Ad image

ರೈತನೊಂದಿಗೆ ರವಿ ಬಂದ ಕೃಷಿ ಮಾಡಲು ………

Vijayanagara Vani
ರೈತನೊಂದಿಗೆ ರವಿ ಬಂದ ಕೃಷಿ ಮಾಡಲು ………

ದೇಶಕ್ಕೆ ಅನ್ನ ನೀಡುವ ಅನ್ನದಾತ ದಿನಕಳೆದಂತೆಲ್ಲಾ ಸಂಕಷ್ಟಕ್ಕೀಡಾಗುತ್ತಿದ್ದಾನೆ,ಬದಲಾಗುತ್ತಿರುವ ಪರಿಸರ,ಮಳೆಯ ಪ್ರಮಾಣಗಳು, ಮಲಿನವಾಗುತ್ತಿರುವ ಮಣ್ಣು, ಕೀಟಗಳ ಕಾಟ, ಬೆಲೆಗಳ ಏರಿಳಿತ, ರಾಸಾಯನಿಕಗಳ ಅತಿಯಾದ ಬಳಕೆ ಇತ್ಯಾದಿ ಕಾರಣಗಳಿಂದ ವ್ಯವಸಾಯವು ಸ್ಥಿರವಾದ ಲಾಭ ತರುತ್ತಿಲ್ಲ. ಅಷ್ಟಾದರೂ ಕೃಷಿಯೇ ಪ್ರಮುಖ ವೃತ್ತಿಯಾಗಿರುವ ಭಾರತದ ಜನರು ಅದನ್ನು ಬಿಡುವುದಿಲ್ಲ ಅಥವಾ ಬಿಡಲು ಸಾಧ್ಯವಿಲ್ಲ.ಇಷ್ಟೆಲ್ಲಾ ಸಮಸ್ಯೆಗಳ ನಡುವೆ ರೈತರಿಗೆ ಇತ್ತೀಚಿಗೆ ಹೊಸ ಸಮಸ್ಯೆೆ ಎದುರಾಗಿದೆ, ಫಲವತ್ತಾದ ಮತ್ತು ಬೆಳೆಯನ್ನು /ಅನ್ನವನ್ನು ಕೊಡುವ ಭೂಮಿ ರೀಯಲ್ ಎಸ್ಟೇಟ್ ಹೆಸರಲ್ಲಿ ನಮ್ಮ ಹೊಲಗಳು ಸೈಟ್‌ಗಳಾಗುತ್ತಿವೆ.ಸೈಟ್‌ನಿಂದ ಮಾರುವವರಿಗೆ ಮತ್ತು ಕೊಳ್ಳುವವರಿಗೆ ಲಾಭವಿರ ಬಹುದು. ಆದರೆ ಭೂ ಗ್ರಹದಲ್ಲಿ ವಾಸಿಸುವ ಸಕಲ ಜೀವಿಗಳಿಗೆ ಈ ಹೊಲಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಗತ್ಯಯವಾಗಿವೆ . ನಮಗೆ ಆಹಾರ ಸಿಗುವ ಅವಕಾಶ ಈ ಮಣ್ಣಲ್ಲಿ ಮಾತ್ರ. ಇಂತಹ ಮಣ್ಣು ಸೈಟ್‌ಗಳ ಪಾಲಾಗಿದೆ. ಇದಕ್ಕೆ ಬೆಳೆಯುವ ಜನಸಂಖ್ಯೆಯೂ ಸ್ವಲ್ಪ ಕಾರಣವಿರಬಹುದು. ಆದರೆ ಭವಿಷ್ಯದಲ್ಲಿ ನಮ್ಮ ಜನ ಎಲ್ಲಿ ಉತ್ತಿ_ಬಿತ್ತಿ ಬೆಳೆ ಬೆಳೆದು ಅನ್ನ ತಿನ್ನ ಬೇಕು ? ಒಮ್ಮೆ ಯೋಚಿಸ ಬೇಕಿದೆ.

ಆದರೂ.. ನಾಗರೀಕತೆಯ ಹಾದಿಯಲ್ಲಿ ಸಮಸ್ಯೆಗಳು ಬಂದಾಗ ವಿಜ್ಞಾನವು ಪರಿಹಾರಗಳನ್ನು ಆಗಿಂದಾಗ್ಗೆ ಕೊಡುತ್ತಾ ಬಂದಿದೆ.ಅದರ ಸಾಲಿನಲ್ಲಿ ಕೃಷಿಗೆ ಸೌರಶಕ್ತಿ ಎಂಬ ಹೊಸ ಪರಿಕಲ್ಪನೆ.ನಮಗೆಲ್ಲಾ ಗೊತ್ತಿರುವಹಾಗೆ ಸೌರ ಶಕ್ತಿಯು ನವೀಕರಿಸ ಬಹುದಾದ ಶಕ್ತಿಯ ಒಂದು ಮೂಲವಾಗಿದೆ.ಬೆಳೆಯುತ್ತಿರುವ ಜನಸಂಖ್ಯೆಯ ಅಗತ್ಯತೆಗಳನ್ನು ಪೂರೈಸಲು ಮತ್ತು ಆಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆ ಗಮನಾರ್ಹವಾಗಿ ಹೆಚ್ಚಿದೆ. ಪಂಪ್‌ಸೆಟ್‌ಗಳು, ಜನರೇಟರ್‌ಗಳು, ಮೋಟಾರ್‌ಗಳು, ಮೊದಲಾದ ಕೃಷಿ ಉಪಕರಣಗಳಿಗೆ ಶಕ್ತಿ ತುಂಬಲು ಸಾಂಪ್ರದಾಯಿಕ ವಿದ್ಯುತ್‌ಶಕ್ತಿಯ ಬದಲಿಗೆ ಸೌರ ಶಕ್ತಿ ನೀಡ ಬಲ್ಲುದು. ಸೌರಶಕ್ತಿ ಇಂದ ಉತ್ಪನ್ನವಾದ ವಿದ್ಯುತ್‌ಶಕ್ತಿ ಇಷ್ಟು ದಿನ ಮನೆಬಳಕೆಗೆ, ತಂತ್ರಜ್ಞಾನಗಳಲ್ಲಿ, ಕಾರ್ಖಾನೆಗಳಲ್ಲಿ ಬಳಕೆಯಾಗುತ್ತಿತ್ತು, ಕೆಲವೆಡೆ ಸೌರವಿದ್ಯುತ್‌ನ್ನು ಮಾತ್ರ ಉತ್ಪಾದಿಸಲು ಹೊಲಗಳನ್ನು ಬಳೆಸಲಾಗುತ್ತಿತ್ತು ಆದರೆ ಈಗ ರೈತರು ತಮ್ಮ ಹೊಲಗಳಲ್ಲಿ ಕೃಷಿಯ ಜೊತೆಗೆ ಸಮನಾಂತರವಾಗಿ ಸೌರವಿದ್ಯುತ್‌ನ್ನು ಉತ್ಪಾದಿಸಬಹುದು. ಉತ್ಪಾದಿಸಿದ ಸೌರವಿದ್ಯುತ್‌ನ್ನು ಕೃಷಿಚಟುವಟಿಕೆಗಳಲ್ಲಿ ಬಳಸಿಕೊಂಡು ಉಳಿದ ವಿದ್ಯುತ್‌ಶಕ್ತಿಯನ್ನು ಮಾರಾಟ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗ ಬಹುದು. ಈ ವ್ಯವಸ್ಥೆಯನ್ನು “ಅಗ್ರಿವೋಲ್ಟಾಯಿಕ್” ಎಂದು ಕರೆಯುತ್ತೇವೆ.

ಅಗ್ರಿವೋಲ್ಟಾಯಿಕ್ಸ್: ಅಗ್ರಿ_ಪಿವಿ ಎಂದು ಕರೆಯಲ್ಪಡುವ ಅಗ್ರಿವೋಲ್ಟಾಯಿಕ್ಸ್ ಎಂದರೆ ರೈತರು ತಮ್ಮ ಹೊಲಗಳಲ್ಲಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸೌರ ವಿದ್ಯುತ್ ಉತ್ಪಾದಿಸುವುದು. ಕೃಷಿ ಭೂಮಿಯಲ್ಲಿ ಸಹಜವಾಗಿ ರೈತರು ಬೆಳೆಯುವ ಫಸಲಿನ ಮೇಲೆ ಅನುಕೂಲಕರ ಎತ್ತರದಲ್ಲಿ ಸೌರವಿದ್ಯುತ್ ಜನಕಗಳನ್ನು ವ್ಯವಸ್ಥೆ ಮಾಡಲಾಗಿರುತ್ತದೆ, ಅಂದರೆ ಸೂರ್ಯನ ಬೆಳಕನ್ನು ಕೆಳಗಿನ ಸಸ್ಯಗಳಿಗೆ ತಲುಪಿಸುವಷ್ಟು ನೆಲದಿಂದ ಸಾಕಷ್ಟು ಎತ್ತರಕ್ಕೆ ಜೋಡಿಸಲಾಗುತ್ತದೆ.ಇಲ್ಲಿ ಸೌರವಿದ್ಯುತ್ ಉತ್ಪಾದನೆ ಮತ್ತು ಆಹಾರ ಉತ್ಪಾದನೆ ಎರಡು ಏಕ ಕಾಲದಲ್ಲಿ ನಡೆಯುತ್ತದೆ,ಇದರಿಂದ ಭೂಮಿಯ ಲಭ್ಯತೆ ಸೀಮಿತ ಇರುವ ಪ್ರದೇಶಗಳಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಅಗ್ರಿ ಪಿವಿನಲ್ಲಿ ಪಿವಿ ಎಂದರೆ ಫೋಟೋವೋಲ್ಟಿಕ್ ಸೆಲ್ (ಫೋಟೋ ಎಂದರೆ ಬೆಳಕು, ವೋಲ್ಟಿಕ್ ಎಂದರೆ ವಿದ್ಯುತ್‌ಶಕ್ತಿ) ಎಂದು ಅರ್ಥ, ಸಹಜವಾಗಿ ಇದನ್ನು ಸೋಲಾರ್ ಸೆಲ್ ಎಂದು ಸಹ ಕರೆಯುತ್ತೇವೆ.ಇದು ಸೂರ್ಯನ ಬೆಳಕನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಯಾಂತ್ರಿಕವಲ್ಲದ ಉಪಕರಣ.
1980 ರ ದಶಕದ ಆರಂಭದಲ್ಲಿ ಅಡಾಲ್ಫ್ ಗೊಯೆಟ್ಜ್ ಬರ್ಗರ್ ಮತ್ತು ಅವರ ಸಹೋದ್ಯೋಗಿ ಅರ್ಮಿನ್ ಝಾಸ್ಟೋ ಅವರು ಅಗ್ರಿವೋಲ್ಟಾಯಿಕ್ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ನಂತರದ ದಿನಗಳಲ್ಲಿ ಇದು ಆಮೆ ವೇಗದಲ್ಲಿ ಸಾಗಿತು.ಜಪಾನ್‌ನಲ್ಲಿ ಪ್ರವರ್ತಕ ಅಕಿರಾ ನಾಗಶಿಮಾ ಅವರು 2004ರಲ್ಲಿ ಮೊದಲ ಸಂಶೋಧನಾ ಪೈಲೆಟ್ ವ್ಯವಸ್ಥೆಗಳಲ್ಲಿ ಪಿ,ವಿ ಮಾಡ್ಯುಲೆಗಳ ಕೆಳಗೆ ಬೆಳೆ ಬೆಳವಣಿಗೆಯನ್ನು ವಿಶ್ಲೇ಼ಷಿಸಿದರು ಮತ್ತು “ಸೌರ ಹಂಚಿಕೆ” ಶೀರ್ಷಿಕೆಯಡಿಯಲ್ಲಿ ತಂತ್ರಜ್ಞಾನವನ್ನು ಉತ್ತೇಜಿಸಿದರು. 2012 ರಲ್ಲಿ ಸರ್ಕಾರದಿಂದ ಬೆಂಬಲ ಪಡೆದು ಜಾರಿಗೆ ಬಂತು.2014ರಲ್ಲಿ ಚೀನಾ ದೊಡ್ಡ ಪ್ರಮಾಣದ ಅಗ್ರಿವೋಲ್ಟಾಯಿಕ್ ಸಿಸ್ಟಮ್‌ಗಳನ್ನು ಸ್ಥಾಪಿಸಿತು ಇಂದಿಗೂ ವಿಶ್ವದ ಅತಿ ದೊಡ್ಡ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿರುವ ದೇಶವಾಗಿದೆ.ನಂತರದ ದಿನಗಳಲ್ಲಿ ಅನೇಕ ದೇಶಗಳಲ್ಲಿ ಈ ಯೋಜನೆ ಮತ್ತು ತಂತ್ರಜ್ಞಾನ ಜಾರಿಗೆ ಬಂದಿತು.2021 ರಲ್ಲಿ ಅಗ್ರಿವೋಲ್ಟಾಯಿಕ್ಸ್ ಜಾಗತಿಕವಾಗಿ 14ಜಿಡಬ್ಲುö್ಯ ಪಿ (14 ಬಿಲಿಯನ್ ವ್ಯಾಟ್ಸ್) ಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಮಾರುಕಟ್ಟೆ _ಸಿದ್ದ ತಂತ್ರಜ್ಞಾನವಾಗಿ ಹೊರಹೊಮ್ಮಿತು.

ಇತ್ತೀಚಿನ ವರ್ಷಗಳಲ್ಲಿ ಭಾರತವು ಈ ವಿಧದ ಸೌರಶಕ್ತಿಯ ಅಳವಡಿಕೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ.ಜೂನ್ 2024ರ ಹೊತ್ತಿಗೆ ಭಾರತದ ಸ್ಥಾಪಿತ ಸೌರ ಪಿವಿ ಸಾಮರ್ಥ್ಯವು 85474.31 ಮೆಗಾ ವ್ಯಾಟ್ಸ್ ನಲ್ಲಿ ಪ್ರಭಾವಶಾಲಿಯಾಗಿ ನಿಂತಿದೆ.ನಮ್ಮ ದೇಶವು 2024_25ನೇ ಆರ್ಥಿಕ ವರ್ಷದ ಮೊದಲ ತ್ರೆöಮಾಸಿಕದಲ್ಲಿ ಭಾರತವು 3.66 ಗೆಗಾ ವ್ಯಾಟ್ಸ್ ಗಿಂತ ಹೆಚ್ಚು ಸೌರ ಪಿವಿ ಸಾಮರ್ಥ್ಯವನ್ನು ಸೇರಿಸಿದೆ.ಇದು ಏರುಗತಿಯಲ್ಲಿ ಸಾಗುತ್ತಿದೆ ಎಂಬುದನ್ನುತೋರಿಸುತ್ತದೆ.
ಸ್ವಿರ್ಜ್ರ್‌ಲ್ಯಾಂಡ್‌ನಲ್ಲಿ ಇನ್‌ಸೋಲೈಟ್ ಕಂಪನಿಯು ಅರೆ ಪಾರದರ್ಶಕ ಸೌರ ಮಾಢ್ಯುಲೊ ಗಳನ್ನು ಸಮಗ್ರ ಟ್ರಾö್ಯಕಿಂಗ್ ವ್ಯವಸ್ಥೆ ಯೊಂದಿಗೆ ಅಭಿವೃದ್ಧಿಪಡಿಸುತ್ತಿದೆ ಇಲ್ಲಿ ಬೆಳಕು ಹೆಚ್ಚು ಬೇಕಾದಬೆಳೆಗಳನ್ನು ಬೆಳೆಯ ಬಹುದು.ಮತ್ತೆ ಕೆಲವೆಡೆ ದ್ಯುತಿವಿದ್ಯುದ್‌ಜನಕಗಳ ಹಸಿರು ಮನೆಯನ್ನು ಅಭವೃದ್ದಿಪಡಿಸಿದೆ.ಇಲ್ಲಿ ಸೌರ ಫಲಕಗಳು ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಚಲಿಸುತ್ತದೆ.ಕೆವೆಡೆ ಸೌರ ಫಲಕಗಳಡಿಯಲ್ಲಿ ಕುರಿ ಮತ್ತು ದನ ಮೇಯಿಸಲು ಹುಲ್ಲು ಬೆಳಸುವ ಅವಕಾಶವಿದೆ.

ಅಗ್ರಿ ವೋಲ್ಟಾಯಿಕ್‌ನ ಅನುಕೂಲಗಳು:
1 ಸೌರವಿದ್ಯುತ್ ಉತ್ಪಾದನೆ ಮತ್ತು ಆಹಾರ ಉತ್ಪಾದನೆ ಏಕಕಾಲದಲ್ಲಿ ನಡೆಸಲು ಭೂಮಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ವ್ಯವಸ್ಥೆ.
2.ಭೂಮಿಯ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸುವುದು.
3.ಬೆಳೆಗಳು ಭಾಗಶಃ ನೆರಳಿನಿಂದ ಪ್ರಯೋಜನ ಪಡೆಯುತ್ತವೆ
4.ಇದರಿಂದ ಮಣ್ಣಿನಿಂದ ನೀರು ಆವಿಯಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ಸಸ್ಯದ ಉಸಿರಾಟದ ವೇಗವನ್ನು ಕಡಿಮೆ ಮಾಡುತ್ತದೆ, ಇದು ಕೆಲವು ಬೆಳೆಗಳು ಉತ್ತಮವಾಗಿ ಬೆಳೆಯಲು ಸಹಕರಿಸುತ್ತದೆ.
5.ಸೋಲಾರ್ ವಿದ್ಯುತ್‌ಶಕ್ತಿಯನ್ನು ಉತ್ಪಾದಿಸಿ ಕೃಷಿಯಲ್ಲಿ ಬಳಸಿಕೊಂಡು ಉಳಿಕೆ ಶಕ್ತಿಯನ್ನು ಮಾರಾಟ ಮಾಡಿ ಹಣ ಸಂಪಾದಿಸ ಬಹುದು_ಇದು ರೈತರಿಗೆ ಆದಾಯ.
6.ಸೋಲಾರ್ ಫಲಕಗಳು ನೆಲದ ಹೊದಿಕೆಯಾಗಿ ಕೆಲಸ ಮಾಡುತ್ತಾ ಫಲಕಗಳ ಅಡಿಯಲ್ಲಿ ಕಳೆ ಬೆಳವಣಿಗೆಯನ್ನು ಸೀಮಿತಗೊಳಿಸಬಹುದು,ಜೊತೆಗೆ ಮಣ್ಣು ಸವೆತ ಮತ್ತು ಕೀಟಗಳ ಕಾಟವನ್ನು ಕಡಿಮೆ ಮಾಡ ಬಹುದು.
7. ಫಲಕಗಳು ಸಾಕಷ್ಟು ಎತ್ತರದಲ್ಲಿದ್ದರೆ, ದ್ರಾಕ್ಷಿ ಮತ್ತು ಇತರೆ ಅಂತಹ ಹಣ್ಣುಗಳನ್ನು ಬೆಳೆಯಬಹುದು.
8. ಸೂಕ್ಷö್ಮ ಬೆಳೆಗಳಿಗೆ ಭಾರೀ ಮಳೆ,ಆಲಿಕಲ್ಲು ಮಳೆಯಿಂದ ಉಂಟಾಗುವ ಹಾನಿಗೆ ರಕ್ಷಣೆಯಾಗಿ ಕೆಲಸಮಾಡುತ್ತವೆ.
ಚಪ್ಪರದ ರೂಪದಲ್ಲಿ ಸೌರಫಲಕಗಳನ್ನು ಜೋಡಿಸಿ ವ್ಯವಸಾಯ ಮಾಡುವುದು ಒಂದು ವಿಧಾನವಾದರೆ ಅದರಲ್ಲಿ ಉಂಟಾಗಬಹುದಾದ ಅನಾನುಕೂಲಗಳನ್ನು ಮೀರಲು ಲಂಬ ಸೌರ ಫಲಕಗಳನ್ನು ಸಹ ಸಂಶೋಧನೆ ಮಾಡಲಾಗಿದೆ.
ಲಂಬ ಸೌರ ಫಲಕಗಳು: ಹೆಸರೇ ಸೂಚಿಸುವಂತೆ ಸೌರ ಫಲಕಗಳನ್ನು ಭೂಮಿಗೆ ಲಂಬವಾಗಿ ಕೃಷಿ ಭೂಮಿಯಲ್ಲಿ ಸಮನಾಂತರ ಸಾಲುಗಳಲ್ಲಿ ಜೋಡಿಸಿರುತ್ತಾರೆ, ಈ ಫಲಕಗಳು ಲಂಬ ದ್ವಿಮುಖ ಫಲಕಗಳು. ಸೂರ್ಯೋದಯದಿಂದ ಸೂರ್ಯೋಸ್ಥದವರಗೆ ಸೂರ್ಯನ ಬೆಳಕು (ಸೂರ್ಯ ಧಿಗಂತದಲ್ಲಿದ್ದರೂ) ಫಲಕಗಳ ಮೇಲೆ ಬೀಳುತ್ತದೆ.ಮಾತ್ರವಲ್ಲ ಭೂಮಿಯ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ಬೆಳಕು ಫಲಕಗಳ ಮೇಲೆ ಬೀಳುವುದರಿಂದ ವಿದ್ಯುತ್ ಉತ್ಪಾದನೆಯ ಕ್ಷಮತೆ ಹೆಚ್ಚುತ್ತದೆ. ಫಲಕಗಳು ಲಂಬವಾಗಿ ಇರುವುದರಿಂದ ಮಧ್ಯದಲ್ಲಿ ಗಾಳಿ ಹಾಯಾಗಿ ಹಾದು ಹೋಗಿ ಫಲಕಗಳನ್ನು ತಂಪಾಗಿಸಿ ಹೆಚ್ಚು ದಿನ ಬಾಳಿಕೆ ಬರಲು ಸಹಕರಿಸುತ್ತವೆ ಜೊತೆಗೆ ಬಿದ್ದ ಧೂಳು ಗಾಳಿ ಮತ್ತು ಮಳೆಯಿಂದ ತನ್ನಷ್ಟಕ್ಕೆ ಸ್ವಚ್ಚವಾಗುತ್ತದೆ ಮತ್ತು ವಿದ್ಯುತ್‌ಶಕ್ತಿ ಉತ್ಪಾದಿಸಲು ಹೆಚ್ಚು ಅನುಕೂಲವಾಗಿದೆ.

ಕಡಿಮೆ ಸ್ಥಳ ಆಕ್ರಮಿಸಿಕೊಂಡ ಇವು ತೆಳ್ಳಗಿನ ವಿನ್ಯಾಸವು ಕೃಷಿಗೆ ಸಾಕಷ್ಟು ಅಂತರ ಮತ್ತು ಸೂರ್ಯನ ಬೆಳಕನ್ನು ಒದಗಿಸುತ್ತವೆ.ಪ್ಯಾನೆಲ್‌ಗಳು ತೀವ್ರವಾದ ಮದ್ಯಾನ್ಹದ ಬಿಸಿಲಿನಿಂದ ಉಪಯುಕ್ತ ನೆರಳು ಮತ್ತು ಕೆಳಗೆ ಬೆಳೆಯುವ ಬೆಳೆಗಳಿಗೆ ಶಾಖವನ್ನು ಒದಗಿಸುತ್ತವೆ.ಇದರಿಂದ ಇಳುವರಿ ಸುಧಾರಿಸ ಬಹುದು.
ಟಾಟಾ ಪವರ್ ಸೋಲಾರ್ ಮತ್ತು ಡೆಲ್ ಇಂಡಿಯಾ ಡೆಲ್‌ನ ಬೆಂಗಳೂರು ಕ್ಯಾಂಪಸ್ ನಲ್ಲಿ 120 ಕಿ.ವ್ಯಾಟ್ ನ ಭಾರತದ ಅತಿ ದೊಡ್ಡ ಲಂಬ ಸೌರ ಫಾರ್ಮ್ ನ್ನು ನಿರ್ಮಿಸಿದೆ.ಗ್ರೋ ಸೋಲಾರ್ ಎನರ್ಜಿ ಮಹಾರಾಷ್ಟçದಲ್ಲಿ 7 ಮೆಗಾ ವ್ಯಾಟ್ಸ್ ಸೌರಯೋಜನೆ ಸ್ಥಾಪಿಸಿದೆ.ಇಲ್ಲಿ ಕಬ್ಬು ಮತ್ತು ಬಾಳೆ ಮುಂತಾದ ಬೆಳೆಗಳಿಗೆ ಹನಿ ನೀರಾವರಿಯೊಂದಿಗೆ ಸೌರ ಫಲಕಗಳನ್ನು ಸಂಯೋಜಿಸಲಾಗಿದೆ.ಇದರಿAದ ಬೆಳೆಯ ಇಳುವರಿ15% ಹೆಚ್ಚಿದೆಯಂತೆ ಮತ್ತು ನೀರಿನ ಬಳಕೆಯಲ್ಲಿ 40% ಕಡಿಮೆಯಾಗಿದೆ ಎಂದು ವರದಿಗಳು ತಿಳಿಸುತ್ತಿವೆ.ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅರ್ಗಿವೋಲ್ಟಾಯಿಕ್‌ನಲ್ಲಿ ಮಹತ್ತರ ಬದಲಾಬಣೆಯೊಂದಿಗೆ ಮುಂದೆ ಸಾಗಿದೆ.

ಒಟ್ಟಾರೆ ಅಗ್ರಿವೋಲ್ಟಾಯಿಕ್ ವ್ಯವಸ್ಥೆ ರೈತರಿಗೆ ಕೃಷಿಯಲ್ಲಿ ಲಾಭ ತರಿಸುತ್ತಿದೆ ಎಂಬುದು ಸಾಬೀತಾಗುತ್ತಿದೆ, ಜೊತೆಗೆ ಇಲ್ಲಿ ಉತ್ಪಾದನೆಯಾಗುವ ಸೌರ ಶಕ್ತಿಯನ್ನು ರೈತರು ತಮ್ಮ ಕೃಷಿಯಲ್ಲಿ ಪಂಪ್ ಸೆಟ್‌ಗಳು ಇತರೆ ಯಂತ್ರಗಳಲ್ಲಿ ಬಳಸಿಕೊಳ್ಳ ಬಹುದು, ಜೊತೆಗೆ ವಿದ್ಯುತ್ ಶಕ್ತಿಯನ್ನು ಮಾರಿ ಹಣ ಸಂಪಾದಿಸುವ ಅವಕಾಶವಿದೆ.ಇದು ಜಾಗತಿಕವಾಗಿತುಂಬಾ ಚಾಲ್ತಿಯಲ್ಲಿರವು ಹೊಸ ತಂತ್ರಜ್ಞಾನವಾಗಿದೆ. ಅದರಲ್ಲೂ ವಿಶೇಷವಾಗಿ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಸಿ ರೈತರನ್ನು ಸ್ವಾವಲಂಬಿಯಾಗಿ ಮಾಡುವ ಉದ್ದೇಶದಿಂದ ಸರ್ಕಾರ “ಕುಸುಮ್_ಬಿ” (ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್) ಯೋಜನೆ ಜಾರಿಗೆ ತರಲಾಗಿದೆ.ಇದನ್ನು ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭವೃದ್ಧಿ ನಿಗಮವು ಕುಸುಮ್ ಯೋಜನೆಯ ಅನುಷ್ಟಾನದ ಜವಾಬ್ದಾರಿ ಹೊತ್ತಿದ್ದು, ವಿದ್ಯುತ್ ಪ್ರಸರಣ ಕಂಪನಿಗಳು ಬೆಂಬಲ ನೀಡಲು ಮಂದೆ ಬಂದಿವೆಯAತೆ.ಆದರೂ ರೈತರ ಬಳಿಗೆ ಈ ಯೋಜನೆಯ ಪರಿಕಲ್ಪನೆಯು ತಲುಪಬೇಕಿದೆಮಾತ್ರವಲ್ಲ ಇದು ಇನ್ನೂ ಜನಪ್ರಿಯವಾಗಬೇಕಾದ ಅಗತ್ಯವಿದೆ.

ಡಾ|| ಯು ಶ್ರೀನಿವಾಸ ಮೂರ್ತಿ
ಉಪನ್ಯಾಸಕರು,
“ವಿಚಾರ ಕುಟೀರ”
ರಾಮನಗರ 1ನೇ ಕ್ರಾಸ್
ಅವಂಬಾವಿ,ಬಳ್ಳಾರಿ_583101
ಫೋ:9731063950

Share This Article
error: Content is protected !!
";