ಗುತ್ತಿನಾಡು ವಿಶ್ವಮಾನವ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

Vijayanagara Vani
ಗುತ್ತಿನಾಡು ವಿಶ್ವಮಾನವ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ
ಚಿತ್ರದುರ್ಗಆ.23:
ಚಿತ್ರದುರ್ಗ ತಾಲ್ಲೂಕು ಸಿಬಾರ ಹತ್ತಿರದ ಗುತ್ತಿನಾಡಿನ ವಿಶ್ವಮಾನವ ವಸತಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಹಯೋಗದಲ್ಲಿ ಬಾಲ್ಯವಿವಾಹ ಅರಿವು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಲಿಂಗ ವಿಶೇಷಜ್ಞೆ ಗೀತಾ.ಡಿ ಬಾಲ್ಯವಿವಾಹ ನಿಷೇಧ, ಬಾಲ ಕಾರ್ಮಿಕ ನಿಷೇಧ, ಪೋಕ್ಸೋ ಹಾಗೂ ಬಾಲ ತಾಯಂದಿರು, ಮಕ್ಕಳ ಹಕ್ಕುಗಳು, ಮಕ್ಕಳ ಅಪಹರಣ, ಸುರಕ್ಷಿತ ಸ್ಪರ್ಶ ಹಾಗೂ ಅಸುರಕ್ಷಿತ ಸ್ಪರ್ಶಗಳ ಕುರಿತು ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಿದರು.
ಭರಮಸಾಗರ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಪುಷ್ಪಾ ಮಾತನಾಡಿ, ಸ್ಥಳೀಯ ಬಾಲ್ಯವಿವಾಹ ಪ್ರಕರಣಗಳನ್ನು ಉಲ್ಲೇಖಿಸಿ, ಬಾಲ್ಯ ವಿವಾಹ ಎಂಬುದೊAದು ಸಾಮಾಜಿಕ ಪಿಡುಗಾಗಿದೆ, ಅದರಿಂದ ಆಗುವ ಅನಾನುಕೂಲತೆಗಳ ಬಗ್ಗೆ ಹಾಗೂ ಬಾಲ್ಯವಿವಾಹ ತಡೆಗಟ್ಟುವಲ್ಲಿ ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಗಳನ್ನು ಕುರಿತು ಮನದಟ್ಟು ಮಾಡಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ಪ್ರಚುರ ಪಡಿಸಲಾಯಿತು. ವಿಶ್ವ ಮಾನವ ಶಿಕ್ಷಣ ಸಂಸ್ಥೆ ನೀಲಕಂಠ ದೇವರು, ಸಂಸ್ಥೆಯ ರೂವಾರಿ ಜಲೀಲ್ ಸಾಬ್, ಪಿಯು ಕಾಲೇಜು ಪ್ರಾಂಶುಪಾಲರಾದ ಸುಧಾ ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಜಿಲ್ಲಾ ಸಂಯೋಜಕ ಚೇತನ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Share This Article
error: Content is protected !!
";