Ad image

ಮಳೆಗಾಲದಲ್ಲೂ ಒಂದು ಎಳನೀರಿಗೆ 60-70 ರೂ., ಗ್ರಾಹಕರಿಗೆ ತಟ್ಟುತ್ತಿದೆ ಬೆಲೆ ಏರಿಕೆಯ ಬಿಸಿ.

Vijayanagara Vani
ಮಳೆಗಾಲದಲ್ಲೂ ಒಂದು ಎಳನೀರಿಗೆ 60-70 ರೂ., ಗ್ರಾಹಕರಿಗೆ ತಟ್ಟುತ್ತಿದೆ ಬೆಲೆ ಏರಿಕೆಯ ಬಿಸಿ.

ಗಂಗಾವತಿ: ಬೇಸಿಗೆಯಲ್ಲಿ ಎಳನೀರಿಗೆ ಬೇಡಿಕೆಯಿರುತ್ತದೆ. ಆಗ ದರ ಹೆಚ್ಚಾಗುವುದರಲ್ಲಿ ಆಶ್ಚರ್ಯವಿಲ್ಲ. ಆದರೆ, ಮಳೆಗಾಲದಲ್ಲೇ ಎಳನೀರು ದರ 60 – 70 ರೂ.ಗೆ ಏರಿಕೆಯಾಗಿದ್ದು, ಗ್ರಾಹಕರಿಗೆ ಎಳನೀರಿನ ಬೆಲೆ ಏರಿಕೆಯ ಬಿಸಿ ತಟ್ಟಿದೆ.ಪ್ರತಿ ವರ್ಷ ಮಳೆಗಾಲದಲ್ಲಿ ಒಂದು ಎಳನೀರು 30 ರಿಂದ 40 ರೂ.ನಂತೆ ಮಾರಾಟವಾಗುತ್ತಿತ್ತು. ಆದರೆ ಈ ವರ್ಷ ಬೇಸಿಗೆಗಿಂತ ಮಳೆಗಾಲದಲ್ಲೇ ದುಬಾರಿಯಾಗಿದೆ. ಚಳಿಯ ವಾತಾವರಣದಲ್ಲಿ ಎಳನೀರು ಕುಡಿಯುವವರ ಸಂಖ್ಯೆಕಡಿಮೆಯಿರುತ್ತದೆ.
ಹೀಗಾಗಿ, ಬೆಲೆಗಳೂ ಕಡಿಮೆಯಿರುತ್ತಿದ್ದವು.ಆದರೆ ಇತ್ತೀಚಿನ ದಿನಗಳಲ್ಲಿ ಎಳನೀರು ದೇಹಕ್ಕೆ ತಂಪು ನೀಡುತ್ತದೆ ಎಂಬ ಕಾರಣಕ್ಕೆ ಎಲ್ಲಾ ಕಾಲದಲ್ಲೂ ಎಳನೀರು ಬಳಸುತ್ತಾರೆ. ಹೀಗಾಗಿ ಇದೀಗ ಸರಬರಾಜು ಕಡಿಮೆಯಾಗಿರುವುದರಿಂದ ಬೆಲೆಗಳು ಏರಿಕೆಯಾಗಿವೆ. ಮಳೆಗಾಲದವರೆಗೂ ಒಂದೇ ಬೆಲೆ ಇದೆ. ತೆಂಗಿನಕಾಯಿ 20ರಿಂದ 25 ರೂ.ನಂತೆ ಮಾರಾಟವಾಗುತ್ತಿತ್ತು. ಆದರೆ, ಈಗ 30 ರಿಂದ 40 ರೂ. ದರದಲ್ಲಿ ಮಾರಾಟವಾಗುತ್ತಿದೆ. ದಸರಾ – ದೀಪಾವಳಿಗೆ ಮತ್ತಷ್ಟು ದರಗಳು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ನಾನಾ ಜಿಲ್ಲೆಗಳಿಂದ ಎಳನೀರು ಆಗಮನಆರೋಗ್ಯಕರವಾದ ಎಳನೀರಿಗೆ ಹೆಚ್ಚು ಬೇಡಿಕೆ ಇದ್ದು, ಎಲ್ಲ ಋುತುವಿನಲ್ಲೂ ದರ ಹೆಚ್ಚಿರುತ್ತದೆ.
ಹಿಂದಿನ ಬೇಸಿಗೆಯಲ್ಲಿ ಬಿಸಿಲಿನ ಝಳ ಹೆಚ್ಚಾಗಿತ್ತು. ಇದರಿಂದ ತೆಂಗಿನ ಇಳುವರಿ ಕುಂಠಿತಗೊಂಡಿದೆ.ಎಳನೀರು ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವ ಕಾರಣ ದರ ಹೆಚ್ಚಳವಾಗಿದೆ ಎನ್ನುವುದು ವ್ಯಾಪಾರಿಗಳ ಮಾತು.ನಗರಕ್ಕೆ ಸಾಮಾನ್ಯವಾಗಿ ಚಾಮರಾಜನಗರ, ಮಂಡ್ಯ, ಹಾಸನ ಮತ್ತು ತುಮಕೂರು ಭಾಗದಿಂದ ಎಳನೀರು ಪೂರೈಕೆಯಾಗುತ್ತಿತ್ತು. ಆದರೆ, ಸತತ ಎರಡು ವರ್ಷಗಳ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಹಲವು ಜಮೀನುಗಳಲ್ಲಿ ಕೊಳವೆ ಬಾವಿಗಳಲ್ಲಿಯೂ ನೀರು ಬಾರದ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆಯಿಂದಾಗಿ ಇಳುವರಿ ಕಡಿಮೆಯಾಗಿದೆ.ಹಾಗಾಗಿ, ಮೊದಲಿನಷ್ಟು ಎಳನೀರು ಪೂರೈಕೆಯಾಗುತ್ತಿಲ್ಲ ಎಂಬುದು ಎಳೆನೀರು ವ್ಯಾಪಾರಿಗಳ ಅಭಿಪ್ರಾಯ.

Share This Article
error: Content is protected !!
";