Ad image

ಡೆಂಗ್ಯೂ ಹೆಚ್ಚಳ: 10 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು

Vijayanagara Vani
ಡೆಂಗ್ಯೂ ಹೆಚ್ಚಳ: 10 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು

ಬೆಂಗಳೂರು, 17 : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣ ಅಧಿಕಗೊಂಡಿದ್ದು, ಬರೋಬ್ಬರಿ 10449 ಡೆಂಗ್ಯೂ ಪ್ರಕರಣಗಳು ವರದಿಯಾಗಿರುವುದು ಭಾರೀ ಆತಂಕಕ್ಕೆ ಎಡೆಮಾಡಿದೆ.ಕಳೆದ 24 ಗಂಟೆಯಲ್ಲಿ 487 ಮಂದಿಯಲ್ಲಿ ಡೆಂಗ್ಯೂ ಇಲ್ಲಿಯವರೆಗೆ
ಕಾಣಿಸಿಕೊಂಡಿದೆ.
ರಾಜ್ಯದಲ್ಲಿ 10449 ಡೆಂಗ್ಯೂ ಕೇಸ್‌ಗಳು ವರದಿಯಾಗಿವೆ.ಜತೆಗೆ 358 ಜನರಲ್ಲಿ ಡೆಂಗ್ಯೂ ಸಕ್ರಿಯವಾಗಿದೆ.ಇಲ್ಲಿಯವರೆಗೆ ಡೆಂಗ್ಯೂ ಜ್ವರಕ್ಕೆ 8 ಮಂದಿ ಬಲಿಯಾಗಿದ್ದಾರೆ. ಇಲ್ಲಿಯತನಕ ಬಿಬಿಎಂಪಿ ವ್ಯಾಪ್ತಿಯಲ್ಲಿ 3770 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, 24ಗಂಟೆಯಲ್ಲಿ 283ಕಾಣಿಸಿಕೊಂಡಿದೆ.
ಪ್ರಕರಣಗಳು ದೃಢವಾಗಿದೆ.ಕಳೆದ 24 ಗಂಟೆಯಲ್ಲಿ 487 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಒಂದು ವರ್ಷದೊಳಗಿನ 3 ಮಕ್ಕಳಿಗೆ ಡೆಂಗ್ಯೂ ಇಲ್ಲಿಯವರೆಗೂ ಒಂದು ವರ್ಷದೊಳಗಿನ 179 ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಒಂದು ವರ್ಷದಿಂದ 18 ವರ್ಷದೊಳಗಿನ 189 ಮಂದಿಯಲ್ಲಿ ಡೆಂಗ್ಯೂ ಜ್ವರ ಪತ್ತೆ. ಇಲ್ಲಿಯವರೆಗೂ ಒಂದು ವರ್ಷದಿಂದ 18 ವರ್ಷದೊಳಗಿನ 3635 ಮಂದಿಯಲ್ಲಿ ಡೆಂಗ್ಯೂ ದೃಢವಾಗಿದೆ.
ಹಾಗೇ.18 ವರ್ಷ ಮೇಲ್ಪಟ್ಟ 295 ಜನರಲ್ಲಿ ಡೆಂಗ್ಯೂ ಸೋಂಕು ಪತ್ತೆ
ಇಲ್ಲಿಯವರೆಗೂ 18 ವರ್ಷ ಮೇಲ್ಪಟ್ಟ 6635 ಮಂದಿಗೆ ಡೆಂಗ್ಯೂ ದೃಢವಾಗಿದೆ. ಇನ್ನೂ, ಡೆಂಗ್ಯೂ ನಿಯಂತ್ರಣಕ್ಕೆ ಪಿಜಿ ಮಾಲೀಕರು ಪಣತೊಟ್ಟಿದ್ದಾರೆ. ಪಿಜಿ ಸುತ್ತಮುತ್ತ, ಅಡುಗೆ ಕೋಣೆ ಹಾಗೂ ರೂಮ್‌ ಸ್ವಚ್ಛತೆ ಕಾಪಾಡಲು ಪಿಜಿ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಸೂಚನೆ ನೀಡಿದ್ದಾರೆ.
ಸೊಳ್ಳೆ ನಿಯಂತ್ರಣಕ್ಕಾಗಿ ಎಲ್ಲಾ ಪಿಜಿಗಳಲ್ಲಿ ಔಷಧಿ ಸಿಂಪಡಣೆ, ಸುರಕ್ಷತೆ ಪಾಲನೆ ಮಾಡಬೇಕೆಂದು ಹೇಳಿದೆ. ಡೆಂಗ್ಯೂ ಸೋಂಕು ಏರುತ್ತಿದ್ದು ಇದೀಗ ಪಿಜಿ ಮಾಲಕರು ನಿತ್ಯ ಔಷಧಿ ಸಿಂಪಡಣೆ, ಫಾಗಿಂಗ್ ಮಾಡಿಸುತ್ತಿದ್ದಾರೆ.

Share This Article
error: Content is protected !!
";