ಮಾನ್ವಿ : ಸೆ 5 ತಾಲೂಕಿನ ಮಾನ್ವಿ ಪಟ್ಟಣದ ಕಪಗಲ್ ದೊಡ್ಡ ಹಳ್ಳದ ಹತ್ತಿರ ಲಾಯೋಲ್ ಶಿಕ್ಷಣ ಸಂಸ್ಥೆಯ ಶಾಲಾ ವಾಹನ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪರಸ್ಪರ ಮುಖ ಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಲಾಯೋಲ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ವಾಹನದಲ್ಲಿದ್ದ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರವಾಗಿ ಗಾಯಗಳಾಗಿದ್ದು ಅದರಲ್ಲಿ 7ವಿದ್ಯಾರ್ಥಿಗಳಿಗೆ ಕಾಲುಗಳು ತುಡಾಗಿರುವುದರಿಂದ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳನ್ನುರಾಯಚೂರು ರಿಮ್ಸ್ ಗೆ ದಾಕಲಿಸಿದ್ದು ಅದರಲ್ಲಿ 7ನೇ ತರಗತಿ ಅಭ್ಯಾಸ ಮಾಡುತ್ತಿರುವ ಕುರ್ಡಿ ಗ್ರಾಮದ ವಿದ್ಯಾರ್ಥಿಗಳಾದ ಶ್ರೀಕಾಂತ್ ಹಾಗೂ ಸಮರ್ಥ ಎನ್ನುವ ವಿದ್ಯರ್ಥಿ ಗಳು ಚಿಕಿತ್ಸೆ ಫಲಿಸದೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಶಾಲಾ ವಾಹನದ ಚಾಲಕನಗಿದ್ದ ಬಲವಂತರಾಯ ನಿಗೆ ಗಂಭೀರವಾದ ಗಾಯಗಳಾಗಿದ್ದು ರಿಮ್ಸ್ ಗೆ ದಾಖಲಿಸಲಾಗಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಲ್ಲಿ 23 ಕ್ಕೂ ಹೆಚ್ಚು ಪ್ರಯಾಣಿಕರಿಗೆ
ಸಣ್ಣ ಪುಟ್ಟ ಗಾಯಗಳಾಗಿದ್ದು ಕಲ್ಲೂರು ಹಾಗೂ ಮಾನ್ವಿ ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮಾನ್ವಿ ಪಟ್ಟಣದಲ್ಲಿನ ಲಾಯೋಲ ಶಿಕ್ಷಣ ಸಂಸ್ಥೆಯಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ
ಕುರ್ಡಿ,ಹೊಕ್ರಾಣಿ,ಕಂಬಳತಿ,ಕಪಗಲ್,ಭಾಗದ ವಿದ್ಯಾರ್ಥಿಗಳನ್ನು ಮಾನ್ವಿ ಶಾಲೆಗೆಕರೆದುಕೊಂಡು ಬರುತ್ತಿರುವಾಗ ಮಾನ್ವಿಯಿಂದ ರಾಯಚೂರು ಗೆ ಹೋಗುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಮುಖ ಮುಖಿ ಡಿಕ್ಕಿ ಸಂಭವಿಸಿರುವುದರಿಂದ ಈ ಅವಘಡ ನಡೆದಿದೆ.