ರಾಮನಗರ ದಕ್ಷಿಣ ಜಿಲ್ಲೆ ನಾಮಕರಣಕ್ಕೆ ಡಿಕೆಶಿ ಮನವಿ

Vijayanagara Vani
ರಾಮನಗರ ದಕ್ಷಿಣ ಜಿಲ್ಲೆ ನಾಮಕರಣಕ್ಕೆ ಡಿಕೆಶಿ ಮನವಿ

ಬೆಂಗಳೂರು, 9 : ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಲಾಗಿದೆ.ರಾಮನಗರ, ಚನ್ನಪಟ್ಟಣ,ಮಾಗಡಿ, ಕನಕಪುರ ಮತ್ತು ಹಾರೋಹಳ್ಳಿ ತಾಲ್ಲೂಕುಗಳನ್ನು ಸೇರಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಬೇಕೆಂಬ ಮನವಿಯನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.ಈಗಿನ ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಿ ರಾಮನಗರವನ್ನೇ ಜಿಲ್ಲಾಕೇಂದ್ರವನ್ನಾಗಿಸಿಕೊಂಡು ಬೆಂಗಳೂರು ದಕ್ಷಿಣ ಜಿಲ್ಲೆ ರಚಿಸಬೇಕೆಂಬ ಬೇಡಿಕೆಯನ್ನು ಈ ನಿಯೋಗ ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಹೇಳಲಾಗಿದೆ.ವಿಧಾನಸೌಧದಲ್ಲಿಂದು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಇಸ್ಟಾಲ್ ಹುಸೇನ್, ಪುಟ್ಟಣ್ಣ, ಎಸ್. ರವಿ, ಸುಧಾಮದಾಸ್, ಮಾಜಿ ಸಂಸದ ಡಿ.ಕೆ ಸುರೇಶ್‌,ಮಾಜಿ ಶಾಸಕರಾದ ಸಿ.ಎಂ ಲಿಂಗಪ್ಪ, ರಾಜು, ಅಶ್ವತ್ಥ ಮತ್ತಿತರ ಮುಖಂಡರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬೆಂಗಳೂರು ದಕ್ಷಿಣ ಜಿಲ್ಲೆ ರಚನೆಯ ಬೇಡಿಕೆಯನ್ನು ಸಲ್ಲಿಸಿದೆ. ಮರು ನಾಮಕರಣವಷ್ಟೇ ಹೊಸ ಜಿಲ್ಲೆ ರಚನೆ ಅಲ್ಲ:ಡಿ.ಕೆ.ಶಿ ಬೆಂಗಳೂರಿಗೆ ದೊಡ್ಡ ಬ್ರಾಂಡ್ ಇದೆ. ನಾವೆಲ್ಲ ಹಿಂದೆ ಬೆಂಗಳೂರು ಜಿಲ್ಲೆಗೆ ಸೇರಿದ್ದೆವು, ನಂತರ ರಾಮನಗರ ಜಿಲ್ಲೆಯನ್ನು ಮಾಡಿ ಆ ಜಿಲ್ಲೆಗೆ ಚನ್ನಪಟ್ಟಣ, ಮಾಗಡಿ, ಕನಕಪುರ ಮತ್ತು ಆರೋಹಳ್ಳಿಯನ್ನು ಸೇರಿಸಲಾಯಿತು.ಈಗ ರಾಮನಗರದ ಬದಲು ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರನ್ನು ಮರು ನಾಮಕರಣ ಮಾಡುವುದು ಅಗತ್ಯ ಬೆಂಗಳೂರು ಜಾಗತಿಕ ಮನ್ನಣೆ ಹೊಂದಿದ್ದು ಈ ಹೆಸರನ್ನು ಉಳಿಸಿಕೊಳ್ಳಲು ನನ್ನ ಮುಖಂಡತ್ವದಲ್ಲಿ ಜಿಲ್ಲೆಯ ನಾಯಕರು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ  ಎಂದರು.ರಾಮನಗರವನ್ನೇ ಜಿಲ್ಲಾ ಕೇಂದ್ರವನ್ನಾಗಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ರಚನೆಯಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದ ಅವರು, ದಕ್ಷಿಣ ಜಿಲ್ಲೆ ಮಾಡುವುದರಿಂದ ಮುಂದೆ ರಾಮನಗರ,ಚನ್ನಪಟ್ಟಣ, ಮಾಗಡಿ ಸೇರಿದಂತೆ ಮೈಸೂರುವರೆಗೂ ಅಭಿವೃದ್ಧಿ ಸಾಧಿಸಲು ಹಾಗೂ ಕೈಗಾರಿಕಾ ಸ್ಥಾಪನೆಗಳಿಗೂ ಅನುಕೂಲವಾಗುತ್ತದೆ. ಜತೆಗೆ ಆಸ್ತಿ ಮೌಲ್ಯ ಹೆಚ್ಚಳಕ್ಕೂ ನೆರವಾಗುತ್ತದೆ ಎಂದರು.ಇದು ಮರು ನಾಮಕರಣವಷ್ಟೆ. ಹೊಸ ಜಿಲ್ಲೆಯ ರಚನೆಯ ಬೇಡಿಕೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು

WhatsApp Group Join Now
Telegram Group Join Now
Share This Article
error: Content is protected !!