ಅನಧಿಕೃತವಾಗಿ ಸರ್ಕಾರಿ ಜಾಗ ಹಾಕಿಕೊಳ್ಳದಂತೆ ಅಧಿಕಾರಿಗಳು ಖಡನ್ ಸೂಚನೆ : ಸರ್ಕಾರಿ ಜಾಗ ಅತಿಕ್ರಮಣ ಹಿನ್ನಲೆ ಸ್ಥಳ ಪರಿಶೀಲಿಸಿದ ಅಧಿಕಾರಿಗಳು.

Vijayanagara Vani
ಅನಧಿಕೃತವಾಗಿ ಸರ್ಕಾರಿ ಜಾಗ ಹಾಕಿಕೊಳ್ಳದಂತೆ ಅಧಿಕಾರಿಗಳು ಖಡನ್ ಸೂಚನೆ : ಸರ್ಕಾರಿ ಜಾಗ ಅತಿಕ್ರಮಣ ಹಿನ್ನಲೆ ಸ್ಥಳ ಪರಿಶೀಲಿಸಿದ ಅಧಿಕಾರಿಗಳು.

ಕಂಪ್ಲಿ- ತಾಲೂಕಿನ ದೇವಲಾಪುರ ಗ್ರಾಮದ ರಾಜನಮಟ್ಟಿ ಬಳಿಯಲ್ಲಿರುವ ಸರ್ಕಾರಿ ಜಮೀನಿನಲ್ಲಿ ಕೆಲ ಜನರು ಅನಧಿಕೃತವಾಗಿ ಜಾಗ ಗುರುತಿಸಿ, ಸ್ವಚ್ಚಗೊಳಿಸಿ ಕಟ್ಟಡ, ಮನೆ ಕಟ್ಟಿಕೊಳ್ಳಲು ಪಿತೂರಿ ನಡೆಸಿದ ಹಿನ್ನಲೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಪಡೆಯಲು ಅವಕಾಶ ಮಾಡಿಕೊಡಬಾರದೆಂದು ಗ್ರಾಪಂ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು, ಸದಸ್ಯರು, ಮುಖಂಡರು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ಪರಿಣಾಮ ಕಂದಾಯ ಅಧಿಕಾರಿ ಜಗದೀಶ, ಗ್ರಾಮಾಡಳಿತಾಧಿಕಾರಿ ಅಬ್ದುಲ್ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ಜಾಗ ಪರಿಶೀಲಿಸಿ, ಸರ್ಕಾರ ಜಾಗವನ್ನು ಯಾರು ಕಬಳಿಸದಂತೆ ಜನರಿಗೆ ತಿಳಿ ಹೇಳಿದರು.
ಜಾಗ ಪರಿಶೀಲಿಸಿದ ನಂತರ ಆರ್‌ಐ ಜಗದೀಶ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಸರ್ವೆ ನಂ.237ರಲ್ಲಿ 62 ಎಕರೆ ಸರ್ಕಾರಿ ಜಾಗವಿದ್ದು, ಇದರಲ್ಲಿ ಸಾರ್ವಜನಿಕರ ಸ್ಮಶಾನಕ್ಕೆ 2 ಎಕರೆ, ಆಶ್ರಯ ಯೋಜನೆಗೆ 6, ಸರ್ಕಾರಿ ಪ್ರೌಢಶಾಲೆಗೆ 9.88 ಎಕರೆ ನೀಡಿದ್ದು, ಇನ್ನೂಳಿದ 41 ಎಕರೆಗೂ ಹೆಚ್ಚಿನ ಜಾಗವು ಗುಡ್ಡಗಾಡು, ಕಲ್ಲು, ಬಂಡೆಗಳಿAದ ಆವೃತವಾಗಿದೆ. ಈಗ ಈ ಜಾಗದಲ್ಲಿ ಕೆಲವರು ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಳ್ಳಲು ಮುಂದಾಗಿರುವುದು ತಿಳಿದು ಬಂದ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲಿಸಿ, ಸರ್ಕಾರಿ ಜಾಗವನ್ನು ಯಾರು ಅತಿಕ್ರಮಣ ಮಾಡಿಕೊಳ್ಳಬಾರದು. ಯಾರಾದರೂ ಜಾಗ ಹಾಕಿಕೊಂಡರೆ ಸೂಕ್ತಕ್ರಮ ಕೈಗೊಳ್ಳಲಾಗುವುದು. ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತಂದು, ಇಲ್ಲಿನ ಸರ್ಕಾರಿ ಜಾಗ ಸರ್ವೆ ಮಾಡಿಸಿ, ಹದ್ದುಬಸ್ತು ಮಾಡಿ, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಗೌಡ್ರು ಬುಡುಗಣ್ಣ ಹಾಗೂ ಮುಖಂಡ ಸಿದ್ದಯ್ಯ ಮಾತನಾಡಿ, ಕೆಲವರು ಇಲ್ಲಿನ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲು ಮುಂದಾಗಿರುವುದು ಕಾನೂನು ಬಾಹಿರವಾಗಿದೆ. ಇಲ್ಲಿನ ಸರ್ಕಾರಿ ಜಾಗದಲ್ಲಿ ಕೆಲವರು ಅರ್ಧ ಎಕರೆ, ಪ್ಲಾಟ್ ನಷ್ಟು ಜಾಗ ಹೀಗೆ ಜಾಗ ಕಬಳಿಗೆ ಮಾಡಲು ಮುಂದಾಗಿರುವುದು ವಿಪರ್ಯಾಸವಾಗಿದೆ. ಈಗಲೇ ಅಧಿಕಾರಿಗಳು ಎಚ್ಚೆತ್ತು, ಜಾಗದ ಬಗ್ಗೆ ನಿಗಾವಹಿಸಿ, ಅನಧಿಕೃತವಾಗಿ ಜಾಗ ಹಾಕಿಕೊಳ್ಳಲು ಅವಕಾಶ ಮಾಡಿಕೊಡಬಾರದು. ಸರ್ಕಾರ ಮತ್ತು ಅಧಿಕಾರಿಗಳು ಜಾಗ ನೀಡುವದಾದರೆ, ಸರ್ವೆ ಮಾಡಿಸಿ, ಹದ್ದುಬಸ್ತು ಹಾಕಿಸಿ, ವಸತಿರಹಿತ ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದರು.
ಮುಖಂಡ ಹೆಚ್.ಹುಲುಗಪ್ಪ ಮಾತನಾಡಿ, 1996-97ರ ನಂತರ ನಿವೇಶನ ಹಂಚಿಕೆಯಾಗಿಲ್ಲ. ಹಲವು ವರ್ಷಗಳಲ್ಲಿ ಊರು ಮತ್ತು ದಲಿತ ಸಮಾಜ ಬೆಳೆದಿದೆ. ಹಲವು ಕುಟುಂಬಗಳು ಇಲ್ಲಿನ ಸರ್ಕಾರಿ ಜಾಗದಲ್ಲಿ ಜಾಗ ಹಾಕಿಕೊಂಡಿದ್ದಾರೆ. ನಿವೇಶನ ನೀಡುವಂತೆ ಗ್ರಾಪಂಗೆ ನೂರಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಹಲವು ವರ್ಷಗಳಿಂದ ತುಕ್ಕು ಹಿಡಿದಿವೆ. ಆದ್ದರಿಂದ ಜನರು ಜಾಗ ಹಾಕಿಕೊಂಡಿದ್ದಾರೆ. ಆದರೆ, ಈಗ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು ಜಾಗ ಪರಿಶೀಲಿಸಿದ್ದು, ಕೂಡಲೇ ಸರ್ಕಾರಿ ಜಾಗ ಸರ್ವೆ ಮಾಡಿ, ಹದ್ದುಬಸ್ತು ಹಾಕಿ, 15ದಿನದೊಳಗೆ ನಿವೇಶನರಹಿತರಿಗೆ ಜಾಗ ಹಂಚಿಕೆ ಮಾಡಬೇಕು. ಇಲ್ಲದಿದ್ದಲ್ಲಿ ತಹಶೀಲ್ದಾರ್ ಮುಖೇನ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

WhatsApp Group Join Now
Telegram Group Join Now
Share This Article
error: Content is protected !!