Ad image

ವೃತ್ತಿ ಶಿಕ್ಷಣ ಮಾರ್ಗದರ್ಶನ ಸರಣಿ ಕಾರ್ಯಕ್ರಮ

Vijayanagara Vani
ವೃತ್ತಿ ಶಿಕ್ಷಣ ಮಾರ್ಗದರ್ಶನ ಸರಣಿ ಕಾರ್ಯಕ್ರಮ
ಶಿವಮೊಗ್ಗ, ಜೂನ್ 28, ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಒಳ್ಳೆಯ ಭವಿಷ್ಯವಿದೆ, ಯಾವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಯಾವರೀತಿಯ ಉದ್ಯೋಗಕ್ಕೆ ಹೋಗಬಹುದು, ಪೆಷಕರು, ವಿದ್ಯಾರ್ಥಿಗಳಿಗೆ ಹೇಗೆ ಮಾರ್ಗದರ್ಶನ ನೀಡಬಹುದು ಮುಂತಾದ ವಿಷಯಗಳನ್ನು ಒಳಗೊಂಡ ವಿಶೇಷ ಕಾರ್ಯಕ್ರಮ ಸರಣಿ “ವೃತ್ತಿಶಿಕ್ಷಣ ಮಾರ್ಗದರ್ಶನ” ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ಜೂನ್ 28 ರಿಂದ ಪ್ರತಿ ಶುಕ್ರವಾರ ಬೆಳಿಗ್ಗೆ 9.05ರಿಂದ 9.20ರವರೆಗೆ ಪ್ರಸಾರವಾಗಲಿದೆ.
ಪಿ.ಇ.ಎಸ್ ಸಮೂಹ ಶಿಕ್ಷಣ ಸಂಸ್ಥೆ ಶಿವಮೊಗ್ಗ ಸಹಯೋಗದಲ್ಲಿ ಪ್ರಸಾರವಾಗುವ ಈ ಸರಣಿಗೆ ಶಿವಮೊಗ್ಗ ಸಂಸದರು ಹಾಗೂ ಪಿ.ಇ.ಎಸ್ ಸಮೂಹ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವೈ.ರಾಘವೇಂದ್ರ ಅವರಿಂದ ಚಾಲನೆ ಸಿಗಲಿದೆ. ಪಿ.ಇ.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಕೆರಿಯರ್ ಗೈಡೆನ್ಸ್ ಸೆಲ್ನ ಪರಿಣಿತರು, ಪ್ರಾಂಶುಪಾಲರು ಹಾಗೂ ಪ್ರತಿ ವಿಭಾಗದ ಮುಖ್ಯಸ್ಥರು ಮಾಹಿತಿ ನೀಡುವ ಈ ಸರಣಿ, ಆಕಾಶವಾಣಿ ಭದ್ರಾವತಿ ಅಮೃತ ಮಹೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ವರ್ಷಪೂರ್ತಿ ಪ್ರಸಾರವಾಗಲಿದೆ (52 ಕಾರ್ಯಕ್ರಮ) ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಅರ್.ಭಟ್ ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು FM 103.5 ಹಾಗೂ MW 675 khz ನಲ್ಲಿ ಕೇಳುವದರೊಟ್ಟಿಗೆ ಜಗತ್ತಿನಾದ್ಯಂತAkashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಕೇಳಬಹುದು ಹಾಗೂAkashavani Bhadravathi YouTube ನಲ್ಲಿ ಪ್ರಸಾರ ನಂತರವೂ ಕೇಳಬಹುದು.

Share This Article
error: Content is protected !!
";