ಪಟ್ಟಣದ ನಗರೇಶ್ವರ ದೇವಸ್ಥಾನದ ಹುಂಡಿ ಬೀಗ ಮುರಿದು, ಕಳ್ಳತನ ಮಾಡಲಾಗಿದೆ

Vijayanagara Vani
ಪಟ್ಟಣದ ನಗರೇಶ್ವರ ದೇವಸ್ಥಾನದ ಹುಂಡಿ ಬೀಗ ಮುರಿದು, ಕಳ್ಳತನ ಮಾಡಲಾಗಿದೆ

ಕಳೆದ ರಾತ್ರಿ ಕಳ್ಳತನವಾಗಿದೆ. ದೇಗುಲದ ಬಾಗಿಲ ಬೀಗ ಮುರಿದು ಕಳ್ಳರು ದೇವಸ್ಥಾನದ ಒಳ ಪ್ರವೇಶ ಮಾಡಿದ್ದಾರೆ. ದೇವರ ಮುಂದಿದ್ದ ಹುಂಡಿಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ .ದೇವಸ್ಥಾನದ ಹುಂಡಿಯಲ್ಲಿ  ಸುಮಾರು 10 ಸಾವಿರ ಹಣ ಸಂಗ್ರಹವಾಗಿತ್ತು.ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಮಾಡಲು ಅರ್ಚಕರು ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೆ ದೇವಸ್ಥಾನದ ಮಂಡಳಿಯವರಿಗೆ ವಿಚಾರ ತಿಳಿಸಿದ್ದಾರೆ.‘ಈ ದೇವಸ್ಥಾನದಲ್ಲಿ ಕಳ್ಳತನವಾಗುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಮೂರು ಬಾರಿ ಕಳ್ಳತನವಾಗಿದೆ’ ಎಂದು ಸ್ಥಳೀಯರು ಹೇಳಿದ್ದಾರೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು

- Advertisement -
Ad imageAd image
Share This Article
error: Content is protected !!
";