ಬಳ್ಳಾರಿ,ಸೆ.17
ಸರ್ಕಾರ ಮಾತ್ರ ವಲ್ಲದೆ ನಿಸ್ವಾರ್ಥ ಸೇವೆಯಿಂದ ಪ್ರತಿಯೊಬ್ಬರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಮುನಿರಾಜು ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪರೀಕ್ಷಾಂಗ ಮುಂಭಾಗದಲ್ಲಿ “ಕಲ್ಯಾಣ ಕರ್ನಾಟಕ ಉತ್ಸವ 2024” ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯೂ ಶೇ 10 ರಷ್ಟು ಹಣ ಮೀಸಲಿಡಬೇಕು. ಪ್ರಾಧ್ಯಾಪಕರು ಶೈಕ್ಷಣಿಕ ಅಭಿವೃದ್ಧಿಗೆ ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಡಾ. ರಾಜೇಂದ್ರ ಪ್ರಸಾದ್ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಅಸಂಖ್ಯಾತ ಹೋರಾಟಗಾರ ತ್ಯಾಗ ಬಲಿದಾನದ ಫಲವಾಗಿ ಕಲ್ಯಾಣ ಕರ್ನಾಟಕ ವಿಮೋಚನೆಯಾಗಿದೆ. ಜೆ.ಹೆಚ್. ಪಟೇಲರು 1998ರಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಣೆಮಾಡುತ್ತಾರೆ. ಮಾಜಿ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡುತ್ತಾರೆ. ಹೈದ್ರಾಬಾದ್ ಕರ್ನಾಟಕ ಕುರಿತಾಗಿ ಕಾರ್ಯಾಗಾರವನ್ನು ಮುಂಬರುವ ದಿನಗಳಲ್ಲಿ ಆಯೋಜಿಸುವುದಾಗಿ ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್. ಎನ್. ರುದ್ರೇಶ ಮಾತನಾಡಿ, ವಿಶಿಷ್ಟವಾದ ಸಾಂಸ್ಕೃತಿಕ ನೆಲೆಗಟ್ಟುಗಳನ್ನು ನೀಡಿದಂತಹ ಮಹಾನ ವ್ಯಕ್ತಿಗಳ ನಾಡು ನಮ್ಮದು. ಕಲಬರುಗಿ ಸೇರಿದಂತೆ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಹೈದ್ರಾಬಾದ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕರ್ನಾಟಕವನ್ನು ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ ಅಭಿವೃದ್ದಿಗೆ ಒತ್ತು ನೀಡಲಾಯಿತು. ಎಲ್ಲರೂ ಜಾತಿ, ಧರ್ಮ ಮೀರಿ ಒಗ್ಗಟ್ಟಾಗಿ ಶ್ರಮಿಸಿದಾಗ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ವಿವಿಯ ಆಂಗ್ಲ ಮತ್ತು ನಾಟಕ ವಿಭಾಗದ ಪ್ರೊ. ಶಾಂತನಾಯ್ಕ್ ಮಾತನಾಡಿ, ಸಹಸ್ರ ಹೋರಾಟಗಾರ ತ್ಯಾಗ, ಬಲಿದಾನಗಳಿಂದ ಕಲ್ಯಾಣ ಕರ್ನಾಟಕದ ವಿಮೋಚನಾ ಹೋರಾಟವು ಅಚ್ಚಳಿಯದ ಇತಿಹಾಸವಾಗಿ ಉಳಿದಿದೆ ಎಂದು ಹೇಳಿದರು.
ಬ್ರಿಟಿಷರಿಂದ ಭಾರತ ಸ್ವತಂತ್ರವಾಗಿ ಒಂದು ವರ್ಷದ ಬಳಿದ ಹೈದ್ರಾಬಾದ್ ಕರ್ನಾಟಕಕ್ಕೆ ಸ್ವತಂತ್ರ ದೊರೆತಿದ್ದ ದಿನವನ್ನು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಎಂದು ಆಚರಣೆ ಮಾಡಲಾಗುತ್ತಿದೆ. ಬ್ರಿಟಿಷರು ಸ್ವತಂತ್ರ ನೀಡುವ ಸಂದರ್ಭದಲ್ಲಿ ವಿವಿಧ ರಾಜಮನೆತನಗಳ 562 ಸಂಸ್ಥಾನಗಳು ದೇಶದಲ್ಲಿದ್ದವು. ಹೈದರಾಬಾದ್ ನಿಜಾಮರು ಮಾತ್ರ ಸ್ವತಂತ್ರವಾಗಿರಲು ಬಯಸಿ ರಾಜ ಪ್ರಭುತ್ವದ ಆಡಳಿತವನ್ನು ಮುಂದುವರಿಸಲು ನಿರ್ಧರಿಸಿದ್ದರು. ಹೈದ್ರಾಬಾದ್ ಕರ್ನಾಟಕವು ಸರ್ದಾರ ವಲ್ಲಭಾಯಿ ಪಟೇಲರ ದೃಡಸಂಕಲ್ಪದಿಂದ ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಯಿತು ಎಂದರು.
ಕಾರ್ಯಕ್ರಮದ ಸಂಯೋಜಕರೂ ಹಾಗೂ ಇತಿಹಾಸ ಮತ್ತು ಪುರಾತತ್ವ ವಿಭಾಗ ಮತ್ತು ಸಿ.ಡಿ.ಸಿ. ನಿರ್ದೇಶಕರಾದ ಡಾ. ಎಚ್. ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯಶಾಸ್ತ ವಿಭಾಗದ ಮುಖ್ಯಸ್ಥರಾದ ಡಾ. ಮೋಹನದಾಸ್ ಅತಿಥಿಗಳನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಶಶಿಧರ್ ಕೆಲ್ಲೂರ್ ನಿರೂಪಿಸಿದರು. ಡಾ.ಸಂತೋಷ ವಂದಿಸಿದರು. ವಿವಿಧ ನಿಕಾಯದ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ