Ad image

ಶ್ರೀವಾರಿ ಭಕ್ತರಿಗೆ ಗುಡ್ ನ್ಯೂಸ್: ಅಕ್ಟೋಬರ್ ದರ್ಶನ ಟಿಕೆಟ್ ಬಿಡುಗಡೆ

Vijayanagara Vani
ಶ್ರೀವಾರಿ ಭಕ್ತರಿಗೆ ಗುಡ್ ನ್ಯೂಸ್: ಅಕ್ಟೋಬರ್ ದರ್ಶನ ಟಿಕೆಟ್ ಬಿಡುಗಡೆ

 ಶ್ರೀವಾರಿಯ ಭಕ್ತರಿಗೆ ಟಿಟಿಡಿ ಸಿಹಿಸುದ್ದಿಯೊಂದನ್ನು ನೀಡಿದೆ. ಅಕ್ಟೋಬರ್ ತಿಂಗಳಲ್ಲಿ ತಿರುಪತಿಗೆ ಹೋಗಲು ಬಯಸುವ ಭಕ್ತರಿಗಾಗಿ ಆನ್‌ಲೈನ್ ಟಿಕೆಟ್‌ಗಳನ್ನು ಟಿಟಿಡಿ ಬಿಡುಗಡೆ ಮಾಡಲಿದೆ.

ಜುಲೈ 18ರಿಂದ ಅಕ್ಟೋಬರ್ ತಿಂಗಳ ದರ್ಶನ್‌ಕ್ಕಾಗಿ ಭಕ್ತರು ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯಬಹುದಾಗಿದೆ. ಇದರಲ್ಲಿ ಆರ್ಜಿತ ಸೇವೆಗಳು, ದರ್ಶನ ಮತ್ತು ವಸತಿ ಕೊಠಡಿಗಳಿಗಾಗಿ ಟಿಕೆಟ್ ಬುಕ್ ಮಾಡಬಹುದು.

ಹೌದು… ಶ್ರೀವರಿ ಸೇವಾ ಟಿಕೆಟ್‌ಗಳನ್ನು ಇದೇ ತಿಂಗಳ 18 ರಂದು (ಜುಲೈ) ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಜುಲೈ 20 ರಂದು ಬೆಳಗ್ಗೆ 10 ಗಂಟೆಯವರೆಗೆ ಭಕ್ತರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಟಿಟಿಡಿ ಅವಕಾಶ ಕಲ್ಪಿಸಲಿದೆ. ಜುಲೈ 20 ರಿಂದ 22 ರ ಮಧ್ಯಾಹ್ನ 12 ಗಂಟೆಯ ಮೊದಲು ಮೊತ್ತವನ್ನು ಪಾವತಿಸಿದವರಿಗೆ ಟಿಟಿಡಿ ಲಕ್ಕಿ ಡಿಪ್ ಟಿಕೆಟ್‌ಗಳನ್ನು ನೀಡುತ್ತದೆ. ಅಲ್ಲದೆ ಟಿಟಿಡಿಯು ತಿರುಮಲ ಶ್ರೀವಾರಿ ಆರ್ಜಿತ ಸೇವೆಯ ಟಿಕೆಟ್‌ಗಳಾದ ಕಲ್ಯಾಣೋತ್ಸವ, ಆರ್ಜಿತ ಬ್ರಹ್ಮೋತ್ಸವ, ಸಹಸ್ರದೀಪಾಲಂಕಾರ, ಊಂಜಾಲ್ ಸೇವಾ ಟಿಕೆಟ್‌ಗಳನ್ನು ಜುಲೈ 22ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದೆ. ಅದೇ ದಿನ (ಜುಲೈ 22) ಮಧ್ಯಾಹ್ನ 3 ಗಂಟೆಗೆ, ವರ್ಚುವಲ್ ಸೇವೆಗಳಿಗಾಗಿ ಅಕ್ಟೋಬರ್ ಕೋಟಾ ಮತ್ತು ಅವುಗಳ ವೀಕ್ಷಣಾ ಸ್ಲಾಟ್‌ಗಳನ್ನು ಆನ್‌ಲೈನ್‌ನಲ್ಲಿ ಟಿಟಿಡಿ ಬಿಡುಗಡೆ ಮಾಡುತ್ತದೆ.

ಜೊತೆಗೆ ಟಿಟಿಡಿಯು ಅಕ್ಟೋಬರ್ ತಿಂಗಳ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಜುಲೈ 23 ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.

ವಯೋವೃದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು ತಿರುಮಲ ಶ್ರೀಗಳ ದರ್ಶನಕ್ಕೆ ಅನುವು ಮಾಡಿಕೊಡಲು ಅಕ್ಟೋಬರ್ ತಿಂಗಳ ಉಚಿತ ವಿಶೇಷ ದರ್ಶನಂ ಟೋಕನ್‌ಗಳ ಕೋಟಾವನ್ನು ಜುಲೈ 23 ರಂದು ಮಧ್ಯಾಹ್ನ 3 ಗಂಟೆಗೆ ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ. ಅಕ್ಟೋಬರ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾವನ್ನು ಜುಲೈ 24ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ. ಜುಲೈ 24ರಂದು ಮಧ್ಯಾಹ್ನ 3 ಗಂಟೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಅಕ್ಟೋಬರ್ ತಿಂಗಳ ಕೊಠಡಿಯ ಕೋಟಾವನ್ನು ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ. ಜುಲೈ 25 ರಂದು ಟಿಟಿಡಿ ವ್ಯಾಪ್ತಿಯ ದೇವಾಲಯಗಳಲ್ಲಿ ಆಗಸ್ಟ್ ತಿಂಗಳ ಸೇವಾ ಕೋಟಾವನ್ನು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಭಕ್ತರು ಸೇವೆಗಳು, ದರ್ಶನ ಟಿಕೆಟ್‌ಗಳು ಮತ್ತು ವಸತಿ ಕೊಠಡಿಗಳನ್ನು https://ttdevasthanams.ap.gov.in ಮೂಲಕ ಕಾಯ್ದಿರಿಸುವಂತೆ ಟಿಟಿಡಿ ವಿನಂತಿಸಿದೆ.

ತಿರುಮಲ ರಶ್: ಬೆಟ್ಟದಲ್ಲಿ ಭಕ್ತರ ದಂಡು ವಾರಾಂತ್ಯದಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಭಾನುವಾರ 84,797 ಭಕ್ತರು ತಿರುಮಲ ಶ್ರೀಗಳಿಗೆ ಭೇಟಿ ನೀಡಿದ್ದರು. 29,497 ಮಂದಿ ಹರಕೆ ತೀರಿಸಿ ಪೂಜೆ ಸಲ್ಲಿಸಿದರು. ಶ್ರೀವಾರಿ ಹುಂಡಿಗೆ 3.98 ಕೋಟಿ ಆದಾಯ ಬಂದಿದೆ. ಟೋಕನ್ ಇಲ್ಲದ ಭಕ್ತರಿಗೆ ಶ್ರೀಗಳ ದರ್ಶನಕ್ಕೆ 18 ಗಂಟೆಯಿಂದ 24 ಗಂಟೆ ಬೇಕಾಗುತ್ತಿದೆ. ಇದರಿಂದಾಗಿ ಸರತಿ ಸಾಲಿನಲ್ಲಿ ಭಕ್ತರಿಗೆ ಅಗತ್ಯ ಆಹಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಕಲ್ಪಿಸಲು ಟಿಟಿಡಿ ವ್ಯವಸ್ಥೆ ಮಾಡಿದೆ. ಟ್ರಾಫಿಕ್ ಮೇಲೆ ಟಿಟಿಡಿ ನಿರಂತರವಾಗಿ ನಿಗಾ ಇಡುತ್ತಿದೆ

Share This Article
error: Content is protected !!
";