ಬಳ್ಳಾರಿ,ಜೂ.27
ನಗರದ ಡಾ.ಜೋಳದರಾಶಿ ದೊಡ್ಡನಗೌಡ ಜಿಲ್ಲಾ ರಂಗಮಂದಿರವು ಪುನಃ ಪ್ರಾರಂಭವಾಗಲಿದ್ದು, ಪ್ರಸಕ್ತ ಸಾಲಿನ ಜುಲೈ ಮಾಹೆಯಿಂದ ಅನ್ವಯವಾಗುವಂತೆ ಪರಿಷ್ಕøತ ಬಾಡಿಗೆ ವಿವರ ಮಾಹಿತಿ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿಸಿದ್ದಾರೆ.
*ಕಾರ್ಯಕ್ರಮಗಳ ವಿವರ:*
ಕಲೆ, ಸಾಹಿತ್ಯಿಕ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ (ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ಹವ್ಯಾಸಿ ನಾಟಕ, ನಾಟಕ, ಬಯಲಾಟ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಸಾಂಸ್ಕøತಿಕ ಕಾರ್ಯಕ್ರಮ ಸೇರಿದಂತೆ) ಅರ್ಧ ದಿನಕ್ಕೆ ಬಾಡಿಗೆ ದರ ರೂ.2 ಸಾವಿರ, ಭದ್ರತಾ ಠೇವಣಿ ರೂ.3 ಸಾವಿರ ಸೇರಿ ಒಟ್ಟು ರೂ.5 ಸಾವಿರ ಮತ್ತು ಪೂರ್ತಿ ದಿನಕ್ಕೆ ಬಾಡಿಗೆ ದರ ರೂ.4 ಸಾವಿರ, ಭದ್ರತಾ ಠೇವಣಿ ರೂ.3 ಸಾವಿರ ಸೇರಿ ಒಟ್ಟು ರೂ.7 ಸಾವಿರ.
ಕಲೆ, ಸಾಹಿತ್ಯಿಕ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ (ಟಿಕೆಟ್ ಸಹಿತ) (ವೃತ್ತಿ ನಾಟಕ, ಕಂಪನಿ, ಯಕ್ಷಗಾನ, ಸಾಮಾಜಿಕ ನಾಟಕ, ಪೌರಾಣಿಕ ನಾಟಕ, ಐತಿಹಾಸಿಕ ನಾಟಕ ಸಾಂಸ್ಕøತಿಕ ಕಾರ್ಯಕ್ರಮ ಸೇರಿದಂತೆ) ಅರ್ಧ ದಿನಕ್ಕೆ ಬಾಡಿಗೆ ದರ ರೂ.3 ಸಾವಿರ, ಭದ್ರತಾ ಠೇವಣಿ ರೂ.3 ಸಾವಿರ ಸೇರಿ ಒಟ್ಟು ರೂ.6 ಸಾವಿರ ಮತ್ತು ಪೂರ್ತಿ ದಿನಕ್ಕೆ ಬಾಡಿಗೆ ದರ ರೂ.6 ಸಾವಿರ, ಭದ್ರತಾ ಠೇವಣಿ ರೂ.3 ಸಾವಿರ ಸೇರಿ ಒಟ್ಟು ರೂ.9 ಸಾವಿರ.
ಸಂಘ ಸಂಸ್ಥೆಗಳಿಗೆ ಅರ್ಧ ದಿನಕ್ಕೆ ಬಾಡಿಗೆ ದರ ರೂ.10 ಸಾವಿರ, ಭದ್ರತಾ ಠೇವಣಿ ರೂ.5 ಸಾವಿರ ಸೇರಿ ಒಟ್ಟು ರೂ.15 ಸಾವಿರ ಮತ್ತು ಪೂರ್ತಿ ದಿನಕ್ಕೆ ಬಾಡಿಗೆ ದರ ರೂ.18 ಸಾವಿರ, ಭದ್ರತಾ ಠೇವಣಿ ರೂ.5 ಸಾವಿರ ಸೇರಿ ಒಟ್ಟು ರೂ.23 ಸಾವಿರ.
ವಾಣಿಜ್ಯ ಕಾರ್ಯಕ್ರಮಗಳಿಗೆ ಪೂರ್ತಿ ದಿನಕ್ಕೆ ಬಾಡಿಗೆ ದರ ರೂ.35 ಸಾವಿರ, ಭದ್ರತಾ ಠೇವಣಿ ರೂ.5 ಸಾವಿರ ಸೇರಿ ಒಟ್ಟು ರೂ.40 ಸಾವಿರ.
ಶಾಲಾ-ಕಾಲೇಜು ಕಾರ್ಯಕ್ರಮಗಳಿಗೆ ರೂ.35 ಸಾವಿರ, ಭದ್ರತಾ ಠೇವಣಿ ರೂ.5 ಸಾವಿರ ಸೇರಿ ಒಟ್ಟು ರೂ.40 ಸಾವಿರ ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ಬಾಡಿಗೆ ದರ ರೂ.8 ಸಾವಿರ, ಭದ್ರತಾ ಠೇವಣಿ ಇರುವುದಿಲ್ಲ, ಒಟ್ಟು ರೂ.8 ಸಾವಿರ.
ನಿಗದಿಪಡಿಸಿರುವ ಅವಧಿಗಿಂತ 1 ಗಂಟೆ ಹೆಚ್ಚಾದರೆ ಬಾಡಿಗೆ ದರವು ರೂ.3 ಸಾವಿರ ಹೆಚ್ಚು ಆಗಲಿದೆ.
*ಸೂಚನೆ:*
ಅರ್ಧದಿನ: ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ, ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.
ಪೂರ್ತಿ ದಿನ: ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.
ಹೆಚ್ಚಿನ ಮಾಹಿತಿಗಾಗಿ ಡಾ.ರಾಜ್ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂ.08392-275182 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.