Ad image

ಗುಡ್ಡ ಕುಸಿತ ಲಕ್ಷಣಗಳು ಕಂಡಲ್ಲಿ ತಕ್ಷಣ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ

Vijayanagara Vani
ಗುಡ್ಡ ಕುಸಿತ ಲಕ್ಷಣಗಳು ಕಂಡಲ್ಲಿ ತಕ್ಷಣ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ

ಕಾರವಾರ. .22ಮಳೆಗಾಲ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗಿದ್ದು, ಗುಡ್ಡ ಕುಸಿತ ಲಕ್ಷಣಗಳ ಪರಿಶೀಲನೆ ಕುರಿತಂತೆ ತರಬೇತಿ ಪಡೆದ ಸ್ಪಾರ್ಸ್ಗಳು, ತಮ್ಮ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ ಲಕ್ಷಣಗಳು ಕಂಡು ಬಂದಲ್ಲಿ, ತಕ್ಷಣ ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ ತಿಳಿಸಿದರು.

- Advertisement -
Ad image

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯಲ್ಲಿ ಗುಡ್ಡ ಕುಸಿತದಿಂದಾಗುವ ಅನಾಹುತಗಳ ತಡೆ ಕುರಿತ ತರಬೇತಿಗೆ ನಿಯೋಜಿಸಿರುವ ಸ್ಪಾರ್ಸ್ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಶಿರೂರುನಲ್ಲಿ ನಡೆದ ಗುಡ್ಡ ಕುಸಿತ ಸಂದರ್ಭದಲ್ಲಿ ಆದ ಅನಾಹುತವನ್ನು ಪ್ರತಿಯೊಬ್ಬರೂ ಗಮನಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇಂತಹ ಅನಾಹುತಗಳು ಸಂಭವಿಸುವುದನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದ್ದು, ನಿಟ್ಟಿನಲ್ಲಿ ಸ್ಪಾರ್ಸ್ಗಳ ಕಾರ್ಯ ಅತ್ಯಂತ ಪ್ರಮುಖವಾಗಿದ್ದು, ಸೂಕ್ತ ಸಮಯದಲ್ಲಿ ಮುನ್ನೆಚ್ಚರಿಕೆಯ ಮಾಹಿತಿ ದೊರೆತಲ್ಲಿ, ಮಾನವ ಜೀವ ಹಾನಿಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದರು.

ಭಾರೀ ಮಳೆ, ಪ್ರವಾಹ, ಸೈಕ್ಲೂನ್ ಮುಂತಾದ ವಿಕೋಪಗಳ ಮಾಹಿತಿಗಳು ಸಾಕಷ್ಟು ಮುಂಚಿತವಾಗಿ ದೊರೆಯುತ್ತಿರುವ ಕಾರಣ ಇವುಗಳಿಂದ ಸಂಭವಿಸುವ ಹಾನಿಯನ್ನು ತಪ್ಪಿಸಲು ಸಾಧ್ಯವಿದೆ. ಆದರೆ ಗುಡ್ಡ ಕುಸಿತಗಳು ನಿಧಾನಗತಿಯಲ್ಲಿ ಆರಂಭಗೊಳ್ಳುವುದರಿ0ದ ಇವುಗಳ ಬಗ್ಗೆ ನಿಖರ ಮಾಹಿತಿಯನ್ನು ಸಾಕಷ್ಟು ಮುಂಚಿತವಾಗಿ ಪಡೆಯುವ ನಿಟ್ಟಿನಲ್ಲಿ, ಜಿಲ್ಲೆಯಲ್ಲಿ ಈಗಾಗಲೇ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯಿ0 ಗುರುತಿಸಲಾಗಿರುವ 439 ಗುಡ್ಡ ಕುಸಿತ ಪ್ರದೇಶದ ವ್ಯಾಪ್ತಿಯಲ್ಲಿ ಅರಣ್ಯ, ಕಂದಾಯ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಗುಡ್ಡ ಕುಸಿತ ಲಕ್ಷಣಗಳ ಬಗ್ಗೆ, ಭೂ ವಿಜ್ಞಾನಿಗಳ ಮೂಲಕ ತರಬೇತಿ ನೀಡಲಾಗುತ್ತಿದ್ದು, ಇದರಿಂದ ಮುಂದೆ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಗರಿಷ್ಠ ಮುನ್ನೆಚ್ಚರಿಕೆ ವಹಿಸಲು ಸಹಾಯವಾಗಲಿದೆ ಎಂದರು.

ಗುಡ್ಡ ಕುಸಿತ ಲಕ್ಷಣಗಳು ಕಂಡು ಬಂದಲ್ಲಿ ಸ್ಪಾರ್ಸ್ಳು ಕೂಡಲೇ ಮಾಹಿತಿ ನೀಡಿದಲ್ಲಿ, ಸದ್ರಿ ಪ್ರದೇಶದಲ್ಲಿ ವಾಹನ ಸಂಚಾರವನ್ನು ಇತರೇ ಬದಲೀ ಮಾರ್ಗಗಳ ಮೂಲಕ ಚಲಿಸಲು ಮತ್ತು ಪ್ರದೇಶದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಾಧ್ಯವಾಗಲಿದ್ದು ಇದರಿಂದಾಗಿ ಜೀವಹಾನಿ ತಪ್ಪಿಸಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಗುಡ್ಡ ಕುಸಿತದಿಂದ ಯಾವುದೇ ಅನಾಹುತಗಳಾಗದಂತೆ ಎಚ್ಚರವಹಿಸುವ ಮಹತ್ವದ ಜವಾಬ್ದಾರಿ ಸ್ಪಾರ್ಸ್ಗಳ ಮೇಲಿದೆ ಎಂದರು.

ಹೈದರಾಬಾದ್ ಜಿ.ಎಸ್.ಐ. ನ ಡೆಪ್ಯುಟಿ ಡೃರೆಕ್ಟರ್ ಜನರಲ್ ಮತ್ತು ಪ್ರಾದೇಶಿಕ ಮಿಷನ್ ಮುಖ್ಯಸ್ಥ ಕೆ.ವಿ. ಮಾರುತಿ ಮಾತನಾಡಿ, ಭೂ ಕುಸಿತ ಸ್ಥಳಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಮುನ್ನೆಚ್ಚರಿಕೆ ನೀಡುವ ಕಾರ್ಯವನ್ನು ನೋಡಲ್ ಏಜೆನ್ಸಿಯಾಗಿ ಜಿ.ಐ.ಎಸ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ದೇಶದಾದ್ಯಂತ ಭೂ ಕುಸಿತ ಪ್ರದೇಶಗಳನ್ನು ವೀಕ್ಷಿಸಿ ಅವುಗಳನ್ನು ತೀವ್ರ, ಮಧ್ಯಮ ಮತ್ತು ಸಾಮಾನ್ಯ ಭೂ ಕುಸಿತ ಪ್ರದೇಶಗಳ ಎಂಬ ಬಗ್ಗೆ ಸಂಬoಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಮತ್ತು ನಕ್ಷೆಯನ್ನು ನೀಡಲಾಗಿದೆ. ಅಭಿವೃದ್ಧಿಕಾಮಗಾರಿಗಳನ್ನು ಕೈಗೊಳ್ಳುವಾಗ ವೈಜ್ಞಾನಿಕ ರೀತಿಯಲ್ಲಿ ಯೋಜನೆ ರೂಪಿಸಬೇಕು. ಅಭಿವೃದ್ಧಿ ಯೋಜನೆಗಳಿಗಾಗಿ ಗುಡ್ಡಗಳನ್ನು ಕಡಿಯುವುದು, ಸಾಂಪ್ರದಾಯಿಕ ನೀರಿನ ಹರಿವಿಗೆ ತಡೆ ಒಡ್ಡಿ ಕಟ್ಟಡಗಳ ನಿರ್ಮಾಣ, ಮರಗಳ ನಾಶ, ಅಸಮರ್ಪಕ ಡ್ರೆöನೆಜ್ ಯೋಜನೆಗಳು, ಮುಂತಾದ ಕಾರಣಗಳಿಂದ ಭೂ ಕುಸಿತ ಸಂಭವಿಸಲಿದೆ. ಭೂ ಕುಸಿತಗಳು ತಕ್ಷಣದಲ್ಲಿ ಸಂಭವಿಸುವುದಿಲ್ಲ, ಕುಸಿತ ಸಂಭವಿಸುವ ಪೂರ್ವದಲ್ಲಿ ಭಾಗದಲ್ಲಿ ವಿವಿಧ ಬದಲಾವಣೆಗಳು ನಡೆಯುತ್ತವೆ. ಬದಲಾವಣೆಗಳನ್ನು ಗಮನಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರಿಂದ ಅನಾಹುತಗಳಾಗುವುದನ್ನು ತಪ್ಪಿಸಬಹುದು. ಕಾರ್ಯದಲ್ಲಿ ಸ್ಪಾರ್ಳ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದೆ ಎಂದರು.

ಜಿ.ಎಸ್.. ನಿರ್ದೇಶಕ ಡಾ.ಆರ್. ಸಜೀವ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತದಿಂದಾಗಬಹುದಾದ ಅನಾಹುತಗಳು, ಅವುಗಳನ್ನು ಎದುರಿಸಬೇಕಾದ ಸವಾಲುಗಳು ಮತ್ತು ಇವುಗಳನ್ನು ತಪ್ಪಿಸಲು ಸಮುದಾಯದ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಹಾಗೂ ತರಬೇತಿಗೆ ನಿಯೋಜನೆಗೊಂಡಿದ್ದ ಅರಣ್ಯ, ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This Article
error: Content is protected !!
";