ಸಿರುಗುಪ್ಪ : ಆ 27 ಪಟ್ಟಣದ ತೆಕ್ಕಲಕೋಟೆಯಲ್ಲಿ 15 ದಿನಗಳಾದರೂ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಖಾಲಿ ಬಿಂದಿಗೆ ಗಳೊಂದಿಗೆ ತೆಕ್ಕಲಕೋಟೆ , ಪಟ್ಟಣ ಪಂಚಾಯತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು, ಪಟ್ಟಣಪಂಚಾಯತಿ ಸದಸ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರ ಬೇಜವಾಬ್ದಾರಿಯಿಂದಲೇ ನೀರಿನ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದರು.
77777
5 ನೇ ವಾರ್ಡ್ ನ ಕೆಲ ಮನೆಗಳು ಸ್ವಲ್ಪ ಎತ್ತರ ಪ್ರದೇಶ ದಲ್ಲಿರುವುದರಿಂದ ನೀರು ಸರಬರಾಜು ಸರಿಯಾಗಿ ಆಗುತ್ತಿಲ್ಲ,ನೀರುಬಿಡುವ ಸಮಯದಲ್ಲಿವಿದ್ಯುತ್ ಕಡಿತಗೊಳಿಸಲಾಗುತ್ತಿದೆ, ಹಾಗೂ ವಾರ್ಡ್ ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಇಲ್ಲದಂತಾಗಿದೆ. ಕಾರಣ ಘಟಕವು ಬೇರೊಬ್ಬರ ಜಾಗದಲ್ಲಿ ನಿರ್ಮಾಣವಾಗಿದ್ದು ಕಾಂಪೌಂಡ್ ಕಟ್ಟಲಾಗಿದೆ ಇದರಿಂದಾಗಿ ನೀರಿನ ತೊಂದರೆ ಮತ್ತಷ್ಟು ಹೆಚ್ಚಾಗಿದೆ, ವಾಟರ್‌ಮ್ಯಾನ್‌ಗೆ ದೂರವಾಣಿ ಕರೆ ಮಾಡಿದರೆ ಫೋನನ್ನು ಸ್ವೀಕರಿಸುವುದಿಲ್ಲ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ, ಮುಖ್ಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಯಿತು.
ಸ್ಥಳೀಯರಾದ ಹೆಚ್ ಜಾಲಲಿ, ಸಾಯಿಬಣ್ಣ ಕೆ, ರಬ್ಬಾನಿ ಮಾತನಾಡಿ, ನೀರಿನ ಸಮಸ್ಯೆ ತುಂಬಾ ಕಾಡುತ್ತಲಿದೆ. ಹೆಚ್ಚು ದಿನಗಳ ಕಾಲ ನೀರನ್ನು ಶೇಕರಿಸಿಡುವುದರಿಂದ ಕೀಟಗಳು ಉದ್ಭವವಾಗುತ್ತಿದ್ದು ಅಲ್ಲದೇ ಈಗ ಮಳೆಗಾಲ ಆರಂಭವಾಗಿದೆ. ಚರಂಡಿಗಳು ಸ್ವಚ್ಛತೆ ಇಲ್ಲದೆ ದುರ್ವಾಸನೆ, ಕಲುಷಿತ ನೀರು ಹರಿದು ಬರುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ನಮ್ಮನ್ನು ಕಾಡುತ್ತಲಿದೆ. ಅಲ್ಲದೆ, ಚರಂಡಿ ವ್ಯವಸ್ಥೆ ಇರುವ ಕಡೆ ಹೂಳು ತುಂಬಿಕೊಂಡಿವೆ ಎಂದು ಆರೋಪಿಸಿದರು. ಪ. ಪಂ ಅಧ್ಯಕ್ಷರಾದ ಎಸ್. ಆನಂದ ರವರು ಮಾತನಾಡಿ ಸಮಸ್ಯೆ ಯನ್ನು ಆದಷ್ಟು ಬೇಗ ಬಗೆಹರಿಸುದಾಗಿ ಅಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣದ ನಿವಾಸಿಗಳಿಗಳಾದ ರಬ್ಬಾನಿ,ಕಲಂದರ್, ಸುಭಾನ್, ಮೈಭು, ಹಸ್ಲಾಮ್, ಹುಸೇನಿ,ಸಾಯಿಬಣ್ಣ, ಭಾಷಾ, ರಫೀಕ್, ರಂಜಾಸಾಬ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.