ಬಳ್ಳಾರಿ : ಜು 28 ಭಾರತೀಯ ಜನತಾ ಪಾರ್ಟಿ ಕೌಲ್ ಬಜಾರ್ ಮಂಡಲದ ಮಂಡಲ ಕಾರ್ಯಕಾರಣಿ ಪ್ರದಾನ ಕಾರ್ಯದರ್ಶಿಯಾಗಿ ಜಿ.ಅವಿನಾಶ್ ನಾಯ್ಡು ತಂದೆ ಜಿ ಪ್ರಮೋದ್ ಕುಮಾರ್ ನಾಯ್ಡು ಇವರನ್ನುಆಯ್ಕೆಮಾಡಲಾಗಿದೆ.
ಭಾರತೀಯ ಜನತಾ ಪಾರ್ಟಿ ಕೌಲ್ ಬಜಾರ್ ಮಂಡಲ ಗ್ರಾಮೀಣದ ಬಳ್ಳಾರಿ ಅಧ್ಯಕ್ಷರಾದ ವಿ. ನಾಗರಾಜರೆಡ್ಡಿ ಯವರು ಈ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಡಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಗ್ರಾಮಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ವಿಶೇಷ ಕಾರ್ಯಕಾರಿಣಿ ಸಭೆ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ವಿ. ನಾಗರಾಜರೆಡ್ಡಿ ಯವರು ಆದೇಶ ಪ್ರತಿಯನ್ನು ಅವಿನಾಶ್ ನಾಯ್ಡು ಅವರಿಗೆ ವಿತರಿಸಿ ಮಾತನಾಡಿ ದೇಶದಲ್ಲಿಪಕ್ಷ ಉತ್ತಮ ಆಡಳಿತ ನೀಡುವ ಮೂಲಕ ಪ್ರಜೆಗಳ ಮನ ಗೆದ್ದಿದೆ, ಕೊರೊನಾ ಸಮಯದಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಧಾರಗಳು ಜಗತ್ತಿಗೆ ಮಾದರಿಯಾಗಿವೆ.
ಇಂತಹ ಬಲಿಷ್ಠ ಹಾಗೂ ಜನಪರ ಪಕ್ಷವನ್ನು ಬಳ್ಳಾರಿ ಜಿಲ್ಲೆಯಲ್ಲಿ ಹಾಗೂ ವಿಶೇಷವಾಗಿ ಗ್ರಾಮೀಣ ಕ್ಷೇತ್ರವಾದ ಕೌಲ ಬಜಾರ್ ಮಂಡಲದಲ್ಲಿ ಮತ್ತಷ್ಟು ಸದೃಢ ಗೊಳಿಸುವಲ್ಲಿ ಅವಿನಾಶ್ ನಾಯ್ಡು ಶ್ರಮಿಸಲಿದ್ದಾರೆ ಎಂಬ ಅಚಲ ನಂಬಿಕೆ ಹೊಂದಿರುವುದಾಗಿ ಇತಿಳಿಸಿದರು.
ಕೌಲ್ ಬಜಾರ್ ಮಂಡಲದ ನೂತನ ಮಂಡಲ ಕಾರ್ಯಕಾರಣಿ ಪ್ರದಾನ ಕಾರ್ಯದರ್ಶಿಯಾಗಿ ನೇಮಗೊಂಡ ಜಿ ಅವಿನಾಶ್ ನಾಯ್ಡು ಮಾತನಾಡುತ್ತಾ ಬಿಜೆಪಿಗೆ ಸುಭದ್ರ ಬುನಾದಿ ಹಾಕಿದ ಹಿರಿಯರು ನಮಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ.
ಅವರೆಲ್ಲರೂ ಪಕ್ಷವನ್ನು ಮುನ್ನಡೆಸಲು ಹಲವಾರು ಮಾರ್ಗದರ್ಶನಗಳನ್ನು ಕೊಟ್ಟಿದ್ದಾರೆ ಅದ್ದರಿಂದ ಪಕ್ಷವನ್ನು ಇನ್ನು ಬಲಪಡಿಸಬೇಕಾಗಿದೆ, ನಮ್ಮ ಕೌಲ್ ಬಜಾರ್ ಮಂಡಲದ ವ್ಯಾಪ್ತಿಯ್ಲಂತು ಅಕ್ರಮ ಮರಳು ದಂಧೆ, ಇಸ್ಪೇಟ್ ಜೂಜಾಟ, ಮಟ್ಕ ದಂಧೆಗಳು ಸೇರಿದಂತೆ ಹೆಗ್ಗಿಲದ ನಡೆಯುತ್ತಿವೆ, ಗ್ರಾಮೀಣ ಕ್ಷೇತ್ರದ ಬಡ ಜನರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಗರಸು, ಮರಳು ಸರಿಯಾದ ರೀತಿಯಲ್ಲಿ ಸಿಗುತಿಲ್ಲ ಈ ರೀತಿ ಅನ್ಯಾಯಕ್ಕೆ ಒಳಗಾಗುತಿದ್ದಾರೆ.
ಇಂತಹ ಜನರ ಹಿಂದೇ ನಮ್ಮ ಪಕ್ಷ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಒಂದು ವರ್ಗವನ್ನು ತುಷ್ಟೀಕರಣ ಮಾಡುತ್ತಾ ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ಸನ್ನು ಸೋಲಿಸಲು ರಾಜ್ಯದಲ್ಲಿ ಈಗಾಗಲೆ ಬಿಜೆಪಿ ಅಲೆ ಸೃಷ್ಟಿಯಾಗಿದೆ. ಹೀಗಾಗಿ ನಾವೆಲ್ಲರು ಮತ್ತಷ್ಟು ಸಕ್ರೀಯರಾಗಬೇಕಿದೆ ಎಂದು ಮಾದ್ಯಮ ಪ್ರಕಟಣೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅನೀಲ್ ನಾಯ್ಡು, ಮಂಡಲ ಅಧ್ಯಕ್ಷ ನಾಗರಾಜ ರೆಡ್ಡಿ,
ಮುಖಂಡರಾದ ಓಬಳೇಶ್, ರಾಜ್ಯ ಕಾರ್ಯಕಾರಣಿ ಸದಸ್ಯ ಸಂಜಯ್ ಧಗಿ, ರಾಜ್ಯ ಅಲ್ಪಸಂಖ್ಯಾತ ಉಪಾಧ್ಯಕ್ಷ ನೂರ್ ಬಾಷ, ರಾಜ್ಯ ಎಸ್ ಟಿ ಮೊರ್ಚ ಕಾರ್ಯಕಾರಿಣಿ ಸದಸ್ಸೆ ವಿಜಯ ಲಕ್ಮ್ಮಿ, ಜಿಲ್ಲಾ ಉಪಾಧ್ಯಕ್ಷರಾದ ಡಾ. ಅರುಣ, ಪ್ರದಾನ ಕಾರ್ಯದರ್ಶಿಗಳಾದ ಸೋಮನಗೌಡ, ನಿಕಟ ಪೂರ್ವ ಅಧ್ಯಕ್ಷ ಜೆ ಶಂಕರಪ್ಪ, ಮಾಜಿ ಬುಡ ಅಧ್ಯಕ್ಷ ವಿನೋದ ಕುಮಾರ್, ಜಿಲ್ಲಾ ಎಸ್ಸಿ ಮೊರ್ಚ ಉಪಾಧ್ಯಕ್ಷ ಚೌದರಿ ಸೀನಾ, ಬಳ್ಳಾರಿ ಜಿಲ್ಲಾ ಕಾರ್ಯದರ್ಶಿಗಳಾದ ಅಲುವೇಲು, ಉಜ್ವಲ, ಜಿಲ್ಲಾ ರೈತಮೋರ್ಚ ಉಪಾಧ್ಯಕ್ಷ ಶ್ಯಾಮ್ ಸುಂದರ್, ಒಬಿಸಿ ಜಿಲ್ಲಾ ಉಪಾಧ್ಯಕ್ಷ ಹೊನ್ನುರಸ್ವಾಮಿ, ಬಿಜೆಪಿ ಮುಖಂಡರಾದ ಮಲ್ಲಿ, ಶಿವಕುಮಾರ್, ಆದಿ , ಕೋಟೆ ದುರ್ಗ,ಹಾಗು ಮಲ್ಲೇಶ್ ಮತ್ತಿತರಿದ್ದರು.