ಸಿರುಗುಪ್ಪನಗರದಲ್ಲಿ ಇಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಸುಪ್ರಸಿದ್ಧ ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾ ಯಾತ್ರೆ

Vijayanagara Vani
ಸಿರುಗುಪ್ಪನಗರದಲ್ಲಿ ಇಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಸುಪ್ರಸಿದ್ಧ ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾ ಯಾತ್ರೆ

ಸಿರುಗುಪ್ಪ : ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನಡೆಯಲಿದೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಚೆನ್ನಬಸವ ತಿಳಿಸಿದರು.
ನಗರದ ನಿಟ್ಟೂರು ನರಸಿಂಹ ಮೂರ್ತಿ ಮೈದಾನದಲ್ಲಿ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ ಹತ್ತಿರ ಸೋಮವಾರ ಪತ್ರಿಕೆ ಪ್ರಕಟಣೆಗೆ ಮಾಹಿತಿ ನೀಡಿದರು.
ಗಣೇಶನಿಗೆ 9:50ಕ್ಕೆ ಗಣ ಪೂಜೆ, ಮಹಾಮಂಗಳಾರತಿ ಸಲ್ಲಿಸಿ, ಗುರುಬಸವ ಮಠಾಧಿಪತಿ ಬಸವಭೂಷಣ ಸ್ವಾಮಿಜೀ ಹಾಗೂ ಹಳೇಕೋಟೆ ಮರಿಸ್ವಾಮಿ ಮಠಾಧಿಪತಿ ಮರಿಸಿದ್ದಬಸವ ಸ್ವಾಮಿ ನೇತೃತ್ವದಲ್ಲಿ 10:30ಕ್ಕೆ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಕಲಾ ತಂಡ : ಶೋಭ ಯಾತ್ರೆಯಲ್ಲಿ ಧ್ವನಿವರ್ಧಕ ಕುಣಿತದೊಂದಿಗೆ ಮಂಗಳೂರಿನ ವಾಲಿವಿನೊಂದಿಗೆ ಚಂಡಿ ವಾದ್ಯ, ಕ್ಯಾದರಳ ಡ್ರಮ್ ಸೆಟ್, ಸಿರುಗುಪ್ಪ ಸ್ನೇಹಕಲಾ ಸಂಘದಿಂದ ಡೊಳ್ಳು ಕುಣಿತ, ಬಳ್ಳಾರಿಯಿಂದ ಜಂಬು ಡ್ರಮ್ ಸೆಟ್, ರಾಮಾಯಣದ ಪಾತ್ರಧಾರಿಗಳ ಛದ್ಮವೇಷಗಳು, ಹುಬ್ಬಳ್ಳಿಯಿಂದ ಮಲಕಂಬ ಸಾಹಸ ಪ್ರದರ್ಶನ ನೀಡಲಿದ್ದಾರೆ.
ಮಾರ್ಗ : ಮುಖ್ಯರಸ್ತೆಯಿಂದ ಕನಕದಾಸರ ವೃತ್ತ, ವಾಲ್ಮೀಕಿ ವೃತ್ತ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಮಹಾತ್ಮ ಗಾಂಧೀಜಿ ವೃತ್ತ, ಅಂಬೇಡ್ಕರ್ ವೃತ್ತ, ಪ್ಯಾಟೆ ಆಂಜನೇಯ ದೇವಸ್ಥಾನ ಮುಂಭಾಗ, ಅಂಬಿಗರ ಚೌಡಯ್ಯ ವೃತ್ತ, ಸೌಧಗರ ಮಸೀದಿ ಮುಂಭಾಗ, ಕಾಳಿಕಾ ದೇವಸ್ಥಾನ ಮುಂಭಾಗ, ಕೊಟ್ರಪ್ಪ ದೇವಸ್ಥಾನ ಮಾರ್ಗವಾಗಿ ಸಾಗಿ ಶಂಭುಲಿಂಗ ದೇವಸ್ಥಾನದ ಹತ್ತಿರ ಹರಿಯುವ ತುಂಗಭದ್ರಾ ನದಿಯಲ್ಲಿ ಸಂಜೆ 7 ಗಂಟೆಗೆ ಗಣೇಶ ಶೋಭಾಯಾತ್ರೆ ಮುಕ್ತಾಯಗೋಳಿಸಿ ವಿಸರ್ಜನೆ ನಡೆಸಲಾಗುವುದರು.
ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಶಾಂತಿ, ಶಿಸ್ತು, ಸಂಯಮ, ಸೌಹಾರ್ದ ಕಾಪಾಡುವಂತೆ ಈ ಮೂಲಕ ತಿಳಿಸಿದರು.

WhatsApp Group Join Now
Telegram Group Join Now
Share This Article
error: Content is protected !!