ಹೋಬಳಿ ಮಟ್ಟಕ್ಕೆ ಆಯ್ಕೆಯಾದ ಢವಳಗಿ ಸರಕಾರಿ ಕನ್ನಡ ಮಾದರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು.

Vijayanagara Vani
ಹೋಬಳಿ ಮಟ್ಟಕ್ಕೆ ಆಯ್ಕೆಯಾದ ಢವಳಗಿ ಸರಕಾರಿ ಕನ್ನಡ ಮಾದರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು.

ಮುದ್ದೇಬಿಹಾಳ:-ತಾಲೂಕಿನ ಢವಳಗಿ ಗ್ರಾಮದ ಬಸವ ಬಾಲ ಭಾರತಿ ಶಾಲೆಯಲ್ಲಿ ಅಗಸ್ಟ 6ರಂದು ನಡೆದ ಢವಳಗಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಢವಳಗಿ ಗ್ರಾಮದ ಸರಕಾರಿ ಕನ್ನಡ ಮಾದರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ಬಾಲಕರ ವಿಭಾಗದಲ್ಲಿ ಗುಂಪು ಆಟಗಳಾದ 4×100ರೀಲೆ ಓಟ, ಖೋಖೋ,ಕಬ್ಬಡ್ಡಿ, ವ್ಹಾಲಿಬಾಲ ಆಟದಲ್ಲಿ ಪ್ರಥಮ ಹಾಗೂ ವ್ಯಯಕ್ತಿಕ ಆಟದಲ್ಲಿ 200 ಮೀಟರ್ ಓಟದಲ್ಲಿ ಪ್ರಥಮ ಮತ್ತು ದ್ವೀತಿಯ, 100 ಓಟದಲ್ಲಿ ತೃತೀಯ,600 ಮೀಟರ್ ಓಟದಲ್ಲಿ ದ್ವೀತಿಯ ಮತ್ತು ತೃತೀಯ, ಹಾಗೂ ಗುಂಡು ಎಸೆತದಲ್ಲಿ ಪ್ರಥಮ ಮತ್ತು ತೃತೀಯ, ಚಕ್ರ ಎಸೆತದಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನವನ್ನು ಬಾಲಕರ ವಿಭಾಗದಲ್ಲಿ ಪಡೆದರೆ,ಬಾಲಕಿಯರ ವಿಭಾಗದಲ್ಲಿ ಕೂಡಾ 4×100 ರೀಲೆ,ಖೋಖೋ, ಕಬ್ಬಡ್ಡಿ ಆಟದಲ್ಲಿ ಪ್ರಥಮ ಸ್ಥಾನ ಪಡೆದರೆ ವ್ಯಯಕ್ತಿಕ ಆಟದಲ್ಲೂ 100 ಮೀಟರ್ ಓಟದಲ್ಲಿ ಪ್ರಥಮ ಮತ್ತು ದ್ವೀತಿಯ, 200 ಮೀಟರ್ ಓಟದಲ್ಲಿ ದ್ವೀತಿಯ, 400 ಮೀಟರ್ ಓಟದಲ್ಲಿ ಪ್ರಥಮ, 600 ಮೀಟರ್ ಓಟದಲ್ಲಿ ಪ್ರಥಮ ಮತ್ತು ದ್ವೀತಿಯ ಹಾಗೂ ಗುಂಡು ಎಸೆತದಲ್ಲಿ ತೃತೀಯ ಹಾಗೂ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ನಡೆಯುವ ಹೋಬಳಿ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ. ಶಾಲೆಗೆ ಕೀರ್ತಿ ತಂದ ಮಕ್ಕಳ ಜೊತೆಗೆ ಇವರ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕಿಯಾದ ಶ್ರೀಮತಿ ಪಾರ್ವತಿ ಪಿ ಇವರನ್ನು ಮುಖ್ಯ ಗುರುಗಳಾದ ಬಿ ಎಸ್ ಶೇಖಣ್ಣವರ ಅವರು ಸೇರಿದಂತೆ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದಿಸಿದರು.

- Advertisement -
Ad imageAd image
Share This Article
error: Content is protected !!
";