ಚಿತ್ರದುರ್ಗಜುಲೈ29:
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದ ಕೆ.ಆರ್.ಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮಾಜಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಯೋಗದೊಂದಿಗೆ ಪ್ರಕಾಶ್ ರೈ ಪೌಂಡೇಷನ್ ನಿರ್ದಿಗಂತ ಸಂಸ್ಥೆಯಿAದ “ಶಾಲಾ ರಂಗ” ಕಾರ್ಯಕ್ರಮ ನಡೆಯಿತು.
ನಿರ್ದಿಗಂತ ತಂಡದ ಕಲಾವಿದರು ಸಂವಿಧಾನ ಆಶಯ ಮತ್ತು ಸಂವಿಧಾನ ಮಹತ್ವ ಕುರಿತು ಜಾಗೃತ ಗೀತೆಗಳು, ಬುಡಕಟ್ಟು ಜಾನಪದ ಗೀತೆಗಳು ಹಾಗೂ ಪರಿಸರ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಓಝಿಲ್, ಮಗು ಮತ್ತು ಮರ, ವಾಚಾಳಿ ಆಮೆ ಇತರ ನಾಟಕಗಳನ್ನು ಪ್ರಸ್ತುತ ಪಡಿಸಿ ಇಂದಿನ ಜಗತ್ತಿಗೆ ಅಗತ್ಯವಿರುವ ಪರಿಸರ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಬಗ್ಗೆ, ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಛಲವನ್ನು ತುಂಬುವಲ್ಲಿ ಈ ನಾಟಕಗಳು ಸಹಕಾರಿಯಾದವು. ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ರಂಗ ಚಟುವಟಿಕೆಗಳ ಮೂಲಕ ಕಲಿಸಿದರೆ ಸರ್ವತೋಮುಖ ಅಭಿವೃಧ್ಧಿಕಾಣಬಹುದೆಂದು ಈ ನಾಟಕಗಳು ಕಲಿಸಿದವು.
ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಹೆಚ್. ನಾಗರಾಜ್ ಸೇರಿದಂತೆ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.