Ad image

ಕೇಂದ್ರ ಬಜೆಟ್‌ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಮಹತ್ವ ಘೋಷಣೆ?: ನೌಕರರ ವಿಶ್ವಾಸ

Vijayanagara Vani
ಕೇಂದ್ರ ಬಜೆಟ್‌ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಮಹತ್ವ ಘೋಷಣೆ?: ನೌಕರರ ವಿಶ್ವಾಸ

ನವದೆಹಲಿ, : ಇದೇ ತಿಂಗಳ ಜುಲೈನಲ್ಲಿ ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್ ಮಂಡನೆ ಆಗಲಿದೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಈ ಮುಂಗಡಪತ್ರದ ವೇಳೆ ಹೊಸ ವೇತನ ಆಯೋಗ ಜಾರಿ ಕುರಿತು ಮಹತ್ವದ ನಿರ್ಧಾರಗಳು ಘೋಷಣೆ ಆಗಬಹುದು ಎನ್ನಲಾಗಿದೆ.
ಹೌದು, ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನ ಸಮಾಜದ ಎಲ್ಲ ಕ್ಷೇತ್ರಗಳಿಗೆ ದೊಡ್ಡ ಕೊಡುಗೆಗಳು ಸಿಗಬಹುದು. ಅಭಿವೃದ್ಧಿ ಪರ ಅನುದಾನ ಹಂಚಿಕೆ, ಹೊಸ ಯೋಜನೆ ಅನುಷ್ಠಾನ ಜಾರಿ ಘೋಷಣೆ ಆಗುವುದು ಸಾಮಾನ್ಯ. ಆದರೆ ಅದರಲ್ಲಿ ಯಾವ ವಲಯದವರಿಗೆ ಆದ್ಯತೆ ನೀಡಲಾಗಿದೆ ಎಂಬುದು ಮುಖ್ಯವಾಗಿರುತ್ತದೆ.

- Advertisement -
Ad imageAd image

ಪೈಕಿ ಇಪಿಎಫ್ ಖಾತೆದಾರರು ಮತ್ತು ಕೇಂದ್ರ ಸರ್ಕಾರಿ ಉದ್ಯೋಗಿಗಳ ಎಂಟನೇ ವೇತನ ಆಯೋಗ ಜಾರಿಯ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಬಜೆಟ್ ಮಂಡನೆಯಾಗುವ ಜುಲೈ 23 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದರ ಜಾರಿ ಬಗ್ಗೆ ಪ್ರಮುಖ ಘೋಷಣೆ ಮಾಡುವ ಬಗ್ಗೆ ಸರ್ಕಾರಿ ನೌಕರರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಹೆಚ್ಚಾಗುತ್ತಿದೆ ಕೇಂದ್ರು ನೌಕರರ ಕಾತರ 8ನೇ ವೇತನ ಆಯೋಗ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂಬ ಅತೀವ ವಿಶ್ವಾಸದಲ್ಲಿ ಕೇಂದ್ರ ನೌಕರರಿದ್ದಾರೆ. ಹೀಗಾಗಿ ಬಜೆಟ್ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
8ನೇ ವೇತನ ಆಯೋಗದ ಸ್ಥಾಪನೆ ಕುರಿತು ಯಾವುದೇ ನಿರ್ಧಾರ ಹೊರ ಬಿದ್ದರೂ ಅದು ನೌಕರರ ಮಟ್ಟಿಗೆ ಬೂಸ್ಟರ್ ಇದ್ದಂತೆ. ಬೆಲೆ ಏರಿಕೆ, ಹಣದುಬ್ಬರದಂತಹ ಸಂದರ್ಭದಲ್ಲಿ ಇದು ನೌಕರರಿಗೆ ಆರ್ಥಿಕ ಚೇತರಿಕಗೆ ನೀಡುತ್ತದೆ ಎಂಬ ಭರವಸೆ ನೌಕರರ ಇಟ್ಟುಕೊಂಡಿದ್ದಾರೆ

ಸದ್ಯ ಈ ಕುರಿತು ಕೇಂದ್ರ ಸರ್ಕಾರ ಅಧಿಕೃತವಾಗಿ ಏನನ್ನು ತಿಳಿಸಿಲ್ಲ. ಕೆಲವು ಮಾಧ್ಯಮಗಳಲ್ಲಿ ಬಜೆಟ್ ನಲ್ಲಿ ಹೊಸ ವೇತನ ಆಯೋಗ ಜಾರಿ ಬಗ್ಗೆ ವರದಿ ಆಗುತ್ತಿದೆ. ಬಜೆಟ್ ದಿನವೇ ಈ ಕುರಿತು ನೈಜ ಚಿತ್ರಣ ನೌಕರರಿಗೆ ಸಿಗಲಿದೆ.
ಸರ್ಕಾರ ನಿರ್ಧರಿಸಿದರೆ ಜಾರಿ ಯಾವಾಗ? ಕೇಂದ್ರ ಸರ್ಕಾರ ಎಂಟನೇ ವೇತನ ಜಾರಿಗೆ ನಿರ್ಧರಿಸಿದೆ. ಅದರು ಎರಡು ವರ್ಷಗಳ ನಂತರ ಜಾರಿಗೆ ಬರಲಿದೆ. ಇದು 2026 ರಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವ ನಿರೀಕ್ಷೆಗಳು ಇವೆ. 8ನೇ ವೇತನ ಆಯೋಗ ಜಾರಿಯಾದ ಬಳಿಕ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. ಈ ಹಿಂದೆ 2016ರಲ್ಲಿ 7ನೇ ವೇತನ ಆಯೋಗ ಜಾರಿ ಮಾಡಿದ್ದಾಗ ನೌಕರರ ವೇತನದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದ್ದನ್ನು ನಾವೀಗ ಸ್ಮರಿಸಬಹುದು. ಸದ್ಯ ಈ ಮೇಲಿನ ಎಲ್ಲ ವಿಷಯಗಳ ಮೇಲೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಕೇಂದ್ರ ಸರ್ಕಾರ ನಿರ್ಧಾರದಿಂದ ಸುಮಾರು 68 ಲಕ್ಷ ಸರ್ಕಾರಿ ನೌಕರರು ಮತ್ತು 49 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಒಮ್ಮೆ ಈ ಅರ್ಜಿ ಕಾರ್ಯರೂಪಕ್ಕೆ ಬಂದರೆ ಫಿಟ್‌ಮೆಂಟ್ ಫ್ಯಾಕ್ಟರ್ ದರಗಳಲ್ಲಿ ಭಾರಿ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

Share This Article
error: Content is protected !!
";