ಸಿರುಗುಪ್ಪ : ಕಳೆದ ಎರಡು ಮೂರು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನಗರದ ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳಲ್ಲಿ ತಗ್ಗು ದಿನ್ನಿಗಳು ನಿರ್ಮಾಣವಾಗಿ ಜಲಾವೃತಗೊಂಡಿವೆ, ಇವುಗಳನ್ನು ಮುಚ್ಚುವಂತೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಯುವಕರು ಮಂಗಳವಾರ ಒತ್ತಾಯಿಸಿದರು.
ನಗರದ ಟಿಪ್ಪುಸುಲ್ತಾನ, ಅಂಬೇಡ್ಕರ್ ವೃತ್ತ, ನಗರಸಭೆ, ಪೊಲೀಸ್ ಠಾಣೆಯ ಮುಂದೆ, ಗ್ರಾಮೀಣಾ ಬ್ಯಾಂಕ್ ಹತ್ತಿರ, ಮಹರ್ಷಿ ಕಾಲೇಜ್ ಮುಂಭಾಗ, ಶಾಲಿನಿ ರೋಡ್ ಲೈನ್ ಮುಂಭಾಗದಲ್ಲಿ ಬಿದ್ದಿರುವ ತಗ್ಗು ಪ್ರದೇಶಗಳು ನಿತ್ಯ ಸಂಚಾಕ್ಕೆ ಅಡಚಣೆ ಉಂಟು ಮಾಡುತ್ತಿವೆ, ವಾಹರರು ಹಿಡಿ ಶಾಪ ಹಾಕುತ್ತ ಸಂಚಾರಿಸುತ್ತಾರೆ.
ನಗರದಲ್ಲಿ ಸ್ವಲ್ಪ ಮಳೆಯಾದರು ಸಾಕು ಮಳೆ ನೀರು ರಸ್ತೆಯ ಮೇಲೆ ನಿಲ್ಲುತ್ತವೆ ನಾವು ಮತ್ತು ನಮ್ಮ ಗೆಳೆಯರು ಶಾಲಾ ಕಾಲೇಜಿಗೆ ಈ ರಸ್ತೆಯ ಪಕ್ಕದಿಂದ ಹೋಗುವಾಗ ವಾಹನಗಳು ವೇಗವಾಗಿ ಬಂದು ತಗ್ಗು ಪ್ರದೇಶದ ಮಾಲಿನ್ಯ ನೀರು ಚಿಮ್ಮಿ ಸಮವಸ್ತ್ರ ಹಾಳಾಗುತ್ತವೆ, ಬಟ್ಟೆ ಬದಲಿಕೊಳ್ಳಲು ಮನೆಗೆ ಹೋಗಿ ಬರುವಷ್ಟರಲ್ಲಿ ತರಗತಿಗಳು ಪ್ರಾರಂಭವಾಗುತ್ತವೆ, ತಾಲ್ಲೂಕು ಅಧಿಕಾರಿಗಳು ರಸ್ತೆಯ ಗುಂಡಿಗಳನ್ನು ಮುಚ್ಚುವಂತೆ ವಿದ್ಯಾರ್ಥಿ ಜ್ಞಾನಮೂರ್ತಿ ಅಕ್ರೋಶ ವ್ಯಕ್ತ ಪಡಿಸಿದರು.
ಪರಿಸರ ಸಂರಕ್ಷಣ ಹಾಗೂ ಸಮಾಜ ಸೇವಕ ಎಂ.ಸಿ.ಮಾರೇಶ ಮಾತನಾಡಿ, ಮುಖ್ಯ ರಸ್ತೆಯಲ್ಲಿ ನಿತ್ಯ ಸಾವಿರಾರು ಪಾದಚಾರಿಗಳು ಒಡಾಡುವಾಗ ರಸ್ತೆ ಗುಂಡಿಯಲ್ಲಿನ ನೀರು ಚಿಮ್ಮಿ ಮಾಲಿನ್ಯ ಮಾಡಿಕೊಂಡು ನರಕ ಯಾತನೆ ಅನುಭವಿಸುತ್ತ, ಶಾಲಾ, ಕಾಲೇಜ್, ಬ್ಯಾಂಕ್ ಹಾಗೂ ಇತರೆ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ, ಚುನಾಯಿತ ಪ್ರತಿನಿಧಿಗಳು, ನಗರಸಭೆ ಮತ್ತು ತಾಲ್ಲೂಕು ಆಡಳಿತ ರಸ್ತೆ ಆಗಲಿಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಂಡುವಂತೆ ಒತ್ತಾಯಿಸಿದರು.
ಸಿರುಗುಪ್ಪ ನಗರದ ಶಾಂತಿನಿಕೇತನ ವಿದ್ಯಾಮಂದಿರಕ್ಕೆ ಹೋಗುವ ರಸ್ತೆಯಲ್ಲಿ ಪರಿಸರ ಸಂರಕ್ಷಣ ಹಾಗೂ ಸಮಾಜ ಸೇವಕ ಎಂ.ಸಿ.ಮಾರೇಶ, ಯುವಕರಾದ ನವೀನ್ ಕುಮಾರ, ಯಲ್ಲಪ್ಪ ಹಾಗೂ ಶಾಂತಿನಿಕೇತನ ವಿದ್ಯಾರ್ಥಿಗಳು ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿದರು.