ನು ರೂಡಿಸಿಕೊಳ್ಳವುದು ಅವಶ್ಯಕತೆ ಇರುತ್ತದೆ. ಇಂದು ಭಾರತ ದೇಶ ಅಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಆಚರಣೆ ಮಾಡುವುದರ ಮೂಲಕ ದೇಶದ ಪ್ರತಿಯೊಂದು ಗ್ರಾಮಗಳ ವರೆಗೆ ತಲುಪಿದೆ.. ನಾವು ಮನೆಯಲ್ಲಿಯೇ ಕುಟುಂಬದವರೇಲ್ಲಾರು ಸೇರಿ ಅಭ್ಯಸಗಳನ್ನು ಮಾಡುವುದು ರೂಡಿಸಿಕೊಂಡು ಶಾರೀರಿಕ, ಮಾನಸಿಕ ನೆಮ್ಮದಿಯಿಂದ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಯೋಗ ಗುರುಗಳಾದ ದತ್ತಕುಮಾರ ರವರು ಯೋಗ ಆಸನಗಳನ್ನು ಮತ್ತು ಪ್ರಾಣಾಯಾಮದ ಬಗ್ಗೆ ತಿಳಿಸಿ ಅಭ್ಯಾಸಗಳನ್ನು ಮಾಡಿಸಿದರು.
ಈ ಸಂದರ್ಭದಲ್ಲಿ ರಾಯಚೂರು ತಾ.ಪಂ ಕಾರ್ಯನಿರ್ವಾಹಕ ನಿರ್ವಾಹಕ ಅಧಿಕಾರಿ ಚಂದ್ರಶೆಖರ ಪವಾರ್, ಸಹಾಯಕ ನಿರ್ದೇಶಕರು ಹನುಮಂತ, ಪಿಡಿಒ ವಿಶ್ವನಾಥ ರೆಡ್ಡಿ, ಉಪಾಧ್ಯಕ್ಷರು ಪಾರೂಕ್ ಹುಸೇನ್ ಹಾಗೂ ವಿಜಯಕುಮಾರ್, ನಾಗರಾಜ್ ನಾಯಕ ಗ್ರಾ.ಪಂ ಸದಸ್ಯರು, ಎಡಿಪಿಸಿ ಮಲ್ಲಮ್ಮ, ಜಿಲ್ಲಾ ಐಇಸಿ ಸಂಯೋಜಕರು ವಿಶ್ವನಾಥ, ಐಇಸಿ ಸಂಯೋಜಕರು ಧನರಾಜ, ತಾಂತ್ರಿಕ ಸಂಯೋಕಜರು ಸೈಮಾನ್ ಸೇರಿದಂತೆ ತಾಲೂಕಿನ ನರೇಗಾ ಸಿಬ್ಬಂದಿಯವರು ಮತ್ತು ಗ್ರಾ.ಪಂ ಸಿಬ್ಬಂದಿ ವರ್ಗದವರು ಇದ್ದರು.
ರಾಯಚೂರು,ಜೂ. ನಗರದ ಎಲ್,ಬಿ.ಎಸ್.ನಗರ ಹಾಗೂ ಆಶ್ರಯ ಕಾಲೋನಿಯ ನಮ್ಮ ಕ್ಲೀನಿಕ್‌ನಲ್ಲಿ 10ನೇ ಅಂತರಾಷ್ಟಿçÃಯ ಯೋಗ ದಿನಾಚರಣೆಗೆ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳು ಡಾ.ಎಮ್.ಎನ್.ನಂದಿತಾ ಅವರು ಚಾಲನೆ ನೀಡಿದರು.
ಈ ಬಾರಿ “ಮಹಿಳಾ ಸಬಲೀಕರಣಕ್ಕಾಗಿ ಯೋಗ” ಎನ್ನುವ ಘೋಷ ವಾಕ್ಯದೊಂದಿಗೆ 10ನೇ ಅಂತರಾಷ್ಟಿçÃಯ ಯೋಗ ದಿನಚರಣೆಯನ್ನು ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬರು ಯೋಗ ಮಾಡುವದರಿಂದ ಅನೇಕ ಪ್ರಯೋಜನಗಳಿವೆ. ಯೋಗ ಮಾಡುವದರಿಂದ ದೇಹದ ಸಮತೋಲನವನ್ನು ಕಾಪಾಡಲು ಸಹಕಾರಿಯಾಗಿದೆ. ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಳ, ಒತ್ತಡ ನಿಯಂತ್ರಣ, ಮಾನಸಿಕ ಸ್ಪಷ್ಟತೆ, ಸರಾಗ ಉಸಿರಾಟ ಹೃದಯ ಆರೋಗ್ಯದ ವೃದ್ದಿ, ಉತ್ತಮ ನಿದ್ರೆ, ದೇಹದ ತೂಕ ನಿಯಂತ್ರಣ, ರೋಗನಿರೋಧಕ ಶಕ್ತಿ ಹೆಚ್ಚಳ, ದೇಹ ಸ್ಥಿತಿ ಸುಧಾರಣೆ, ಹೀಗೆ ಯೋಗದಿಂದ ಮಾನವನ ಆರೋಗ್ಯಕ್ಕೆ ಅನೇಕ ಉಪಯೋಗಗಳಿವೆ.
ತಾಲೂಕ ಆರೋಗ್ಯ ಅಧಿಕಾರಿ ಡಾ.ಪ್ರಜ್ವಲ್ ಕುಮಾರ್ ಅವರು ಮಾತನಾಡಿ, ಯೋಗವು ನಮ್ಮನ್ನು ಒಳಗಿನಿಂದ ನೋಡುವ ಕನ್ನಡಿಯಾಗಿದೆ. ಪ್ರತಿಯೊಬ್ಬರು ತಮ್ಮ ದಿನನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ದೈಹಿಕ ಮಾನಸಿಕವಾಗಿ ಆರೋಗ್ಯದಿಂದ ಇರಲು ಸಾಧ್ಯ ಎಂದು ತಿಳಿಸಿದರು.
ಯೋಗ ತರಬೇತಿದಾರರು ರೋಹಿಣಿ ಯೋಗ ಶಿಬಿರದಲ್ಲಿ ಪಾಲ್ಗೋಂಡು ಶಿಬಿರಾರ್ಥಿಗಳಿಗೆ ಯೋಗವನ್ನು ಮಾಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಾಕೀರ್ ಮೋಹಿನುದ್ದೀನ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಎಲ್.ಬಿ.ಎಸ್.ನಗರದ ವೈದ್ಯಾಧಿಕಾರಿ ಡಾ.ಸುಷ್ಮಾ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ.ಕೆ, ಡಿ.ಡಿ.ಎಮ್ ಲೋಕೆಶ್ ಸೇರಿದಂತೆ ಸಿಬ್ಬಂದಿ ವರ್ಗದವರು, ತಾಲೂಕು, ಜಿಲ್ಲಾ ಮೇಲ್ವಿಚಾರಣಾ ಅಧಿಕಾರಿಗಳು ಹಾಗೂ ನಮ್ಮ ಕ್ಲಿನಿಕ್ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.