Ad image

ಜಾಗೃತಿ ಮೂಡಿಸುವ ಕೆಲಸ ಮಾಡದಿದ್ದರೆ ಸಂಘಟನಾ ಮನೋಭಾವ ಇಲ್ಲದಾಗುತ್ತದೆ : ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

Vijayanagara Vani
ಜಾಗೃತಿ ಮೂಡಿಸುವ ಕೆಲಸ ಮಾಡದಿದ್ದರೆ ಸಂಘಟನಾ ಮನೋಭಾವ ಇಲ್ಲದಾಗುತ್ತದೆ : ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಬಳ್ಳಾರಿ, 8 : ಪಕ್ಷಾತೀತವಾಗಿ ಸಮಾಜವನ್ನು ಸಂಘಟಿಸಬೇಕು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ರವಿಕುಮಾರ್ ಹೇಳಿದರು. ನಗರದ ಹಳೆ ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ ಮರ್ಚೆಟ್ ಹೋಟೆಲ್ ನಲ್ಲಿ ನಡೆದ ದೀಕ್ಷಾ ರಜತ್‌ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜವನ್ನು ಎಲ್ಲಾ ಪಕ್ಷದ ಸಮಾಜದ ಬಾಂಧವರು ಸೇರಿ ಸಮಾಜ ಸಂಘಟಿಸುವದೊಂದಿಗೆ ದಾಖಲೆ ಬರೆಯುವ ರೀತಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವ ಜುಲೈ 20 ರಂದು ನಡೆಸಬೇಕು ಎಂದು
ತಿಳಿಸಿದರು.
ದೀಕ್ಷಾ ರಜತ್ ಮಹೋತ್ಸವವನ್ನು 25 ಬಗೆಯ ಕಿರು ಕಾರ್ಯಕ್ರಮಗಳನ್ನು ಸಂಘಟಿಸಿ ಅರ್ಥಪೂರ್ಣಗೊಳಿಸೋಣ. ಶ್ರೀಗಳು ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಸಂಘಟನೆಯಾಗಲು ಕಾರಣೀಭೂತರಾಗಿದ್ದಾರೆ. ವಿದ್ಯಾವಂತರು ಸಂಘಟನೆಗೆ ಸಮಯ ನೀಡಬೇಕು ಹಾಗೂ ಸಂಘಟನೆಯ ಭಾಗವಾಗಿ ನಿಲ್ಲಬೇಕು
ಎಂದು ಹೇಳಿದರು.
ಅಧಿಕಾರಿಗಳು ವೃತ್ತಿಗಂಟಿಕೊಳ್ಳದೆ, ಸ್ವಾರ್ಥಿಗಳಾಗದೇ, ಸಮಷ್ಠಿಯ ಅಭಿವೃದ್ಧಿಗಾಗಿ ನಿಸ್ವಾರ್ಥಿಗಳಾಗಬೇಕು. ಆದಾಯದಲ್ಲಿ ಸ್ವಲ್ಪ ಕುಟುಂಬಕ್ಕೆ, ಸ್ವಲ್ಪ ಸಮಾಜಕ್ಕೆ ಎನ್ನುವ ಭಾವ ಬರಬೇಕು.
ನಾರಿ ಜಿಲ್ಲಾ ಭೋವಿ (ವಡ್ಡರ) ಸಂಜೆ (೨) ಬಾಧಿರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಬೇಕು, ಇದಕ್ಕೆ ಸಮಾಜದ ಶ್ರೀಗಳು ದಿಕ್ಕೂಚಿಯಾಗಿ ಸಾಗುತ್ತಿದ್ದಾರೆ. ಕೂಲಿ ಕಾರ್ಮಿಕ ಮಕ್ಕಳು ಬಾಲ ಕಾರ್ಮಿಕರಾಗದೇ ವಿದ್ಯಾವಂತರಾಗಲು ಅವರನ್ನು ಗುರುತಿಸಿ, ಪರಿವರ್ತಿಸಿ ಪ್ರೇರಣೆ ನೀಡಬೇಕು. ಭೋವಿ ನಿಗಮ ಕಟ್ಟ ಕಡೆಯ ಭೋವಿ ವ್ಯಕ್ತಿಯನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶವನ್ನು ಹೊಂದಿದೆ ಎಂದು
ತಿಳಿಸಿದರು.
ಶ್ರೀಗಳು ನಿಶ್ಯಬ್ದದಂತೆ ನೂರಾರು ಮಕ್ಕಳನ್ನು ದತ್ತು ಪಡೆದು ಶೈಕ್ಷಣಿಕ ಹಾಗೂ ಔದ್ಯೋಗಿಕ ಸೇವೆಯನ್ನು ಮಾಡಿದ್ದಾರೆ.
ಸಂಚಾರಿಮೂರ್ತಿಗಳು ಅವರ ಪರಿಶ್ರಮದಿಂದ ಭೋವಿ ಸಮಾಜ ಸಂಘಟನಾ ಸಮಾಜವಾಗಿ ಹೊರಹೊಮ್ಮಿದೆ. ಸರ್ಕಾರದಲ್ಲಿ ರಾಜಕಾರಣಿಗಳ ಮಾತಿಗಿಂತ ಶ್ರೀಗಳ ಮಾತಿಗೆ ಹೆಚ್ಚು ಮೌಲ್ಯ, ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಶ್ರೀಗಳ
ಸಂಘಟನಾ ಶಕ್ತಿ ಪರಿಣಾಮಕಾರಿಯಾಗಿದೆ. ಮುಖ್ಯ ಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು, ರಾಜಕೀಯ ಪ್ರಮುಖರು, ಶ್ರೀಗಳ ಬಳಿ ಬರುತ್ತಿದ್ದಾರೆ. ಸಮಾಜದ ಋಣ ತೀರಿಸುವ ಪ್ರಯತ್ನದಲ್ಲಿರುವವನೇ ನಿಜವಾದಸಮಾಜದ ನಾಯಕ ಎಂದು ಹೇಳಿದರು.
ಶ್ರೀಗಳ ಜೊತೆ ಪ್ರವಾಸದಲ್ಲಿ ಶ್ರೀಗಳ ಸಹನೆ, ತಾಳ್ಮೆ, ಜಾಣೆ, ಚಾಕಚಕ್ಯತೆ, ಚುರುಕತೆ ತಿಳಿದುಕೊಂಡಿದ್ದೇನೆ ಹಾಗೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಶ್ರೀಗಳಿಗೆ ತನು ಮನ ಧನ ಸೇವೆಗೆ ತಾಮುಂದು, ನಾಮುಂದು ಎಂಬ ಸ್ಪರ್ಧೆಯಲ್ಲಿ ಸೇವೆ ಮಾಡಬೇಕು ಶ್ರೀಮಠದ ಗುರುಕುಲಕ್ಕೆ ಧವಸ ದಾನ್ಯ ನೀಡುವ ಮೂಲಕ ನಮ್ಮ ಮನೆಗೆ ವಹಿಸುವ ಕಾಳಜಿಯಂತೆ ಶ್ರೀಮಠಕ್ಕೂ ನಾವು ಕಾಳಜಿ ವಹಿಸಬೇಕು ಎಂದು ಹೇಳಿದರು.
ಭೋವಿ ಅಭಿವೃದ್ಧಿ ನಿಗಮ ಸುಲಿಗೆಕೇಂದ್ರವಲ್ಲ, ಸುಧಾರಣಾ ಕೇಂದ್ರವಾಗಿ ಪರಿವರ್ತಿಸುವೆ. ಸೌಲಭ್ಯ ಪಡೆಯದವರಿಗೆ ಸೌಲಭ್ಯ ಕಲ್ಪಿಸಲಾಗುವುದು, ಬಿ.ಜೆ.ಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಧ್ಯಕ್ಷರನ್ನು ನೇಮಕ ಮಾಡಲಿಲ್ಲ. ಅಧಿಕಾರಿಗಳ ದರ್ಪದಿಂದ ನಿಗಮದಲ್ಲಿ ಅವ್ಯವಸ್ಥೆಯಾಗಿದೆ. ಎಸ್.ಐ.ಟಿ ತನಿಖೆಯಿಂದ ಸತ್ಯ ತಿಳಿಯುತ್ತದೆ.
ಮಹಾನಗರ ಪಾಲಿಕೆ ಸದಸ್ಯ ಹಾಗೂ ಲಾರಿ ಮಾಲಕರ ಸಂಘದ ಜಿಲ್ಲಾಧ್ಯಕ್ಷರಾದ ಮಿಂಚು ಶ್ರೀನಿವಾಸ ಮಾತನಾಡಿ, ಹಳ್ಳಿ,ಗ್ರಾಮ, ತಾಲೂಕು ವಾಸಿಸುವ ಜನಗಳ ಜಾಗೃತಿಗಾಗಿ ಕಂಕಣಬದ್ಧವಾಗಿ ಸಂಘಟನೆಯನ್ನು ಮಾಡಲು ಸಂಪೂರ್ಣ ಸಮಯವನ್ನು ನೀಡಬೇಕು ಎಂದು ಹೇಳಿದರು. ಸಂಘ ಜಿಲ್ಲೆಯಿಂದ ತಾಲ್ಲೂಕು, ತಾಲ್ಲೂಕಿನಿಂದ ಗ್ರಾಮಕ್ಕೆತಿಳಿಸಿದರು.
ಕೇಂದ್ರೀಕರಣವಾದಾಗ ಸಂಘಟನೆ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಜಾಗೃತಿ ಮೂಡಿಸುವ ಕೆಲಸ ಮಾಡದಿದ್ದರೆ ಸಂಘಟನಾ ಮನೋಭಾವ ಇಲ್ಲದಾಗುತ್ತದೆ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಸಮುದಾಯದ ಜನತೆಗೆ ಸಂಘಟನೆಯನ್ನು ರಾಜಕೀಯವಾಗಿ ತೀಕ್ಷತೆಯನ್ನು ಬೆಳೆಸಿಕೊಳ್ಳುತ್ತಾರೆ. ಚಿಕ್ಕ ಸಭೆಗಳೇ ಬೃಹತ್ ಸಭೆಗಳಾಗಿ ಹೊರಹೊಮ್ಮುತ್ತವೆ ಹಾಗಾಗಿ ಸಂಘಟನೆಯನ್ನು ನಿರಂತರವಾಗಿಮೂಡಿಸಿದರೆಸಂಘಟಿಸಬೇಕು ಎಂದು ಹೇಳಿದರು.
ಜನರು ವಿಧಾನಸಭೆಯ ಹೊರಗೆ ಧ್ವನಿ ಎತ್ತಬೇಕು, ಜನಪ್ರತಿನಿಧಿಗಳು ವಿಧಾನಸಭೆಯ ಒಳಗೆ ಸಮಾಜದ ಧ್ವನಿಯಾದಾಗ ಮಾತ್ರ ಸಂಘಟನೆಯಾದಂತೆ ಎನ್ನುವುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು. ಸಂಘಟನೆ ಜನರ ಜೊತೆ ಇರಬೇಕು ಆಗ ಗಟ್ಟಿಯಾಗುತ್ತದೆ ಹಾಗೂ ಜನರ ಜೊತೆ ಸದಾಕಾಲ ಸದೃಢವಾಗಿ ಉಳಿಯಲು ಮತ್ತು ಬದುಕಲು ಅವಕಾಶ ಒದಗಿಸುತ್ತದೆ. ಕುಟುಂಬದ ಬಗ್ಗೆ ಹೇಗೆ ಸಮಾಲೋಚನೆ ಮಾಡುತ್ತೇವೆಯೋ ಅದೇ ರೀತಿ ಸಮಾಜ ಸಂಘಟನೆಯ ಬಗ್ಗೆ ನಿರಂತರ ಯೋಜನೆ ಮತ್ತು ಸಮಾಲೋಚನೆ ಮಾಡಬೇಕು. ಆರ್ಥಿಕವಾಗಿ ಸಬಲತೆ ಇರುವ ಸಮಾಜಕ್ಕೆ ಗೌರವ ಹೆಚ್ಚು ಹಾಗಾಗಿ ಶಿಕ್ಷಣ, ಆರ್ಥಿಕ ಸಬಲತೆಗೆ ಹೆಚ್ಚು ಮಹತ್ವ ಕೊಡಬೇಕು, ಸಮಾಜಕ್ಕೆ ಅವಶ್ಯಕವಾದ ಹಕ್ಕುಗಳನ್ನು ಪೂರೈಕೆಗೆ ಸದಾಕಾಲ ಸಂಘಟಿತರಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿ ರಾಮಾಂಜನಿಯಲು ಪ್ರದಾನ ಕಾರ್ಯದರ್ಶಿ ವಿ ಗದಿಳಿಂಗ ಸುವರ್ಣ ವಾಹಿನಿ ಪತ್ರಿಕೆ ಸಂಪಾದಕ ವಿ ರವಿ ಮಹಾನಗರ ಪಾಲಿಕೆ ಸದ್ಯಸ ಕುಬೇರ ಮಲ್ಲೇಶಪ್ಪ, ಶ್ರೀಮನ್ನಾರಾಯಣ, ತಾಲೂಕು ಅಧ್ಯಕ್ಷರು ಪದಾಧಿಕಾರಿಗಳುಸಂಘದ ಉಪಸ್ಥಿತರಿದ್ದರು.ಮುಖಂಡರುಗಳು

Share This Article
error: Content is protected !!
";