ಪ್ರತಿಭಾ ಪುರಸ್ಕಾರ ಪಡೆದರೆ ಸಾಲದು: ಉನ್ನತಸ್ಥರಕ್ಕೇರಬೇಕು-ಕೆ.ಎಸ್.ಅಶೋಕ್

Vijayanagara Vani
ಪ್ರತಿಭಾ ಪುರಸ್ಕಾರ ಪಡೆದರೆ ಸಾಲದು: ಉನ್ನತಸ್ಥರಕ್ಕೇರಬೇಕು-ಕೆ.ಎಸ್.ಅಶೋಕ್
ಬಳ್ಳಾರಿ: ಜೂ 24  ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಪುರಸ್ಕಾರಕ್ಕೆ ಪಾತ್ರರಾದರೆ ಸಾಲದು. ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡಿ ಉನ್ನತ ಸ್ಥರಕ್ಕೇರಬೇಕೆಂದು ಮಹಾನಗರ ಪಾಲಿಕೆ ಸದಸ್ಯ ಕೆ.ಎಸ್.ಅಶೋಕ್ ಹೇಳಿದರು.
ಅವರು ಶ್ರೀ ಏಕಲವ್ಯ ಟ್ರಸ್ಟ್ ಇವರು ಇಲ್ಲಿನ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ 90ಕ್ಕೂ ಅಧಿಕ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಬಳ್ಳಾರಿ, ಸಂಡೂರು, ಸಿರುಗುಪ್ಪ, ಕಂಪ್ಲಿ, ಬಳ್ಳಾರಿ ಗ್ರಾಮಾಂತರದಿಂದ ಆಗಮಿಸಿದ ಶಾಲಾ-ಕಾಲೇಜಿನ ಪ್ರತಿಭಾನ್ವಿತ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಬ್ರಹ್ಮಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯೆ ಜೊತೆಗೆ ಶ್ರದ್ಧೆ ಮತ್ತು ಭಕ್ತಿ ಇರಬೇಕು ಎಂದು ತಿಳಿಸಿ ವಾಲ್ಮೀಕಿ ಮಹರ್ಷಿಯ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ ಮೋಹನ್ ಕಿಶೋರ್ ಅವರು ಮಾತನಾಡಿ, ವಿದ್ಯೆ ಒಂದೇ ಅಲ್ಲ ಚಾತುರ್ಯತೆಯಿಂದ ತಮ್ಮ ಮುಂದಿನ ಜೀವನದಲ್ಲಿ ಬರುವ ಹಲವಾರು ಸವಾಲುಗಳನ್ನು ಎದುರಿಸಬೇಕೆಂದರು. ಸರ್ಕಾರದಿಂದ ಮಕ್ಕಳಿಗೆ ಏನೆಲ್ಲಾ ಸೌಲಭ್ಯಗಳಿವೆ ಎಂದು ವಿವರವಾಗಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟಿ ಚಂದ್ರಶೇಖರ್ ಏಕಲವ್ಯ ಟ್ರಸ್ಟ್ ಕಾರ್ಯದರ್ಶಿ ಇವರು ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಾ ಪುರಸ್ಕಾರ ಬಹಳ ಅಚ್ಚುಕಟ್ಟು ಆಗಿ ನೆರವೇರಿಸಿ ಕೊಟ್ಟ ಸ್ವಾಮೀಜಿಗೆ ಹಾಗೂ ಅತಿಥಿ ಗಣ್ಯರಿಗೆ ಧನ್ಯವಾದಗಳು ಹೇಳಿದರು.
ಟ ಮಲ್ಲಿಕಾರ್ಜುನ ಇವರ ಮಗ ದೀಪಕ್ ತೇಜ ಹಾಗೂ ವಿಕೆ ಬಸಪ್ಪ ವಾಲ್ಮೀಕಿ ಮುಖಂಡರು ಈ ಕಾರ್ಯಕ್ರಮಕ್ಕೆ ಸಹಕರಿಸಿದರು.  
ಉಪನಿರ್ದೇಶಕರಾದ ಕೃಷ್ಣಮೂರ್ತಿ, ಮಾಜಿ ಸೈನಿಕರಾದ ಲಕ್ಷ್ಮಣ್, ಮುರಾರ್ಜಿ ದೇಸಾಯಿ ಪ್ರಾಂಶುಪಾಲರಾದ ಅನಸೂಯ, ಶ್ರೀ ಮಾತೃ ಮಹಿಳಾ ಮಂಡಳಿ ಅಧ್ಯಕ್ಷೆ ಕೆ. ಪುಷ್ಪ ಲತಾ, ಕಲಾವತಿ, ಗೋವರ್ಧನ್, ಸಾಯಿ ಸಂಜಯ್ ಕುಮಾರ್ ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಗಿರೀಶ್ ಕುಮಾರ್ ಹಾಗೂ ಮೇಘನಾ ಅವರು ನೆರವೇರಿಸಿ ಕೊಟ್ಟರು.
WhatsApp Group Join Now
Telegram Group Join Now
Share This Article
error: Content is protected !!