Ad image

ಶೈಲ ಪುತ್ರಿ ( ನವರಾತ್ರಿಯ ಮೊದಲ ದಿನ )

Vijayanagara Vani
ಶೈಲ ಪುತ್ರಿ ( ನವರಾತ್ರಿಯ ಮೊದಲ ದಿನ )

ನವರಾತ್ರಿ ಇಲ್ಲವೆ ದಸರಾ ಎಂದು ಕರೆಯಲ್ಪಡುವ ಈ ಹಬ್ಬದಲ್ಲಿ ನಾವು ಶಕ್ತಿ ದೇವತೆ ದೇವಿಯನ್ನು ಒಂಬತ್ತು ಬೇರೆ ಬೇರೆ ವಿಧದ ರೂಪಗಳಲ್ಲಿ ಪೂಜಿಸುತ್ತೇವೆ. ಹರಿಹರ ಬ್ರಹ್ಮಾದಿಗಳನ್ನು ಸೃಷ್ಟಿಸಿದ ದೇವಿಯು ಅವರಿಗೆ ಶೈಲ ಪುತ್ರಿ ( ನವರಾತ್ರಿಯ ಮೊದಲ ದಿನ)ಈ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು
ನಿರ್ವಹಿಸಲು ಆದೇಶಿಸಿದಳು.
ಹರಿಹರ ಬ್ರಹ್ಮಾದಿಗಳು ದೇವಿಯ ಆದೇಶದಂತೆ ತಮ್ಮ ಶೈಲ ಪುತ್ರಿ ( ನವರಾತ್ರಿಯ ಮೊದಲ ದಿನ )ಕಾರ್ಯವನ್ನು ನೆರವೇರಿಸುತ್ತಿದ್ದರೂ ಆಗಾಗ ಬಂದೊದಗುವ ವಿಘ್ನಗಳನ್ನು, ರಾಕ್ಷಸರನ್ನು ನಿವಾರಿಸಲು ಶ್ರೀದೇವಿಯಿಂದಲೇ ಸಾಧ್ಯವಾಗಿದ್ದು ಆಕೆ ಮಾತೃ ಸ್ವರೂಪಳು.
ಸ್ತ್ರೀ ಕುಲದ ಪಾರಮ್ಯವನ್ನು ಸೂಚಿಸುವ ಈ ನವರಾತ್ರಿಯ ಹಬ್ಬದಲ್ಲಿ ಶಕ್ತಿ ಸ್ವರೂಪಿಣಿ ದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆ.
ಪ್ರಥಮಂ ಶೈಲ ಪುತ್ರಿಚ,ದ್ವಿತೀಯಂ ಬ್ರಹ್ಮಚಾರಿಣಿ  ತೃತೀಯಂ ಚಂದ್ರಘ0ಟೇತಿ,ಕೂಶ್ಮಾಂಡೇತಿ ಚತುರ್ಥಕಂ.
ಪಂಚಮಂ ಸ್ಕಂದ ಮಾತೇ ತೀ,ಷಷ್ಠಂ  ಕಾತ್ಯಾಯನೀತಿ ಚ
ಸಪ್ತಮಂ ಕಾಲರೇತಿಚ,ಮಹಾ ಗೌರಿತಿ ಚಾಷ್ಟಮಂ
ನವಮಂ ಸಿದ್ದಿ ಧಾತ್ರಿಚ,ನವದುರ್ಗ ಪ್ರಕೀರ್ತಿತಹ ಉಕ್ತಾನೇತ್ಯಾನಿ ನಾಮಾನಿ,ಬ್ರಹ್ಮಣ್ಣೈವ ಮಹಾತ್ಯನಾ
ಅಗ್ನಿನಾ ದಹ್ಯ ಮಾನಸ್ತು ಶತ್ರು ಮಧ್ಯೆ ಗತೋರಣೆ  ವಿಷಮೆ ದುರ್ಗವೇ ಚೈವ ಭಯಾರ್ಥಾ ಶರಣಂ ಗತಹ
ನವರಾತ್ರಿಯ ಪ್ರಥಮ ದಿವಸ ಶೈಲ ಪುತ್ರಿಯನ್ನು ಪೂಜಿಸುವರು. ಶೈಲ ಪುತ್ರಿಯು ಹೆಸರೇ ಹೇಳುವಂತೆ ಹಿಮವಂತನ ಮಗಳಾಗಿದ್ದು ತಾಯಿ ದುರ್ಗೆಯ ಮೊದಲ ಪುನರ್ಜನ್ಮವಾಗಿದ್ದಾಳೆ. ಹಳದಿ ವರ್ಣದ ಬಟ್ಟೆಯನ್ನು ಧರಿಸಿದ್ದು ಶುದ್ಧತೆ ಮತ್ತು ಪ್ರಕೃತಿಯ ಪ್ರತೀಕವಾಗಿರುವ ಆಕೆ, ಶೂಲವನ್ನು ಕೈಯಲ್ಲಿ ಹಿಡಿದು  ವೃಷಭಾರೂಢಳಾಗಿದ್ದಾಳೆ . ಹಳದಿ ಬಣ್ಣವು ಚೈತನ್ಯ ಮತ್ತು ಶಾಂತಿ ಸಮಾಧಾನಗಳ ಸಂಕೇತವಾಗಿದ್ದು ಬ್ರಾಹ್ಮಿ ಮುಹೂರ್ತದಲ್ಲಿ ಶುಬ್ರಸ್ನಾತರಾಗಿ ಹಳದಿ ಬಟ್ಟೆಗಳನ್ನು ಧರಿಸಿ ದೇವಿಯನ್ನು ಪೂಜಿಸಿ ಆಕೆಯ ಕೃಪೆಗೆ ಪಾತ್ರರಾಗಬೇಕು.
ವಂದೇ ವಾಂಚಿತ ಲಾಭಾಯ,ಚಂದ್ರಾರ್ಥಕೃತ ಶೇಖರಾಂ
ವೃಷಾರೂಢಮ್ ಶೂಲ ಧರಾಂ, ಶೈಲ ಪುತ್ರಿ ಯಶಸ್ವಿನಿಂ
ಎಂಬ ಮಂತ್ರವನ್ನು ಜಪಿಸುತ್ತಾ ದೇವಿಯನ್ನು ಪೂಜಿಸಬೇಕು.

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ.

Share This Article
error: Content is protected !!
";