ಸಿರುಗುಪ್ಪದಲ್ಲಿ 2024-25 ಸಾಲಿನ ಭಾರತ ಸೇವಾ ದಳದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು ನೀಡಲಾಯಿತು, ತರಬೇತಿಯನ್ನುಭಾರತ ಸೇವಾ ದಳದ ಜಿಲ್ಲಾ ಸಂಘಟನಾ ಅಧಿಕಾರಿಗಳಾದ ಶ್ರೀ ಗಣೇಶ್ ಭಾರಿಕಿರ ಅವರು ಭಾಗವಹಿಸಿದ್ದರು, ತಾಲೂಕು ದೈಹಿಕ ಪರಿವೀಕ್ಷಕರಾದ ರಮೇಶ್ ರವರು, ಪ್ರೌಢಶಾಲಾ ಆವರಣದ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಛಾಯಾದೇವಿ, ಶಾಖಾ ನಾಯಕರಾದ, ಎರೆಪ್ಪಗೌಡ ಶಿಕ್ಷಕರು ಅರಳಿಗನೂರು, ಹಾಗೂ ದಾನಪ್ಪ ದೈಹಿಕ ಶಿಕ್ಷಕರು, ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಗಣೇಶ್ ಬಾರಿಕೇರ ರವರು ಮಕ್ಕಳಲ್ಲಿ ದೇಶಪ್ರೇಮದ ಕೊರತೆಯಾಗದಂತೆ ಭಾರತ ಸೇವಾದಳ ಪ್ರತಿ ಶಾಲೆಯಲ್ಲೂ ಸಹ ಘಟಕವನ್ನು ತೆರೆದು ಮಕ್ಕಳಿಗೆ ದೇಶಪ್ರೇಮದ ಚರಿತ್ರೆಗಳನ್ನು ಹಾಡುಗಳನ್ನು, ನೃತ್ಯಗಳನ್ನು ಮಾಡಿಸುವ ಮೂಲಕ ಅವರಿಗೆ ತರಬೇತಿ ನೀಡಬೇಕು, ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜ ಕಟ್ಟುವುದನ್ನು ಮಕ್ಕಳಿಗೆ ಕಲಿಸುವುದು ಹೇಗೆ? ಮಕ್ಕಳಲ್ಲಿ ಶಿಸ್ತಿನ ಕವಾಯತವನ್ನು ಹೇಗೆ ನಡೆಸಬೇಕೆಂದು ತಿಳಿಸಿದರು. ಶಿಕ್ಷಕರಿಗೆ ಕಾರ್ಯಗಾರದಲ್ಲಿ ಹಾಡುಗಳನ್ನು ದೇಶಪ್ರೇಮದ ಕಥೆಗಳನ್ನು ಹೇಳಲಾಯಿತು, ಈ ಕಾರ್ಯಗಾರದಲ್ಲಿ ಕೆಲ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಹೇಳಿ ಪರಿಹಾರ ಪಡೆದುಕೊಂಡರು.