Ad image

ಜಿಲ್ಲೆಯ ಪತ್ತಿನ ಮತ್ತು ನೌಕರರ ಪತ್ತಿನ ಸಹಕಾರ ಸಂಘಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ನಮ್ಮ ಜವಾಬ್ದಾರಿ -ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹೆಚ್.ಎನ್.ತಿಪ್ಪೇಸ್ವಾಮಿ

Vijayanagara Vani
ಜಿಲ್ಲೆಯ ಪತ್ತಿನ ಮತ್ತು ನೌಕರರ ಪತ್ತಿನ ಸಹಕಾರ ಸಂಘಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ನಮ್ಮ ಜವಾಬ್ದಾರಿ -ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹೆಚ್.ಎನ್.ತಿಪ್ಪೇಸ್ವಾಮಿ
ಚಿತ್ರದುರ್ಗಆಗಸ್ಟ್.09:
ಗ್ರಾಹಕರಿಗೆ ನೀಡುವ ಉತ್ತಮ ನೀಡುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹೆಚ್.ಎನ್.ತಿಪ್ಪೇಸ್ವಾಮಿ ಹೇಳಿದರು.
ನಗರದ ಕೆಳಗೋಟೆಯ ಸಹಕಾರಭವನದ ಸಭಾಂಗಣದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲೆಯಲ್ಲಿನ ಪತ್ತಿನ ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘದ ಕಾರ್ಯದರ್ಶಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಾದಲ್ಲಿ ಇಂತಹ ತರಬೇತಿಯಿಂದ ಮಾಹಿತಿ ಪಡೆದು ಇದರ ಸದುಪಯೋಗ ಪಡೆದುಕೊಳ್ಳಲು ತರಬೇತಿಯಲ್ಲಿ ಭಾಗವಹಿಸಿದ ಸಂಘಗಳ ವ್ಯವಸ್ಥಾಪಕರುಗಳಿಗೆ ತಿಳಿಸಿದರು.
ಸಹಕಾರ ಸಂಘಗಳ ಉಪನಿಬಂಧಕ ಆರ್.ಎಸ್.ದಿಲೀಪ್ ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಬಹಳ ಮಹತ್ವವಿದೆ. ಚುನಾವಣೆ ಸುಗುಮವಾಗಿ ನಡೆಯಲು ಸಹಕಾರ ಸಂಘಗಳ ಕಾರ್ಯನಿರ್ವಾಹಕರ ಜವಾಬ್ದಾರಿ ಬಹಳ ಮುಖ್ಯ. ಕಾನೂನು ಏನು ಹೇಳುತ್ತದೆ ಅದನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು. ಚುನಾವಣೆ ಕುರಿತು ನೀಡುವ ಈ ದಿನದ ಉಪನ್ಯಾಸವನ್ನು ಸಂಘದ ಪ್ರತಿನಿಧಿಗಳು ಸದುಪಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಮಾತನಾಡಿ, ಬರುವ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಎಲ್ಲಾ ಪತ್ತಿನ ಸಹಕಾರ ಸಂಘಗಳ ಚುನಾವಣೆ ಬರುವುದರಿಂದ ಪ್ರಚಲಿತ ಕಾನೂನು ಯಾವ ರೀತಿ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಪತ್ತಿನ ಸಹಕಾರ ಸಂಘಗಳಲ್ಲಿ ಗ್ರಾಹಕರು ಮಾಡುವ ಡಿಪಾಜಿಟ್ ಹಣವನ್ನು ಯಾವ ರೀತಿ ಸಂಘದಲ್ಲಿ ವಿನಿಯೋಗಿಸಬೇಕು. ಸಾಲ ಕೊಡುವಾಗ ಓ.ಡಿ. ಸಾಲ ಯಾವ ರೀತಿಕೊಡಬೇಕು, ಮಾರ್ಟ್ಗೇಜ್ ಸಾಲ ಯಾವ ರೀತಿಕೊಡಬೇಕು ಎಂಬ ಬಗ್ಗೆ ಈ ತರಬೇತಿಯಲ್ಲಿ ಹೇಳಲು ಬಂದಿರುವ ಉಪನ್ಯಾಸದಲ್ಲಿ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದರು.
ಸಂಘದ ಚುನಾವಣೆಗಳಲ್ಲಿ ಯಾರ ಒತ್ತಡಕ್ಕೆ ಯಾವ ರಾಜಕೀಯ ಶಿಫಾರಸ್ಸುಗಳಿಗೆ ಬಲಿಯಾಗದೆ ಕೆಲಸ ನಿರ್ವಹಿಸಬೇಕು. ಸರ್ಕಾರದಿಂದ ಚುನಾವಣೆ ಆಯೋಗ ಆದಾಗಿನಿಂದ ಸರ್ಕಾರ ಎಲ್ಲಾ ವರ್ಗದ ಜನರಿಗೆ ಮೀಸಲಾತಿ ಮಾಡಿದ್ದು, ಎಲ್ಲಾ ವರ್ಗದ ಜನರಿಗೆ ನ್ಯಾಯದೊರಕಲಿ ಎಂಬ ಚಿಂತನೆಯನ್ನು ಸರ್ಕಾರ ರೂಪಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಬಹಳ ಮಹತ್ವ ನೀಡಬೇಕು ಎಂದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕ (ನಿವೃತ್ತ) ಚಿಕ್ಕಮಗಳೂರಿನ ಎಸ್.ವಿ.ಬಸವರಾಜ್ ಅವರು, ಸಹಕಾರ ಸಂಘಗಳ ಇತ್ತೀಚಿನ ತಿದ್ದುಪಡಿಯಾದ ಕಾಯ್ದೆ, ಕಾನೂನು ಮುಖ್ಯಾಂಶಗಳು ಹಾಗೂ ಸಹಕಾರ ಸಂಘಗಳ ಚುನಾವಣೆ ಜರುಗಿಸುವ ವಿಧಿ ವಿಧಾನಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾಗರಾಜ್ ಪಾಟೀಲ್ ಇದ್ದರು.

Share This Article
error: Content is protected !!
";