ದಾವಣಗೆರೆ. ಪ್ರಸಕ್ತ ಸಾಲಿನ ನಗರೋತ್ಥಾನ (ಮುನಿಸಿಪಾಲಿಟಿ) ಹಂತ-4 ಯೋಜನೆಯಡಿ ಶೇ 24.10, 7.25 ಮತ್ತು ಶೇ 5 ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ನಿರುದ್ಯೋಗಿ ಯುವತಿಯರಿಗೆ ಉಚಿತ ಹೊಲಿಗೆ ಯಂತ್ರ, ಮನೆ ಮೇಲ್ಛಾವಣಿ ದುರಸ್ಥಿಗೆ ಸಮಾಗ್ರಿಗಳ ಖರೀದಿಗೆ ಧನಸಹಾಯ, ಇತರೆ ಬಡ ವರ್ಗದ ಉದ್ದಿಮೆದಾರರಿಗೆ ಸಹಾಯಧನ ಮತ್ತು ದೈಹಿಕ ವಿಕಲಚೇತನರಿಗೆ ತ್ರಿಚಕ್ರ ವಾಹನ, ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಗಳನ್ನು ನೀಡಲು ಅರ್ಹ ಫಲಾನುಭವಿಗಳಿಂದ ವೈಯಕ್ತಿಕ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ಸೌಲಭ್ಯ ಪಡೆಯಲು ಪಾಸ್‌ಪೋರ್ಟ್ 2 ಭಾವಚಿತ್ರ, ಆಧಾರ್ ಕಾರ್ಡ್ ಜೆರಾಕ್ಸ್, ಚುನಾವಣಾ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ , ಮನೆಯ ಇ-ಖಾತೆ ಜೆರಾಕ್ಸ್ ಪ್ರತಿ, ನಿವಾಸಿ ದೃಢೀಕರಣ, ವ್ಯಾಸಂಗ ಪ್ರಮಾಣ ಪತ್ರದೊಂದಿಗೆ ಜುಲೈ.15 ರೊಳಗಾಗಿ ಜಗಳೂರು ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಸಲ್ಲಿಸಲು ಮುಖ್ಯಾಧಿಕಾರಿ ತಿಳಿಸಿದ್ದಾರೆ.