Ad image

ದೈಹಿಕ ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಅವಶ್ಯಕ: ಪ್ರೊ.ತಿಪ್ಪೇರುದ್ರಪ್ಪ

Vijayanagara Vani
ದೈಹಿಕ ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಅವಶ್ಯಕ: ಪ್ರೊ.ತಿಪ್ಪೇರುದ್ರಪ್ಪ
ಬಳ್ಳಾರಿ,ಜು.15
ದೈಹಿಕ ಶಿಕ್ಷಣ ಮತ್ತು ಕ್ರೀಡೆ ವಿಭಾಗದ ಪ್ರಶಿಕ್ಷಣಾರ್ಥಿಗಳು ಪರಿಪೂರ್ಣವಾಗಬೇಕಾದರೆ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಾಯೋಗಿಕ ಅನುಭವ ಹೊಂದಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ತಿಪ್ಪೇರುದ್ರಪ್ಪ.ಜೆ ಅವರು ಹೇಳಿದರು.
ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾಂತರ್ಗತ ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದಲ್ಲಿ ಇಂಥ ಕ್ರೀಡಾ ಚಟುವಟಿಕೆಗಳು ಸಂಘಟಿಸುವುದರಿಂದ ಎಂಪಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಾಯೋಗಿಕ ಅನುಭವವಾಗಿ ಮುಂದಿನ ವೃತ್ತಿಯಲ್ಲಿ ಅವರು ಸಮರ್ಥರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡೆ ವಿಭಾಗದ ಮುಖ್ಯಸ್ಥ ಡಾ.ಶಶಿಧರ ಕೆಲ್ಲೂರ ಅವರು ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಮೊದಲು ಯೋಜನೆ ರೂಪಿಸಬೇಕು, ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕು. ಆಗ ಮಾತ್ರ ಕ್ರೀಡಾಕೂಟದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
*ಫಲಿತಾಂಶ:*
ಪುರುಷರ ವಿಭಾಗ: ಪ್ರಥಮ ಸ್ಥಾನ-ಮಲ್ಲಿಕಾರ್ಜುನ(ನೀರಜ ಛೊಪ್ರಾ ತಂಡ), ದ್ವಿತೀಯ ಸ್ಥಾನ-ಚಂದ್ರಯ್ಯ(ಮೇಜರ ಧ್ಯಾನ ಚಂದ ತಂಡ), ತೃತಿಯ ಸ್ಥಾನ-ಸಂತೋಷ್ ಕುಮಾರ(ಅಭಿನವ್ ಭಿಂದಾ ತಂಡ).
ಮಹಿಳೆಯರ ವಿಭಾಗ: ಪ್ರಥಮ ಸ್ಥಾನ-ಪೂಜಾ(ನೀರಜ ಛೊಪ್ರಾ ತಂಡ), ದ್ವಿತೀಯ ಸ್ಥಾನ-ಮಹಾದೇವಿ(ಪಿ.ವಿ.ಸಿಂಧು ತಂಡ), ತೃತಿಯ ಸ್ಥಾನ-ಸುನಿತಾ(ಅಭಿನವ್ ಭಿಂದಾ ತಂಡ) ಹಾಗೂ ಮೇಜರ ಧ್ಯಾನ ಚಂದ ತಂಡದವರು ವೀರಾಗ್ರಣಿ ಪ್ರಶಸ್ತಿಯನ್ನು ಪಡೆದರು.
ಬಳಿಕ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ಸಂಪತ್ ಕುಮಾರ್, ಶಾಲಾಂತರ್ಗತ ಕ್ರೀಡಾಕೂಟದ ನಿರ್ದೇಶಕ ರಾಜೇಶ್, ಅತಿಥಿ ಉಪನ್ಯಾಸಕ ಕೆ.ಮಹೇಶ್ ಬಾಬು, ವಿದ್ಯಾರ್ಥಿ ಕಾರ್ಯದರ್ಶಿ ಅರುಣಕುಮಾರ ಸೇರಿದಂತೆ ಸಂಶೋಧನಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Share This Article
error: Content is protected !!
";