ಕಾರವಾರ.ಜು31 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 24 ವರ್ಷಗಳ ವಾಹನ ಚೊಕ್ಕಟಗಾರರಾಗಿ ಸುದೀರ್ಘ ಸೇವೆ ಸಲ್ಲಿಸಿ,ಸೇವಾ ನಿವೃತ್ತಿ ಹೊಂದಿದ ಶ್ಯಾಮ್ ಡಿ ತಳೇಕರ್ ಅವರಿಗೆ ಇಲಾಖೆಯಿಂದ ಆತ್ಮಿಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಬುಧವಾರ ವಾರ್ತಾ ಭವನದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಗಳು, ಪತ್ರಕರ್ತರು ಅವರನ್ನು ಆತ್ಮಿಯವಾಗಿ ಸನ್ಮಾನಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶಿವಕುಮಾರ್ ಮಾತನಾಡಿ ಇಲಾಖೆಯಲ್ಲಿ 24 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ, ಶ್ಯಾಮ್ ಅವರು ಇಲಾಖೆಗೆ ಸಲ್ಲಸಿರುವ ಸೇವೆಯನ್ನು ಸ್ಮರಿಸಿ, ನಿವೃತ್ತಿ ನಂತರವೂ ಇಲಾಖೆಯ ಜೊತೆ ಉತ್ತಮ ಒಡನಾಟವನ್ನು ಇಟ್ಟುಕೊಳ್ಳಲಿ ಎಂದರು.
ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಸಮಿತಿ ಅಧ್ಯಕ್ಷ ಟಿ.ಬಿ ಹರಿಕಾಂತ್ ಮಾತನಾಡಿ ನಿರಂತರವಾಗಿ ಎಲ್ಲರೊಂದಿಗೆ ಉತ್ತಮ ಭಾಂದವ್ಯ ಹೊಂದುವ ಮೂಲಕ ಪತ್ರಕರ್ತರೊಂದಿಗೆ ಆತ್ಮಿಯವಾಗಿದ್ದು ಇಂದು ಸೇವಾ ನಿವೃತ್ತಿಯಾಗುತ್ತಿರುವ ಅವರ ನಿವೃತ್ತಿ ಜೀವನ ಒಳ್ಳೆಯದಾಗಿರಲಿ ಎಂದರು.
ಜಿಲ್ಲಾ ಪತ್ರಿಕಾ ಭವನ ಸಮಿತಿ ಉಪಾಧ್ಯಕ್ಷ ನಾಗರಾಜ ಹರಪನಹಳ್ಳಿ ಮಾತನಾಡಿ ಶ್ಯಾಮ್ ಸುಧೀರ್ಘ ಅವಧಿಯವರೆಗೆ ವಾರ್ತಾ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಪತ್ರಕರ್ತರ ಜೊತೆಗಿನ ಒಡನಾಟ ಉತ್ತಮವಾಗಿತ್ತು. ಎಲ್ಲರೊಂದಿಗೆ ಪ್ರೀತಿಯಿಂದ ಕಾಣುತ್ತಿದ್ದು ಇಲಾಖೆಯಲ್ಲಿ ಕಪ್ಪು ಚುಕ್ಕೆ ಇಲ್ಲದ ರೀತಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಪತ್ರಕರ್ತರ ಜೊತೆ ಅವರ ಒಡನಾಟ ಹೀಗೆ ಇರಲಿ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರ.ದ.ಸ ರಾಜು ಭೋವಿ, ವಾಹನ ಚಾಲಕ ಗೋವಿಂದ ನಾಯ್ಕ, ಸಿಬ್ಬಂದಿಗಳಾದ ಗಂಗಾಧರ ಚಲವಾದಿ, ಕಮಲಾ ನಾಯ್ಕ, ರಾಘವೇಂದ್ರ, ಮನೋಹರ, ಪತ್ರಕರ್ತರಾದ ಸಂದೀಪ್ ಸಾಗರ್, ಗಣೇಶ ಹೆಗಡೆ, ದೀಪಕ್ ಗೋಕರ್ಣ, ಭರತ್ ರಾಜ್, ರವಿ ಗೌಡ, ಮಂಜು ಪಟಗಾರ್, ಸುರೇಂದ್ರ, ಜಗದೀಶ್ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.