Ad image

ಜಿಲ್ಲಾ ಕಾರಾಗೃಹ ಸಿಬ್ಬಂದಿಗೆ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ

Vijayanagara Vani
ಜಿಲ್ಲಾ ಕಾರಾಗೃಹ ಸಿಬ್ಬಂದಿಗೆ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ
ಚಿತ್ರದುರ್ಗಜುಲೈ29:
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಗೂ ಜಿಲ್ಲಾ ಕಾರಾಗೃಹದ ಸಹಯೋಗದೊಂದಿಗೆ ಈಚೆಗೆ ಜಿಲ್ಲಾ ಕಾರಾಗೃಹದ ಸಿಬ್ಬಂದಿ ವರ್ಗದವರಿಗೆ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.
ಪ್ರಾದೇಶಿಕ ಸಾರಿಗೆ ಭರತ್ ಎಂ ಕಾಳಿಸಿಂಗೇ ಅವರು ರಸ್ತೆ ಸುರಕ್ಷತೆ ಮತ್ತು ಪ್ರಥಮ ಚಿಕಿತ್ಸೆಯ ಮಹತ್ವ ತಿಳಿಸಿದರು. ಕಾರಾಗೃಹದ ಅಧೀಕ್ಷಕಿ ಮಹಾದೇವಿ ಎಂ ಮರಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಇಲಾಖೆಯ ನಿರ್ದೇಶನದಂತೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ ರಾಷ್ಟçಮಟ್ಟದ ತರಬೇತುದಾರ ಡಾ.ವಿ.ಎಲ್.ಎಸ್.ಕುಮಾರ್ ಅವರು ತರಬೇತಿ ನಡೆಸಿಕೊಟ್ಟರು. ಮತ್ತು ಜೈಲಿನ ಕೈದಿಗಳ ಆರೋಗ್ಯ ಪರಿಸ್ಥಿತಿಗಳು, ತುರ್ತುಸ್ಥಿತಿ ನಿರ್ವಹಣೆಗೆ ಆಸ್ಪತ್ರೆಗೆ ಕಳುಹಿಸುವ ಮೊದಲು ನಿರ್ವಹಿಸುವಲ್ಲಿ ಪ್ರಥಮ ಚಿಕಿತ್ಸಾ ಜ್ಞಾನ ಮತ್ತು ಕೌಶಲ್ಯದ ಮಹತ್ವ ಒತ್ತಿ ಹೇಳಿದರು.
ಸಿ.ಪಿ.ಆರ್, ಗಾಯಗಳ ನಿರ್ವಹಣೆ, ಫಿಟ್ಸ್, ಹೃದಯಾಘಾತಕ್ಕೆ ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ ಮತ್ತು ಅಭ್ಯಾಸದ ಮೂಲಕ ತರಬೇತಿ ನಡೆಸಲಾಯಿತು.
ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಜಿಲ್ಲಾ ಶಾಖೆಯ ಉಪಸಭಾಪತಿ ಅರುಣ್ ಕುಮಾರ್, ಕಾರ್ಯದರ್ಶಿ ಮಜಹರ್ ಉಲ್ಲಾ ಸೇರಿದಂತೆ ಮತ್ತಿತರರು ಇದ್ದರು.

Share This Article
error: Content is protected !!
";