ಕೊಪ್ಪಳ
ಮುಡಾ ಹಗರಣದ ಹಗರಣಕ್ಕೆ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಮಂಗಳವಾರದ೦ದು ಸಂಜೆ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಿ ಸಿಎಂ ರಾಜಿನಾಮೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿ.ಪ ಸದಸ್ಯ ಹೇಮಲತಾ ನಾಯಕ್ ಮಾತನಾಡಿ ರಾಜ್ಯದ ಮುಖ್ಯಮಂತ್ರ ಸಿದ್ದರಾಮಯ್ಯನವರು ನೇತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಹಾಗೂ ಕಾಂಗ್ರೆಸ್ ನಡೆಸಿದ ಹಗರಣವನ್ನು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ್ಯ ಕ್ಯಾವಟರ್ ಮಾತನಾಡಿ ಮುಖ್ಯಮಂತ್ರಿಗಳ ತಪ್ಪು ಮತ್ತೆ ಸಾಭಿತಾಗಿದ್ದು ರಾಜ್ಯದ ಮಾನ ಉಳಿಸಲು ಅವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕೊಪ್ಪಳ ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್ ಗುಳಗಣ್ಣವರ್, ಮುಖಂಡರಾದ ಗಣೇಶ್ ಹೊರಟ್ನಾಳ್, ವಾಣಿಶ್ರೀ ಮರ್, ಎಸ್.ಎಸ್.ಭೂಸನೂರಮಠ ವಕೀಲರು, ಆರ್.ಬಿ.ಪಾನಘಂಟಿ ವಕೀಲರು, ಸುನಿಲ್ ಹೆಸರೂರು, ರಮೇಶ್ ಕವಲೂರು, ಸೋಮಣ್ಣ ಹಳ್ಳಿ, ಪ್ರಭುರಾಜ, ರಮೇಶ ತುಪ್ಪದ, ಶಿವಕುಮಾರ ಕುಕನೂರ ಸೇರಿದಂತೆ ಅನೇಕ ಮುಖಂಡರು ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.