Ad image

ಸರ್ಕಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ   ಅಭಿಮತ।  ದೇಶದ ಅಭಿವೃದ್ದಿಗೆ ಪತ್ರಕರ್ತರ ಪಾತ್ರ ಮುಖ್ಯ.ರಾಜ್ಯದ ಪತ್ರಕರ್ತರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಜತೆಗೆ ಸರಕಾರದ ಸೌಲಭ್ಯ ದೊರಕಿಸಲು ಯತ್ನ.ಗ್ರಾಮೀಣ ಪತ್ರಕರ್ತರಿಗೆ ನಿವೇಶನ, ಬಸ್ ಪಾಸ್ ಮತ್ತು ಆರೋಗ್ಯ ಸೌಕರ್ಯಕ್ಕೆ ಸಿಎಂಗೆ ಮನವಿ.

Vijayanagara Vani
ಸರ್ಕಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ   ಅಭಿಮತ।  ದೇಶದ ಅಭಿವೃದ್ದಿಗೆ ಪತ್ರಕರ್ತರ ಪಾತ್ರ ಮುಖ್ಯ.ರಾಜ್ಯದ ಪತ್ರಕರ್ತರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಜತೆಗೆ ಸರಕಾರದ ಸೌಲಭ್ಯ ದೊರಕಿಸಲು ಯತ್ನ.ಗ್ರಾಮೀಣ ಪತ್ರಕರ್ತರಿಗೆ ನಿವೇಶನ, ಬಸ್ ಪಾಸ್ ಮತ್ತು ಆರೋಗ್ಯ ಸೌಕರ್ಯಕ್ಕೆ ಸಿಎಂಗೆ ಮನವಿ.
ಕನಕಗಿರಿ: ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಾವಲು ಪತ್ರಿಕೋದ್ಯಮದಿಂದ. ಸಾಧ್ಯ
ಎಂದು  ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ ಹೇಳಿದರು. ಅವರು ಕನಕಗಿರಿ 
ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ
ಸರಕಾರಿ ಮಹಾವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ -2024 ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ  ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಿಕೋದ್ಯಮ ಉದ್ಯಾಮವಾಗಿ  ರೂಪುಗೊಂಡಿದ್ದು   ಪತ್ರಿಕೆ ಯಿಂದ ದೇಶದ ಅಭಿವೃದ್ದಿ ಸಾಧ್ಯ.ಇತ್ತಿಚೀನ ದಿನಗಳಲ್ಲಿ  ಎಲೆಕ್ಟ್ರಾನಿಕ್ ಮಾಧ್ಯಮ  ದೊಡ್ಡ ಬಿಜನೆಸ್ ಆಗಿದೆ ಎಂಬ ಅಭಿಪ್ರಾಯ ಜನಸಾಮಾನ್ಯರಿಗಿದೆ. ಪತ್ರಿಕೋದ್ಯಮ ದಮನಿತರು, ಶೋಷಿತರ ಪರವಾಗಿ ಕೆಲಸ ಮಾಡಬೇಕು. ರಾಜ್ಯದ ಸಮಗ್ರ ಅಭಿವೃದ್ದಿಗೆ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದೆೆ. ಸರ್ಕಾರದಿಂದ ಪತ್ರಕರ್ತರಿಗೆ ಉಚಿತ ನಿವೇಶನ, ಬಸ್ ಪಾಸ್,ಆರೋಗ್ಯ ಸಂಜೀವಿನಿ ಕುರಿತು ಸರಕಾರಕ್ಕೆ ಮನವಿ ಮಾಡಲಾಗುತ್ತದೆ. ರಾಜ್ಯದ ವಿವಿಧೆಡೆ ಪತ್ರಕರ್ತರಿಗೆ ತರಬೇತಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ನಡೆಸಲಾಗುತ್ತದೆ ಎಂದರು.ಪತ್ರಿಕೋದ್ಯಮ ಉಪನ್ಯಾಸಕ ಹಾಗೂ ಪತ್ರಕರ್ತರಾದ  ರವೀಂದ್ರ ಎಸ್. ತೆಳಗಡೆ ಮಾತನಾಡಿ,  150 ವರ್ಷಗಳ ಇತಿಹಾಸ ಪತ್ರಿಕೆ ಹೊಂದಿದೆ, ಸಮಾಜದಲ್ಲಿ ಒಳ್ಳೆಯ ಕೆಲಸಗಳು ಮಾಡುತ್ತದೆ. ಜನರ ನೋವು ನಲಿವುಗಳಿಗೆ ಸ್ಪಂದಿಸುವುದು ಪತ್ರಕರ್ತರ ಕರ್ತವ್ಯವಾಗಿದೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳು ನಿತ್ಯ ಆಧ್ಯಾಯನ ನಡೆಸಬೇಕು. ಇದರಿಂದ ಸಮಾಜದ ಆಗು ಹೋಗು ತಿಳಿದು ಸುದ್ದಿ ಮಾಡಲು ಅನುಕೂಲವಾಗುತ್ತದೆ ಎಂದರು. ಪ್ರಾಸ್ತಾವಿಕ ಉಪನ್ಯಾಸಕ  ಎಸ್.ಕೆ ಖಾದ್ರಿ ಮಾತನಾಡಿ  ಸಮಾಜ ಅಂಕು ಡೊಂಕುಗಳು ತಿದ್ದುವುದು ಪತ್ರಿಕೆಗಳು, ಸಂವಿಧಾನ ನಾಲ್ಕನೇ ಅಂಗವಾಗಿ ಎಲ್ಲಾ  ಪ್ರತಿಯೊಬ್ಬರು ಪತ್ರಕರ್ತರು ಕಾರ್ಯನಿರ್ವಯಿಸುತ್ತಾರೆ. ಜನರ ಸನಸ್ಯೆಗಳು ಕೆಲವು ಗ್ರಾಮಗಳ ಮೂಲ ಸಮಸ್ಯೆಗಳು ಪತ್ರಿಕೆಯಿಂದ ಸೌಲಭ್ಯಗಳು ಪಡೆದು ಕೆೊಳ್ಳಲು ಸಮಾಜದಲ್ಲಿ ಮುಖ್ಯ ಪಾತ್ರವಾಗಿದೆ ಎಂದರು.   ಪ್ರಾಂಶುಪಾಲ ಭಜರಂಗಬಲಿ,  ಪ್ರಾಧ್ಯಾಪಕರಾದ ಡಾ.ವೀರೇಶ, ಮರ್ವಿನ್ ಡಿಸೋಜ್, ತಬ್ಬಸುಮ್ ಆರಾ, ಡಾ. ಆಶಿಕಾ ಎಚ್.ಸಿ, ಉಪನ್ಯಾಸಕರಾದ ಗೋಪಾಲರೆಡ್ಡಿ ಮಾದಿನಾಳ,  ಮಾರುತೇಶ ಇದ್ದರು.

Share This Article
error: Content is protected !!
";