Ad image

ಕೃಷಿ ಇಲಾಖೆ; ಹೆಸರು, ಉದ್ದು ಬೆಳೆಯಲ್ಲಿ ತುಕ್ಕು ರೋಗಬಾಧೆ ನಿರ್ವಹಣೆಗೆ ಸಲಹೆ

Vijayanagara Vani
ಕೃಷಿ ಇಲಾಖೆ; ಹೆಸರು, ಉದ್ದು ಬೆಳೆಯಲ್ಲಿ ತುಕ್ಕು ರೋಗಬಾಧೆ ನಿರ್ವಹಣೆಗೆ ಸಲಹೆ
ರಾಯಚೂರು,ಆ.02 ಇಲ್ಲಿಯ ಕೃಷಿ ಇಲಾಖೆ ವತಿಯಿಂದ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೆಸರು/ ಉದ್ದು ಬೆಳೆಯಲ್ಲಿ ತುಕ್ಕು (ತಾಮ್ರ) ರೋಗಬಾಧೆಯ ನಿರ್ವಹಣೆಗಾಗಿ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಜಯಪ್ರಕಾಶ್ ಅವರು ತಿಳಿಸಿದ್ದಾರೆ.
ಬಾಧೆಯ ಲಕ್ಷಣಗಳು: ಮೊದಲು ಎಲೆಗಳ ಕೆಳಭಾಗದಲ್ಲಿ ಕಂದು ಬಣ್ಣದ ಚುಕ್ಕೆಯ ಲಕ್ಷಣಗಳು ಕಂಡುಬoದು ನಂತರ ಎಲೆಯ ಎಲ್ಲಾ ಭಾಗಗಳಲ್ಲಿ ಆವರಿಸಿ, ತೀವ್ರ ಬಾಧೆಯ ಸಂದರ್ಭದಲ್ಲಿ ಬೆಳೆ ಸುಟ್ಟಂತಾಗುತ್ತದೆ.
ನಿರ್ವಹಣಾ ಕ್ರಮಗಳು: ಹೆಕ್ಸಾಕೊನಝೋಲ್ @1ಮಿ.ಲೀ + ಎನ್ . ಪಿ. ಕೆ. 19:19:19 @ 10ಗ್ರಾಂ ಪ್ರತಿ ಲೀ ನೀರಿಗೆ ಬೆರೆಸಿ ಸಿಂಪಡಿಸಿ. ಅಗತ್ಯವಿದ್ದಲ್ಲಿ ಇದೇ ಸಿಂಪರಣೆಯನ್ನು 15 ದಿವಸದ ನಂತರ ಮತ್ತೊಮ್ಮೆ ಕೈಗೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ಸಂಬoಧಿಸಿದ ಆಯಾ ರೈತ ಸಂಪರ್ಕ ಕೇಂದ್ರ ಅಥವಾ ಆಯಾ ಸಹಾಯಕ ಕೃಷಿ ನಿರ್ದೇಶಕ ಕಚೇರಿಯನ್ನು ಸಂಪರ್ಕಿಸುವoತೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share This Article
error: Content is protected !!
";