ದಾವಣಗೆರೆ ಜು.18 (ದಾವಣಗೆರೆ ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿಸಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ, ಪಡೆಯದ ರೈತರು ನೋಂದಾಯಿಸಿಕೊಳ್ಳಬಹುದು.
ಬೆಳೆಸಾಲ ಪಡೆದ ರೈತರನ್ನು ಬೆಳೆಸಾಲ ಮಂಜೂರು ಮಾಡುವಾಗ, ಕಡ್ಡಾಯವಾಗಿ ಬೆಳೆವಿಮೆಗೆ ಒಳಪಡಿಸಲಾಗುವುದು, ಬೆಳೆ ಸಾಲ ಪಡೆಯದೆ ವಿಮೆ ಮಾಡಲು ಇಚ್ಚೆಯುಳ್ಳ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ ಪುಸ್ತಕ, ಪಾಸ್ ಪುಸ್ತಕ, ಕಂದಾಯ ರಶೀದಿ ಹಾಗೂ ಆಧಾರ ಸಂಖ್ಯೆಯನ್ನು ನೀಡಿ ಹತ್ತಿರದ ಬ್ಯಾಂಕ್, ಆರ್ಥಿಕ ಸಂಸ್ಥೆಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮಾ ಕಂತನ್ನು ಪಾವತಿಸಿ ನೋಂದಾಯಿಸಬಹುದು.
2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಬೆಳೆಗಳ ವಿವರ: ಚನ್ನಗಿರಿ ತಾಲ್ಲೂಕಿನ ಗ್ರಾಮಪಂಚಾಯಿತಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಮುಸುಕಿನ ಜೋಳ(ಮ.ಆ) ಭತ್ತ(ಮ.ಆ) ರಾಗಿ(ಮ.ಆ.) ಹೋಬಳಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಭತ್ತ(ನೀ), ರಾಗಿ(ಮ.ಆ), ಹತ್ತಿ(ಮ.ಆ), ಜೋಳ(ಮ.ಆ), ಈರುಳ್ಳಿ(ಮ.ಆ), ಎಳ್ಳು(ಮ.ಆ), ಜಗಳೂರು ತಾಲ್ಲೂಕಿನ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಮುಸುಕಿನ ಜೋಳ(ಮ.ಆ) ರಾಗಿ(ಮ.ಆ.), ಹೋಬಳಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಮುಸುಕಿನ ಜೋಳ(ನೀ), ಜೋಳ(ನೀ.), ಜೋಳ(ಮ.ಆ.), ಸೂರ್ಯಕಾಂತಿ(ಮ.ಆ), ಹತ್ತಿ(ನೀ), ಹತ್ತಿ(ಮ.ಆ), ನೆಲಗಡಲೆ(ಶೇಂಗಾ)(ನೀ.), ನೆಲಗಡಲೆ(ಶೇಂಗಾ)(ಮ.ಆ.), ರಾಗಿ(ನೀ), ರಾಗಿ(ಮ.ಆ.), ಸಜ್ಜೆ(ಮ.ಆ), ತೊಗರಿ(ಮ.ಆ), ಟೊಮ್ಯಾಟೋ, ನವಣೆ(ಮ.ಆ) ಈರುಳ್ಳಿ(ನೀ.), ಈರುಳ್ಳಿ(ಮ.ಆ.), ದಾವಣಗೆರೆ ತಾಲ್ಲೂಕಿನ ಗ್ರಾಮಪಂಚಾಯಿತಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಮುಸುಕಿನ ಜೋಳ(ಮ.ಆ) ಭತ್ತ(ಮ.ಆ) ರಾಗಿ(ಮ.ಆ.) ಜೋಳ(ಮ.ಆ), ಜೋಳ(ಮ.ಆ), ತೊಗರಿ(ಮ.ಆ), ಭತ್ತ(ನೀ), ಹೋಬಳಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಮುಸುಕಿನಜೋಳ(ನೀ), ರಾಗಿ(ನೀ), ರಾಗಿ(ಮ.ಆ), ಹತ್ತಿ(ಮ.ಆ). ಟೊಮ್ಯಾಟೊ, ನ್ಯಾಮತಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಮುಸುಕಿನ ಜೋಳ(ಮ.ಆ) ಭತ್ತ(ಮ.ಆ) ರಾಗಿ(ಮ.ಆ.), ಹೋಬಳಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಮುಸುಕಿನಜೋಳ(ನೀ), ಭತ್ತ(ನೀ), ತೊಗರಿ(ಮ.ಆ), ನೆಲಗಡಲೆ(ಶೇಂಗಾ) (ಮ.ಆ), ರಾಗಿ(ಮ.ಆ), ಸೂರ್ಯಕಾಂತಿ(ಮ.ಆ) ಟೊಮ್ಯಾಟೊ, ಈರುಳ್ಳಿ(ಮ.ಆ), ಹರಿಹರ ತಾಲ್ಲೂಕಿನ ಗ್ರಾಮಪಂಚಾಯಿತಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಭತ್ತ (ನೀ), ಮುಸುಕಿನ ಜೋಳ(ಮ.ಆ) ಹೋಬಳಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಜೋಳ(ಮ.ಆ), ಮುಸುಕಿನಜೋಳ(ನೀ), ಹತ್ತಿ(ಮ.ಆ). ಹೊನ್ನಾಳಿ ತಾಲ್ಲೂಕಿನ ಗ್ರಾಮಪಂಚಾಯಿತಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಮುಸುಕಿನ ಜೋಳ(ಮ.ಆ) ಭತ್ತ(ಮ.ಆ) ರಾಗಿ(ಮ.ಆ.), ಹೋಬಳಿ ಮಟ್ಟಕ್ಕೆ ಅಧಿಸೂಚನೆಗೊಂಡ ಬೆಳೆಗಳು ಈರುಳ್ಳಿ(ಮ.ಆ), ತೊಗರಿ(ಮ.ಆ), ನೆಲಗಡಲೆ(ಶೇಂಗಾ) (ಮ.ಆ), ಭತ್ತ(ನೀ), ಮುಸುಕಿನಜೋಳ(ನೀ), ರಾಗಿ(ಮ.ಆ), ಸೂರ್ಯಕಾಂತಿ(ಮ.ಆ)
2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆದ, ಪಡೆಯದ ರೈತರು ಬೆಳೆ ವಿಮೆಗೆ ನೋಂದಣಿ ಮಾಡಲು ಕಡೆಯ ದಿನಾಂಕ ಮುಸುಕಿನ ಜೋಳ (ನೀರಾವರಿ) (ಮಳೆ ಆಶ್ರಿತ), ಭತ್ತ (ನೀರಾವರಿ), ಜೋಳ (ಮಳೆ ಆಶ್ರಿತ), ಜೋಳ (ನೀರಾವರಿ), ರಾಗಿ (ಮಳೆ ಆಶ್ರಿತ), ರಾಗಿ (ನೀರಾವರಿ), (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಶೇಂಗಾ (ಮಳೆ ಆಶ್ರಿತ), ಶೇಂಗಾ (ನೀರಾವರಿ), ಸಜ್ಜೆ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ). ಈ ಬೆಳೆಗಳಿಗೆ ಜುಲೈ 31 ಕಡೆಯ ದಿನಾಂಕವಾಗಿರುತ್ತದೆ. ಸೂರ್ಯಕಾಂತಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ) ಆಗಸ್ಟ್ 16 ಕೊನೆಯ ದಿನವಾಗಿರುತ್ತದೆ. ರೈತರು ಅರ್ಜಿಯೊಂದಿಗೆ ಆಧಾರ್ ಸಂಖ್ಯೆ ನಮೂದಿಸಿ, ನಿಗಧಿತ ದಿನಾಂಕದೊಳಗೆ ಬೆಳೆ ವಿಮೆಗೆ ನೋದಣಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕೆ ಇಲಾಖೆ, ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.