ದೇವದುರ್ಗ :ಪ್ರತಿವರ್ಷ ಮಳೆಗಾಲದಲ್ಲಿ ಈ ಸೇತುವೆ ಮುಳಗಡೆ ಯಾಗುತ್ತಿದ್ದು ಇದರಿಂದ ಸುಮಾರು 50ಹಳ್ಳಿಗಳ ರಸ್ತೆ ಸಂಪರ್ಕ ಕಡಿದುಕೊಳ್ಳುತ್ತಿದ್ದು
ಈ ಕುರಿತು ಜೆಡಿಸ್ ಮುಖಂಡ ಸಂಗನ ಗೌಡ ಆಕ್ರೋಶ ವ್ಯಕ್ತಪಡಿಸಿಮಾತಮಾಡಿದ ಅವರು
2019ರಲ್ಲಿ ಯಡಿಯೂರಪ್ಪ ಸಿಎಂ ಆದಾಗ ದೊಡ್ಡ ಪ್ರಮಾಣದ ಪ್ರಳಯವಾದ್ದು ನೀರಾವರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಸೇತುವೆ ವೀಕ್ಷಣೆಗೆ ಬಂದಾಗ ಕೊಳ್ಳುರು ಗ್ರಾಮಸ್ಥರ
ವಾಗ್ವಾದ ಬೆಳಕಿಗೆ ಬಂದು ಕೂಡಲೆ ಸೇತುವೆ ಇನ್ನೂ ಎತ್ತರಕ್ಕೆ ನಿರ್ಮಾಣ ಮಾಡಬೇಕೆಂದು ಸಿಎಂ ಆಗಿದ್ದ ಯಡಿಯೂರಪ್ಪನವರು ಹೇಳಿಕೆ ಕೊಡುತ್ತಾರೆ. ಆದರೆ ಯಾವುದೇ ತರದ ಕ್ರಮಗಳನ್ನು ಕೈಗೊಂಡಿಲ್ಲ ಇಲ್ಲಿಯವರೆಗು ನೂತನ ಡಿಸಿ ಅವರಿಗೆ ದೂರವಾಣಿ ಮುಕಾಂತರ ಮಾತನಾಡಿ ಇದರ ಬಗ್ಗೆ ಆಗುವಂತ ಜನರಿಗೆ ತೊಂದರೆ ರಾಯಚೂರಿಂದ ಗುಲ್ಬರ್ಗಕ್ಕೆ ಹೋಗುವ ಅನೇಕ ವಾಹನಗಳಿಗೂ ಹಾಗೂ ಜನರಿಗೂ ತುಂಬಾ ತೊಂದರೆಯಿಂದ ತಪ್ಪಿಸುವುದಕ್ಕೆ ಸರ್ಕಾರಕ್ಕೆ ಹಾಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಪತ್ರ ಬರೆಯಿರಿ ಎಂದು ದೂರವಾಣಿ ಮುಖಾಂತರ ಸಂಭಾಷಣೆ ಮಾಡಿರುತ್ತೇನೆ
ದೇವದುರ್ಗ ತಾಲೂಕಿನಲ್ಲಿರುವಂತ ದೊಡ್ಡದಾದ ಬಂಗಾರಪ್ಪನಕೆರೆಗೆ ಪರತಪೂರ್ ನಿಂದ ದೊಡ್ಡ ಪ್ರಮಾಣದ ಕೆರೆ ತುಂಬಿಸುವ ಕಾರ್ಯ ನೀರಾವರಿ ಯೋಜನೆಯನ್ನು ಅಂಗೀಕಾರ ಮಾಡಿರುತ್ತಾರೆ ಇದರಿಂದ ಬೇಸಿಗೆ ಬೆಳೆಗೆ ಸರಿಸುಮಾರು 20 ಗ್ರಾಮಗಳಿಗೆ ಭಯಾನಕ ನೀರಿನ ತೊಂದರೆ ಉಂಟಾಗಬಹುದು ಸೇತುವೆ ಮೇಲೆ ಮಾಡುವುದೊಂದು ಆಲೋಚನೆ ಮಾಡುವುದು ಬಿಟ್ಟು ನಿರಂತರವಾಗಿ ಮುಂದಿನ ರಾಜ್ಯಕ್ಕೆ ಸುಖ ಸುಮ್ಮನೆ ಹರಿದು ಹೋಗುತ್ತಿರುವ ನೀರನ್ನು ತಡೆಗಟ್ಟುವುದು ಕ್ಕೋಸ್ಕರ ಬ್ಯಾರೆಜ್ ನಿರ್ಮಿಸುವುದರಿಂದ ನೀರಿನ ಬಳಕೆ ಹಾಗೂ ಅನೇಕ ಗ್ರಾಮಗಳಿಗೆ ರೈತರಿಗೆ ಅನುಕೂಲವಾಗುತ್ತದೆ.
ಆದಷ್ಟು ಬೇಗ ಈ ಕಾರ್ಯವನ್ನು ರೂಪುರೇಷೆಗಳನ್ನು ಸರಕಾರ ಪರಿಶೀಲಿಸಿ ಅಂಗೀಕಾರ ಮಾಡಬೇಕಾಗಿ ನದಿ ಪಾತ್ರದ ಗ್ರಾಮಸ್ಥರಿಂದ ಊಹು ಕೋರಿ ಕೊಳ್ಳಲಾಗುತ್ತದೆ.
ಸಂಗನಗೌಡ ಅಣೇರ್ ಕೋಣಚಪ್ಪಳಿ ಯುವ ಮುಖಂಡರು ಜೇಡಿ ಎಸ್. ದೇವದುರ್ಗ ಪಟ್ಟಣದ ಹೂವಿನ ಹೆಡಗಿ ನದಿ ತುಂಬಿ ಈಗಾಗಲೇ ರಸ್ತೆ ಬಂದ್ ಆಗಿದ್ದು ಸಾರ್ವಜನಿಕರಿಗೆ ಗುಲ್ಬರ್ಗ ಯಾದಗಿರಿ ಪುನಾ ಹೋಗುವ ಪ್ರಯಾಣಿಕರಿಗೆ ಬಹುದೊಡ್ಡ ತೊಂದರೆಯಾಗಿದ್ದು ಇದನ್ನು ಕೂಡಲೇ ಬ್ರಿಜ್ ಕಮ್ ಬ್ಯಾರೇಜ್ ಮಾಡಿ ಮೇಲ್ದರ್ಜೆಗೆ ಏರಿಸಲು ನದಿ ತೀರದ ಅಕ್ಕಪಕ್ಕದ ಸಾರ್ವಜನಿಕರು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರತಿ ವರ್ಷವೂ ಕೃಷ್ಣ ತೀರದ ಪ್ರವಾಹದಿಂದ ನದಿ ತೀರದ ಜೋಳದ ಹಡಗಿ ದೊಂಡಂಬಳಿ ಕೋಣ ಚಪ್ಪಲಿ ಬೆಣಕಲ್ ಸುಮಾರು ಹಳ್ಳಿಗಳು ಪ್ರವಾಹದಿಂದ ಹೊಲ ಗದ್ದೆಗಳು ನಾಶವಾಗುತ್ತಿದ್ದು ಸರ್ಕಾರ ಸರಿಯಾದ ರೀತಿಯಲ್ಲಿ ಸರ್ವೇ ಮಾಡಿ ಪರಿಹಾರ ಕೊಡುವಲ್ಲಿ ವಂಚನೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು ಕೃಷ್ಣ ನದಿ ಬ್ರಿಜ್ ಕಾಂ ಬ್ಯಾರೇಜ್ ಅಥವಾ ಮೇಲ್ ದರ್ಜೆಗೆ ಏರಿಸಲು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಪತ್ರ ಬರೆಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪೊಲೀಸ್ ಬಂದೋಬಸ್ತ್ ಹಗಲು ರಾತ್ರಿ ಒಳ್ಳೆಯ ಸೇವೆ ಸಲ್ಲಿಸುತ್ತಾ ಯಾವುದೇ ಹಳ್ಳಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ನೀಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಸೇತುವೆ ಮೆಲ್ದರ್ಜಿಗೆ ಏರಿಸಿ ಶಾಸ್ವತ ಪರಿಹಾರ ಕಲ್ಪಿಸಲು ಒತ್ತಾಯಿಸಿದರು.