Ad image

ಕೂಷ್ಮಾಂಡಾ ದೇವಿ ನವರಾತ್ರಿಯ ನಾಲ್ಕನೇ ದಿನ  

Vijayanagara Vani
ಕೂಷ್ಮಾಂಡಾ ದೇವಿ ನವರಾತ್ರಿಯ ನಾಲ್ಕನೇ ದಿನ   

ನವರಾತ್ರಿಯ ನಾಲ್ಕನೇ ದಿನ ತಾಯಿ ಪಾರ್ವತಿಯನ್ನು ಕೂಷ್ಮಾಂಡಾ ದೇವಿಯ ಅವತಾರದಲ್ಲಿ ಪೂಜಿಸುತ್ತಾರೆ. ಅನಾಹತ ಚಕ್ರ ಇಲ್ಲವೇ ಹೃದಯ ಚಕ್ರವನ್ನು ಹೊಂದಿರುವ ದೇವಿಯು

ಎಂಟು ಕೈಗಳನ್ನು ಹೊಂದಿದ್ದು ಅಷ್ಟ ಭುಜದೇವಿ, ವೈಷ್ಣವಿ ಎಂದು ಕೂಡ ಕರೆಯಲ್ಪಡುತ್ತಾಳೆ.

ಆಕೆಯ ಹೆಸರಿನ ‘ಕೂ’ ಎಂಬ ಅಕ್ಷರವು ‘ಸ್ವಲ್ಪ’ ಎಂದು
‘ ಉಶ್ಮಾ’ ಎಂಬ ಅಕ್ಷರವು ಅಕ್ಷರವು ಬೆಚ್ಚಗಿನ ಇಲ್ಲವೇ ಚೈತನ್ಯ ಶಕ್ತಿ ಎಂದು ಅಂಡ ಎಂದರೆ ಶಕ್ತಿಯುತವಾದ ತತ್ತಿ ಇಲ್ಲವೇ ಬೀಜ ಎಂದು ಹೇಳಬಹುದು. ಸಿದ್ದಿ ಮತ್ತು ಬುದ್ಧಿಯರು ಆಕೆಯ ಜಪಮಾಲೆಯಲ್ಲಿ ಸ್ಥಿತರಾಗಿದ್ದಾರೆ ಎಂದು ಹೇಳುವರು.

ಕೂಷ್ಮಾಂಡಾ ದೇವಿಯು ಬ್ರಹ್ಮಾಂಡವನ್ನು ಸೃಷ್ಟಿಸಿದ್ದು ಆಕೆಯು ಬಿಳಿಯ ವರ್ಣದ ಕುಂಬಳಕಾಯಿಯನ್ನು ಇಷ್ಟಪಡುವ ಕಾರಣ ಆಕೆಯ ಹೆಸರಿನ ಜೊತೆಗೆ ಬ್ರಹ್ಮಾಂಡವು ಸೇರಿ ಕೂಷ್ಮಾಂಡ ಎಂದಾಗಿದೆ. ಶಂಖ, ಚಕ್ರ, ಖಡ್ಗ, ಬಿಲ್ಲು ಬಾಣಗಳನ್ನು ಧರಿಸಿರುವ ಆಕೆಯ ಎರಡು ಕೈಗಳಲ್ಲಿ ಎರಡು ಕಳಶಗಳಿದ್ದು ಒಂದರಲ್ಲಿ ಅಮೃತ ಮತ್ತು ಇನ್ನೊಂದರಲ್ಲಿ ರಕ್ತವು ತುಂಬಿದೆ.

ಸಿಂಹ ವಾಹಿನಿಯಾಗಿರುವ ಕೂಷ್ಮಾಂಡ ದೇವಿಯು
ಗಾಢಾಂಧಕಾರದಲ್ಲಿ ಬೆಳಕನ್ನು ಹೊತ್ತು ಈ ಜಗತ್ತನ್ನು ಬೆಳಗಲು ಬಂದವಳು. ಸದಾ ನಗೆಯನ್ನು ಚೆಲ್ಲುವ, ಬೆಳಕು ಮತ್ತು ಚೈತನ್ಯ ಶಕ್ತಿಯ ಅಧಿದೇವತೆಯಾಗಿದ್ದಾಳೆ ಕೂಷ್ಮಾಂಡಾದೇವಿ. ತನ್ನ ಭಕ್ತರಿಗೆ ಆರೋಗ್ಯ, ಶಕ್ತಿ ಮತ್ತು ಧೈರ್ಯವನ್ನು ಕೊಡುವ ಕೂಷ್ಮಾಂಡಾದೇವಿ ಕೇಸರಿ ವರ್ಣವನ್ನು ಪ್ರತಿನಿಧಿಸುತ್ತಾಳೆ.

ಸುರಾ ಸಂಪೂರ್ಣ ಕಲಶಂ ರುಧಿರಾ ವ್ರತ ಮೇವ ಚ
ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೆ

ಜಗತ್ತನ್ನು ಸೃಷ್ಟಿಸಿರುವ ಸತ್, ಚಿತ್, ಆನಂದಮೂರ್ತಿಯಾಗಿರುವ ಕೂಷ್ಮಾಂಡಾ ದೇವಿಯನ್ನು ಪೂಜಿಸಿ ಭಕ್ತರು ಉತ್ತಮ ಆರೋಗ್ಯ ಶಕ್ತಿ ಮತ್ತು ಧೈರ್ಯವನ್ನು ಪಡೆಯುತ್ತಾರೆ.

ಯಾ ದೇವಿ ಸರ್ವಭೂತೇಶು ಲಜ್ಜಾ ರೂಪೇಣ ಸಂಸ್ಥಿತ
ನಮಸ್ತಸ್ಸ್ಯೇ ನಮಸ್ತಸ್ಯೆ ನಮಸ್ತಸ್ಸ್ಯೇ ನಮೋ ನಮಃ

ಎಂಬ ಮಂತ್ರವನ್ನು ಹೇಳಿಕೊಂಡು ದೇವಿಯನ್ನು ಪೂಜಿಸಬೇಕು. ವೈಷ್ಣವಿ ರೂಪಿಣಿಯಾಗಿರುವ, ಸ್ತ್ರೀ ಶಕ್ತಿಯ ಪಾರಮ್ಯವನ್ನು ಸಾರುವ ಕೂಷ್ಮಾಂಡ ದೇವಿಯು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.

ಓಂ ಹ್ರೀಂ ಶ್ರೀ0 ಕೂಷ್ಮಾಂಡಾಯೇ ನಮಃ

ಎಲ್ಲರಿಗೂ ನವರಾತ್ರಿ ಹಬ್ಬದ ನಾಲ್ಕನೇ ದಿನದ ಶುಭಾಶಯಗಳು

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";